Shivamogga Co-Op Milk Producer’s Societies Union Ltd ಮಾಚೇನಹಳ್ಳಿಯಲ್ಲಿರುವ ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ಇದರ ಆಡಳಿತ ಮಂಡಲಿ ಸದಸ್ಯರ ಆಯ್ಕೆಗೆ ನಡೆಯಲಿರುವ ಚುನಾವಣೆಯಲ್ಲಿ ಆರ್.ಎಂ.ಮಂಜುನಾಥ ಗೌಡ ಬಿನ್ ರಾಮಪ್ಪಗೌಡ ಇವರ ಪ್ರತಿನಿಧಿತ್ವವನ್ನು ಪರಿಗಣಿಸಬಾರದು.
ಶಿಮುಲ್ ಚುನಾವಣೆ ಪಾರದರ್ಶಕವಾಗಿ ನಡೆಸಬೇಕೆಂದು ಬಿಜೆಪಿ ಮುಖಂಡರು ಜಿಲ್ಲಾಧಿಕಾರಿಗೆ ಬುಧವಾರ ಮನವಿ ಸಲ್ಲಿಸಿದ್ದಾರೆ.
ಮಂಜುನಾಥಗೌಡ ಇವರು ಶಿವಮೊಗ್ಗ ತಾಲೂಕು ಕಲ್ಲುಕೊಪ್ಪ ಹಾಲು ಉತ್ಪಾದಕರ ಸಹಕಾರ ಸಂಘದ ಆಡಳಿತ ಮಂಡಲಿ ನಿರ್ದೇಶಕರಾಗಿರುವುದು ಅನೂರ್ಜಿತವಾಗಿದೆ. ಶಿಮುಲ್‌ಗೆ ಪ್ರತಿನಿಧಿ ಆಗಲು ಕಾನೂನಿನಲ್ಲಿ ಇದಕ್ಕೆ ಯಾವುದೇ ಅವಕಾಶ ಇಲ್ಲ. ಸುರೇಶ ಎನ್ನುವವರು 2023ರ ಡಿ. 20ರಂದು ಕಲ್ಲುಕೊಪ್ಪ ಹಾಲು ಸಂಘಕ್ಕೆ ತಮ್ಮ ನಿರ್ದೇಶಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಕಾರ್ಯಕಾರಿ ಸಮಿತಿ ಸಭೆಯಲ್ಲಿ ಇದು ಅಂಗೀಕಾರವಾಗಿದೆ.
ಈ ಸಭೆಯ ಸಂದರ್ಭದಲ್ಲಿ ಸುರೇಶ ಹಾಜರಿದ್ದು, ಹಾಜರಾತಿ ಪುಸ್ತಕಕ್ಕೆ ಸಹಿ ಮಾಡಿದ್ದಾರೆ.
ಇದು ಸಹಕಾರ ಸಂಘಗಳ ಕಾಯ್ದೆ ೧೯೫೯, ಕಲಂ ೨೯-ಬಿ ಉಲ್ಲಂಘನೆಯಾಗಿದೆ ಎಂದಿದ್ದಾರೆ.
ಸುರೇಶ ರಾಜಿನಾಮೆ ವಿ?ಯವನ್ನು ಮುಖ್ಯ ಕಾರ್ಯಸೂಚಿಯಲ್ಲಿ ತಾರದೇ ಇರುವುದು ಸಹಕಾರ ಸಂಘಗಳ ಕಾಯ್ದೆ ೧೯೫೯, ನಿಯಮಗಳು ೧೯೬೦, ನಿಯಮ ೧೪-ಎಕೆ(೬)ಉಲ್ಲಂಘನೆಯಾಗಿದೆ.ಮಂಜುನಾಥಗೌಡ ಇವರನ್ನು ನಿರ್ದೇಶಕರಾಗಿ ಕೋ-ಆಪ್ಸ್ ಮಾಡಿಕೊಂಡಿರುವುದು ಕೂಡ ಮುಖ್ಯ ಕಾರ್ಯಸೂಚಿಯಲ್ಲಿತಾರದೇ ಇರುವುದು ಸಹಕಾರ೧೯೬೦, ನಿಯಮ ೧೪-೨(೬) ಸಂಘಗಳ ಕಾಯ್ದೆ ೧೯೫೯, ನಿಯಮಗಳು ಉಲ್ಲಂಘನೆಯಾಗುತ್ತದೆ ಎಂದು ಮನವಿಯಲ್ಲಿ ವಿವರಿಸಿದ್ದಾರೆ.
Shivamogga Co-Op Milk Producer’s Societies Union Ltd ಸಹಕಾರ ಸಂಘಗಳ ಕಾಯ್ದೆ ಕಲಂ ೨೯-ಇ ಪ್ರಕಾರ ಮಂಡಲಿಯ ಉಳಿದ ಪದಾವಧಿಯು ಅದರ ಮೂಲ ಪದಾವಧಿಯ ಅರ್ಧಕ್ಕಿಂತ ಹೆಚ್ಚು ಇದ್ದರೆ, ಖಾಲಿ ಸ್ಥಾನವನ್ನು ಭರ್ತಿ ಮಾಡಲು ಚುನಾವಣೆಯನ್ನು ನಡೆಸತಕ್ಕದು ಎಂದಿದ್ದು, ಈ ಆಡಳಿತ ಮಂಡಲಿಯ ಚುನಾವಣೆಯು ದಿನಾಂಕ ೦೪-೦೧-೨೦೨೨ರ ಜನವರಿ ೪ಕ್ಕೆ ನಡೆದಿದೆ., ರಾಜೀನಾಮ ೨೦೨೩ರ ಡಿ. ೨೦ ಆಗಿದೆ. ಉಳಿದ ಪದಾವಧಿಯು ಅರ್ಧಕ್ಕಿಂತ ಹೆಚ್ಚು ಇರುವುದರಿಂದ ಚುನಾವಣೆ ನಡೆಸಬೇಕು.
ನಿಯಮ ೧೪-ಎಎಫ್ ಪ್ರಕಾರ ೬೦ ದಿನಗಳೊಳಗೆ ಚುನಾವಣೆ ನಡೆಸಬೇಕಾಗಿದ್ದು, ಚುನಾವಣೆಯು ನಡೆದಿಲ್ಲ ಎಂದು ವಿವರಿಸಿದ್ದಾರೆ..
ಈ ವರ್ಷದ ಮಾ. ೧೫ರ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಶಿಮುಲ್‌ನ ಆಡಳಿತ ಮಂಡಲಿ ಚುನಾವಣೆಗೆ ಪ್ರತಿನಿಧಿ ಆಗಿ ನಿರ್ದೇಶಕ ಲೋಕೇಶ್ ಹೆಸರನ್ನು ಸೂಚಿಸಿದ್ದು, ಆದರೆ, ನಡಾವಳಿಯಲ್ಲಿ ಆರ್.ಎಂ.ಮಂಜುನಾಥಗೌಡ ಹೆಸರು ನಮೂದಾಗಿದೆ ಎಂದಿದ್ದಾರೆ.
ಮನವಿ ಸಲ್ಲಿಕೆ ವೇಳೆ ತ್ಯಾಜ್ಯವಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಟಿ.ಬಿ.ಜಗದೀಶ್, ಸಹಕಾರಿ ಕ್ಷೇತ್ರದ ಪ್ರಮುಖರಾದ ಎಸ್.ಹೆಚ್.?ಣ್ಮುಖಪ್ಪ, ಹೆಚ್.ಈ.ಗಡ್ಲಬಸಪ್ಪ, ಈಶ್ವರಪ್ಪ, ಎಸ್.ಜಿ.ಮಲ್ಲಿಕಾರ್ಜುನ್, ಚಂದ್ರು ಹಾಗೂ ಪ್ರಾಥಮಿಕ ಸಹಕಾರ ಸಂಘದ ನಿರ್ದೇಶಕರಾದ ಹೆಚ್.ಬಿ.ನಂದೀಶ್, ಬಿ.ಟಿ.ಈಶ್ವರಪ್ಪ, ಹೆಚ್.ವಿ.ಅರುಣ್ ಉಪಸ್ಥಿತರಿದ್ದರು.