Wednesday, April 8, 2026
Wednesday, April 8, 2026

Joga Falls ಜೋಗ ಜಲಪಾತ ನೋಡಲು ಬಂದ ಯುವಕ‌ ಕಣ್ಮರೆ. ಪೊಲೀಸ್ ಸಿಬ್ಬಂದಿಯಿಂದ ಶೋಧಕಾರ್ಯ

Date:

Joga Falls ಜೋಗ ಜಲಪಾತ ವೀಕ್ಷಣೆಗೆಂದು ಬೆಂಗಳೂರಿನಿಂದ ಆಗಮಿಸಿದ್ದ ಯುವಕನೋರ್ವ ಜಲಪಾತದ ಬಳಿ ಕಣ್ಮರೆಯಾಗಿರುವ ಘಟನೆ ನಡೆದಿದ್ದು, ಯುವಕನಿಗಾಗಿ ಕಾರ್ಗಲ್ ಠಾಣೆ ಪೊಲೀಸರ ಶೋಧ ಕಾರ್ಯ ನಡೆಸುತ್ತಿದ್ದಾರೆ.

ಮೂಲತಃ ಗದಗ ಜಿಲ್ಲೆಯ ನಿವಾಸಿಯಾದ, ಪ್ರಸ್ತುತ ಬೆಂಗಳೂರಿನಲ್ಲಿ ಟೀ ಅಂಗಡಿ ನಡೆಸುತ್ತಿರುವ ಆನಂದ್ (24) ಜಲಪಾತದ ಬಳಿ ನಾಪತ್ತೆಯಾದ ಯುವಕ ಎಂದು ಗುರುತಿಸಲಾಗಿದೆ. ಕಾರ್ಗಲ್ ಠಾಣೆ ಪೊಲೀಸರು ನಾಪತ್ತೆ ದೂರು ದಾಖಲಿಸಿಕೊಂಡು ಯುವಕನಿಗಾಗಿ ಜಲಪಾತದ ಬಳಿ ಶೋಧ ನಡೆಸುತ್ತಿದ್ದಾರೆ.

ಜು . 15 ರಂದು ಯುವಕ ಆನಂದ್ ಜೋಗ ಜಲಪಾತಕ್ಕೆ ಆಗಮಿಸಿದ್ದ. ಯಾತ್ರಿ ನಿವಾಸದದ ಸೀತಾಕಟ್ಟೆ ಬ್ರಿಡ್ಜ್ ಬಳಿಯಿಂದ ಬೇಲಿ ದಾಟಿ, ಜಲಪಾತದ ಬಳಿ ಆಗಮಿಸಿದ್ದ. ನಂತರ ಆತನ ಸುಳಿವು ಲಭ್ಯವಾಗಿಲ್ಲ.

ಯುವಕ ತಂದಿದ್ದ ಬ್ಯಾಗ್ ಸಿಕ್ಕಿದೆ. ಕಳೆದ 6 ದಿನಗಳಿಂದಲೂ ಯುವಕನಿಗಾಗಿ ಕಾರ್ಗಲ್ ಠಾಣೆ ಸಬ್ ಇನ್ಸ್’ಪೆಕ್ಟರ್ ಹೊಳೆಬಸಪ್ಪ ಹೋಳಿ ನೇತೃತ್ವದ ಪೊಲೀಸ್ ತಂಡ ಶೋಧ ಕಾರ್ಯ ನಡೆಸುತ್ತಿದೆ. ಆದರೆ ಸುಳಿವು ಲಭ್ಯವಾಗಿಲ್ಲ.

Joga Falls ಜೋಗ್ ಜಲಪಾತದ ಬಳಿ ಬೀಳುತ್ತಿರುವ ಭಾರೀ ಮಳೆ ಹಾಗೂ ಮಂಜು ಮುಸುಕಿದ ವಾತಾವರಣದಿಂದ , ಯುವಕನ ಶೋಧ ಕಾರ್ಯವು ಪೊಲೀಸರಿಗೆ ಕಷ್ಟಕರವಾಗಿ ಪರಿಣಮಿಸಿದೆ. ಜಲಪಾತದ ಬಳಿ ಯುವಕ ನಾಪತ್ತೆಯಾಗಿದ್ದ ಹೇಗೆ ಎಂಬುವ ವಿವರಗಳು ಇನ್ನಷ್ಟೆ ತಿಳಿದುಬರಬೇಕಾಗಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

S.N. Channabasappa ಐಪಿಎಲ್ ಕ್ರಿಕೆಟ್ ಪಾಸ್ ನನಗೆ ಬೇಡ- ಶಾಸಕ ಎಸ್.ಎನ್.ಚನ್ನಬಸಪ್ಪ

S.N. Channabasappa ಶಾಸಕರಿಗೆ ನೀಡಲಾಗುವ ನನ್ನ ಹೆಸರಿನ ಐಪಿಎಲ್ ಕ್ರಿಕೆಟ್...

Sri Kala Skill Development Centre ಸಮಾಜದ ವಿವಿಧ ಕ್ಷೇತ್ರಗಳ ಸಾಧಕರಿಗೆ ಕಾ. ಎಂ.ಲಿಂಗಪ್ಪ ಸ್ಮಾರಕ ಪ್ರಶಸ್ತಿ ಘೋಷಣೆ

Sri Kala Skill Development Centre ಶಿವಮೊಗ್ಗ ನಗರದಲ್ಲಿ ಪತ್ರಕರ್ತರಾಗಿ, ಸಮಾಜಮುಖಿ...

B.Y. Raghavendra ಹೊಸನಗರಕ್ಕೆ ಮೊದಲಿನ ರಾಜಕೀಯ ಅಸ್ಮಿತೆ ಮರಳಿ ಸಿಗಬೇಕು- ಸಂಸದ ಬಿ.ವೈ.ರಾಘವೇಂದ್ರ

B.Y. Raghavendra ರಿಪ್ಪನ್‌ಪೇಟೆಯಲ್ಲಿ ಆಯೋಜಿಸಲಾಗಿದ್ದ ಬೃಹತ್ ಸಾರ್ವಜನಿಕ ಸಭೆಯಲ್ಲಿ ವಿವಿಧ ಮಠಾಧೀಶರು,...

ಶಾಲಾ ಮಕ್ಕಳಿಗೆಂದೇ “ಟಿ-5 ಚುಟುಕು ಕ್ರಿಕೆಟ್” ಪಂದ್ಯಾವಳಿ ಏರ್ಪಡಿಸಿ ಪ್ರೋತ್ಸಾಹಿಸಿ- ಡಾ.ಸುಧೀಂದ್ರ

DCA ಸಂಸ್ಥೆಯ 2026ರ ಸಾಲಿನ ಬೇಸಿಗೆ ಕ್ರಿಕೆಟ್ ತರಬೇತಿ ಶಿಬಿರವನ್ನು ದಿನಾಂಕ...