Mathura Paradise ಮಥುರ ಪ್ಯಾರಡೈಸ್ ರಜತೋತ್ಸವ ಪ್ರಯುಕ್ತ ವಷವಿಡೀಕಾರ್ಯಕ್ರಮ
೧೯೯೧ರಲ್ಲಿ ಪ್ರಾಂಭವಾದ ಮಥುರ ಪ್ಯಾರಡೈಸ್ ನಗರದಲ್ಲಿ ಮೊದಲ ಬಾರಿಗೆ ಹಾಲ್ ಬಾಡಿಗೆ ಇಲ್ಲದೆ ಕಾರ್ಯಕ್ರಮಗಳಿಗೆ ಸ್ಥಳಾವಕಾಶ ನೀಡುವ ಸೌಲಭ್ಯ ಪ್ರಾರಂಭಿಸಿದವರು. ಅಂದು ಒಂದು ಊಟದ ಬೆಲೆ ೩೦ ರೂಪಾಯಿಗಳು. ಕೇವಲ ಮೂರು ಸಾವಿರ ರೂಪಾಯಿಗಳ ವೆಚ್ಚದಲ್ಲಿ ನೂರು ಜನರಿಗೆ ಕಾರ್ಯಕ್ರಮ ಏರ್ಪಡಿಸುವ ಸುಲಭ ವಿಧಾನ ಹಲವರಿಗೆ ವರದಾನವಾಯಿತು. ನಾಮಕರಣ, ಸೀಮಂತ, ಹುಟ್ಟುಹಬ್ಬ, ತೊಟ್ಟಿಲ ಶಾಸ್ತ್ರದಿಂದ ಹಿಡಿದು ವಿವಾಹ ಮಹೋತ್ಸವದವರೆಗೂ ಕಾರ್ಯಕ್ರಮಗಳು ಸುಲಲಿತವಾಗಿ ನಡೆದ ತೃಪ್ತಿ ಜನ ಮಾನಸದಲ್ಲಿ ಬೆಳೆಸಿತು. ಇಂತಹ ಸಾರ್ವಜನಿಕರ ಸೇವೆಯನ್ನು ಪ್ರಪ್ರಥಮ ಬಾರಿಗೆ ಶಿವಮೊಗ್ಗ ನಗರದಲ್ಲಿ ಸ್ಥಾಪಿಸಿ ಜನ ಸಾಮಾನ್ಯರಿಗಾಗಿ ಹೋಟೆಲ್ ಉದ್ಯಮದಲ್ಲಿ ದೊಡ್ಡದೊಂದು ಕನಸು ಕಂಡು, ನನಸು ಮಾಡಬಹುದೆಂದು ಹಲವರಿಗೆ ಸ್ಫೂರ್ತಿಯಾಗಿ, ಮಾದರಿಯಾಗಿ ನಿಂತವರು ಶ್ರೀ ಎನ್. ಗೋಪಿನಾಥ್.
ಈಗ ಮಥುರ ಪ್ಯಾರಡೈಸ್ ಪ್ರಾರಂಭವಾಗಿ ೨೫ ವರ್ಷಗಳು ತುಂಬಿವೆ. ಮಥುರ ಪ್ಯಾರಡೈಸ್ ಅಂದರೆ ತಕ್ಷಣ ಎಲ್ಲರಿಗೂ ನೆನಪಾಗುವ ಹೆಸರು ಗೋಪಿ, ಮಥುರ ಪ್ಯಾರಡೈಸ್ ಹಲವಾರು ಸಂಘ ಸಂಸ್ಥೆಗಳಿಗೆ ತವರುಮನೆ ಇದ್ದಂತೆ. ಇಲ್ಲಿ ಪ್ರತಿನಿತ್ಯ ಒಂದಲ್ಲಾ ಒಂದು ಸಂಘ-ಸAಸ್ಥೆಯವರು ಸಭೆ ಸಮಾರಂಭ ನಡೆಸುತ್ತಾರೆ. ಪತ್ರಿಕಾ ಗೋಷ್ಠಿಯನ್ನು ಕೂಡ ಇಲ್ಲಿ ಹಮ್ಮಿಕೊಳ್ಳಲಾಗುತ್ತಿತ್ತು. ಗೋಪಿಯ ಉಪಚಾರ ಸ್ನೇಹ ಮನೋಭಾವನೆ ಸಲಹೆ ಸಹಕಾರ ಯಾರೊಬ್ಬರೂ ಮರೆಯುವಂತಿಲ್ಲ ಎಂದು ಮಥುರ ಪ್ಯಾರಡೈಸ್ ರಜತೋತ್ಸವ ಸಮಿತಿಯ ಅಧ್ಯಕ್ಷ ವಸಂತ್ ಹೋಬಳಿದಾರ್ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು.
ಅವರ ಈ ಅಭಿಮಾನದಿಂದ ನಗರದ ಸುಮಾರು ೫೦ಕ್ಕೂ ಹೆಚ್ಚು ಸಂಘ ಸಂಸ್ಥೆಗಳು ಒಂದು ವರ್ಷಕಾಲ ಸ್ವಯಂಪ್ರೇರಿತವಾಗಿ ‘ಮಥುರ ಪ್ಯಾರಡೈಸ್ ರಜತೋತ್ಸವ’ವನ್ನು ಅಚರಿಸಲು ಮುಂದಾಗಿದೆ. ಒಂದು ವರ್ಷದಲ್ಲಿ ಸುಮಾರು ೫೦ಕ್ಕೂ ಹೆಚ್ಚು ಕಾರ್ಯಕ್ರಮಗಳನ್ನು ನಡೆಸಲು ಯೋಜನೆಯನ್ನು ಸಿದ್ಧಪಡಿಸಿಕೊಂಡಿದ್ದು ಅದರಲ್ಲೂ ವಿಶೇಷವಾಗಿ ಎಲ್ಲಾ ಕಾರ್ಯಕ್ರಮಗಳ ಖರ್ಚು ವೆಚ್ಚಗಳನ್ನು ಆಯಾ ಸಂಘ ಸಂಸ್ಥೆಯವರೇ ಭರಿಸಲು ತೀರ್ಮಾನಿಸಲಾಗಿದೆ. ಇದೊಂದು ಸ್ವಾಭಿಮಾನದ ರಜತೋತ್ಸವ ಕಾರ್ಯಕ್ರಮವಾಗಲಿದೆ.
ಶ್ರೀ ಎನ್. ಗೋಪಿನಾಥ್ ರವರು ಸಮಾಜಕ್ಕೆ ನಿಡಿದ ಕೊಡುಗೆಗಳು.
Mathura Paradise ಶಿವಮೊಗ್ಗ ನಗರದ ಸಮಗ್ರ ಅಭಿವೃದ್ಧಿಯನ್ನು ಮುಂದಿಟ್ಟುಕೊAಡು ಹಲವು ವಿನೂತನ ಯೋಜನೆಗಳ ಮೂಲಕ ಕಾರ್ಯಚಟುವಟಿಕೆ ನಡೆಸಲು ನಮ್ಮ ಕನಸಿನ ಶಿವಮೊಗ್ಗ ತಂಡವನ್ನು ಕಟ್ಟಿಕೊಂಡು ಯುವ ಉದ್ದಿಮೆಗಳ ಕನಸುಗಳಿಗೆ ನೀರೆರೆಯಲು, ಪೋಷಿಸಲು ಮತ್ತು ಅದಕ್ಕೊಂದು ಸ್ಪಷ್ಟ ರೂಪ ನೀಡಲು ಮುಂದಾಗಿರುವ ಶ್ರೀ ಎನ್. ಗೋಪಿನಾಥ್‌ರವರು ೧೯೯೦ರಲ್ಲಿ ಹೋಟೆಲ್ ಮಥುರ ಪ್ಯಾರಡೈಸ್ ಆರಂಭಿಸಿ ಇಂದಿನವರೆಗೂ ಉದ್ಯಮದ ಜೊತೆ ಜೊತೆಯಲ್ಲಿ ಸಮಾಜ ಸೇವೆಯಲ್ಲಿ ತೊಡಗಿಕೊಂಡಿರುತ್ತಾರೆ. ಇವರು ಶಿವಮೊಗ್ಗ ನಗರಕ್ಕೆ ಮೆಡಿಕಲ್ ಕಾಲೇಜು ತರುವಲ್ಲಿ ಪ್ರಮುಖ ಪಾತ್ರ ವಹಿಸಿದವರು. ಹಾಗೆಯೇ ತುಂಗಾ ನದಿಯ ಸ್ವಚ್ಛತೆಗಾಗಿ ೨೦೦೦ ದಿಂದ ಇಂದಿನವರೆಗೂ ವಿನೂತನ ಕಾರ್ಯಕ್ರಮ ಹಮ್ಮಿಕೊಂಡು ಬರುತ್ತಿದ್ದಾರೆ. ಇವರ ಪ್ರಮುಖ ಕನಸುಗಳು ಹಸಿರಿನ ಶಿವಮೊಗ್ಗ, ನಮ್ಮೂರು ನಮಗೆಷ್ಟು ಗೊತ್ತು, ಮರಳಿ ಶಿವಮೊಗ್ಗಕ್ಕೆ ಬನ್ನಿ.. ಇತ್ಯಾದಿ.
‘ನಮ್ಮ ಕನಸಿನ ಸಂಸ್ಥೆ’ಯನ್ನು ಸ್ಥಾಪಿಸಿ ಅದರ ಮೂಲಕ ಸಾಹಸ ಮತ್ತು ಸಂಸ್ಕೃತಿ ಅಕಾಡೆಮಿ (ರಿ) ಸ್ಥಾಪಿಸಿ ಶಾಲಾ ಕಾಲೇಜುಗಳ ಮಕ್ಕಳಲ್ಲಿ ಚಾರಣ, ಸೈಕ್ಲಿಂಗ್, ಬೋಟಿಂಗ್, ಹಿಮಾಲಯ ಪರ್ವತಾರೋಹಣ, ರಾಕ್ ಕ್ಲೆöÊಂಬಿAಗ್ ನಂತಹ ಸಾಹಸ ಚಟುವಟಿಕೆಗಳನ್ನು ಪರಿಚಯಿಸಿದ್ದಾರೆ.
ಶಿವಮೊಗ್ಗ ಸೈಕಲ್ ಕ್ಲಬ್ (ರಿ). ಈ ಸಂಸ್ಥೆಯನ್ನು ಪ್ರಾರಂಭಿಸಿ ನಗರದ ನೂರಾರು ಜನ ಇಂದು ಪ್ರತಿದಿನ ಸೈಕಲ್ ಬಳಸುತ್ತಿರುವುದು ಶಿವಮೊಗ್ಗ ನಗರದಲ್ಲಿ ಗೋಚರಿಸುತ್ತಿದೆ. ಈ ಕ್ಲಬ್ ಈಗಾಗಲೇ ನೂರಾರು ಕಾರ್ಯಕ್ರಮಗಳನ್ನು ನಡೆಸಿ ಜನಪ್ರಿಯವಾಗಿದೆ.
‘ಶಿವಮೊಗ್ಗ ಬೈಕ್ ಕ್ಲಬ್’ ಸಂಸ್ಥೆಯನ್ನು ಪ್ರಾರಂಬಿಸಿ ಈ ಕ್ಲಬ್ ಈಗಾಗಲೇ ಕಾಶ್ಮೀರದಿಂದ ಕನ್ಯಾಕುಮಾರಿ, ಪಶ್ಚಿಮದಿಂದ ಪೂರ್ವ, ಭಾರತ – ನೇಪಾಳ ಬೈಕ್ ರ‍್ಯಾಲಿಯನ್ನು ಯಶಸ್ವಿಯಾಗಿ ನೆರವೇರಿಸಿರುತ್ತದೆ.
ಶಿವಮೊಗ್ಗ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ವೇದಿಕೆ (ರಿ) ಶಿವಮೊಗ್ಗ ಜಿಲ್ಲೆಯ ಪ್ರವಾಸಿ ತಾಣಗಳ ಅಭಿವೃದ್ಧಿ, ಪ್ರಚಾರ, ಮಾರ್ಗದರ್ಶಕರಿಗೆ ತರಬೇತಿ, ಪ್ರವಾಸದ ಚಟುವಟಿಕೆಗಳನ್ನು ನಡೆಸುತ್ತಿದೆ.
೨೦೨೨-೨೦೨೪ರ ಸಾಲಿನಲ್ಲಿ ಶಿವಮೊಗ್ಗ ಜಿಲ್ಲಾ ಕೈಗಾರಿಕಾ ಮತ್ತು ವಾಣಿಜ್ಯ ಸಂಘದ ಅಧ್ಯಕ್ಷರಾಗಿ ಯಶಸ್ವಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಶಿವಮೊಗ್ಗ ನಗರದ ಅಭಿವೃದ್ಧಿ ಬಗ್ಗೆ ಅತ್ಯಂತ ಪ್ರಾಮಾಣಿಕತೆಯಿಂದ ಸೇವೆ ಸಲ್ಲಿಸುತ್ತಿರುವ ಶ್ರೀ ಎನ್. ಗೋಪಿನಾಥ್‌ರವರು ಇನ್ನೂ ಹಲವಾರು ಸಂಸ್ಥೆಗಳ ಪೋಷಕರಾಗಿದ್ದಾರೆ.
ಪತ್ರಿಕಾ ಗೋಷ್ಠಿಯಲ್ಲಿ ಸಮಿತಿಯ ಸಂಯೋಜಕ ಅ.ನಾ.ವಿಜಯೇಂದ್ರ ರಾವ್, ಜಿ.ವಿಜಯಕುಮಾರ್. ಉಪಾಧ್ಯಕ್ಷರಾದ ಶ್ರೀಮತಿ ಶಾಂತ ಶೆಟ್ಟಿ. ನಿರ್ದೇಶಕರಾದ ಅಚ್ಚುತ್ ರಾವ್. ಉಪಸ್ಥಿತರಿದ್ದರು.
Mathura Paradise ಉದ್ದಿಮೆ ಕನಸುಗಾರ ಗೋಪಿನಾಥ್ ಅವರ ಮಥುರಾ ಪ್ಯಾರಡೈಸ್-25. ಬೆಳ್ಳಿಹಬ್ಬದ ವರ್ಷ – ವಿಶೇಷ
Date: