Thursday, October 3, 2024
Thursday, October 3, 2024

ಕನ್ನಡಿಗರ ಹಿತಕ್ಕಾಗಿ ‘ಮಹಾ’ ಸರ್ಕಾರದೊಂದಿಗೆ ಸಂಪರ್ಕ- ಆರಗ

Date:

ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಹಲಸಿಯಲ್ಲಿ ಕನ್ನಡ ಬಾವುಟ ಸುಟ್ಟ ಮತ್ತು ಜಗಜ್ಯೋತಿ ಬಸವೇಶ್ವರರ ಚಿತ್ರಕ್ಕೆ ಸಗಣಿ ಮೆಚ್ಚಿದ ಪ್ರಕರಣದ ಸಂಬಂಧ ನಂದಗಡ ಠಾಣೆ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

ಹಲಸಿ ಗ್ರಾಮದಲ್ಲಿ ಕನ್ನಡ ಬಾವುಟಕ್ಕೆ ಬೆಂಕಿ ಇಟ್ಟ ಮೂವರು ಆರೋಪಿಗಳನ್ನು ನಂದಗಡ ಪೊಲೀಸರು ಬಂಧಿಸಿದ್ದಾರೆ. ಖಾನಾಪುರದ ಹಲಸಿ ಗ್ರಾಮ ಪಂಚಾಯತ್ ಆವರಣದಲ್ಲಿ ಕನ್ನಡ ಬಾವುಟಕ್ಕೆ ಬೆಂಕಿ ಹಚ್ಚಿ ನಂತರ ಬಸವಣ್ಣನವರ ಮೂರ್ತಿಗೆ ಕಪ್ಪುಮಸಿ ಬಳಿದಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಲಾಗಿದೆ. ಪೊಲೀಸರು ಮೂರು ಆರೋಪಿಗಳನ್ನು ಬಂಧಿಸಿದ್ದಾರೆ.

ಆರೋಪಿಗಳು ಮೂಲತಹ ಹಲಸಿ ಗ್ರಾಮದ ಸಂಜು ಗುರವ, ಸಚಿನ ಗುರವ ಹಾಗೂ ಗಣೇಶ್ ಪೆಡ್ನೆಕರ್ ಬಂಧಿತ ಆರೋಪಿಗಳಾಗಿದ್ದಾರೆ.
ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 153A, 295,427,120B ರ ಅಡಿಯಲ್ಲಿ ಕೇಸ್ ದಾಖಲಾಗಿದೆ.

“ಗಡಿಪ್ರದೇಶದಲ್ಲಿ ಕನ್ನಡಿಗರು ಮರಾಠಿಗರು ಹಿತಕಾಪಾಡುವ ಕ್ರಮವಾಗಿ ಮಹಾರಾಷ್ಟ್ರದ ಗೃಹ ಇಲಾಖೆಯೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇವೆ” ಎಂದು ಮಾನ್ಯ ಗೃಹ ಸಚಿವರಾದ ಆರಗ ಜ್ಞಾನೇಂದ್ರ ಅವರು ತಿಳಿಸಿದ್ದಾರೆ.

ಎಂಇಎಸ್ ವಿರುದ್ಧ ವಿಧಾನಸಭೆಯಲ್ಲಿ ಖಂಡನಾ ನಿರ್ಣಯ ಮಾಡಿದ್ದೇವೆ. ಈ ವಿಷಯವನ್ನು ಪ್ರಧಾನಿಯವರ ಗಮನಕ್ಕೂ ತರಲಾಗುವುದು ತರಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ಅವರು ತಿಳಿಸಿದ್ದಾರೆ.

“ಎಂಇಎಸ್ ಸೇರಿ ಯಾವುದೇ ಸಂಘಟನೆಯ ಗುಂಡಾಗಿರಿ ವರ್ತನೆ ಸಹಿಸಿಕೊಳ್ಳಬಾರದು. ಅಂತವರನ್ನು ಗಡಿಪಾರು ಮಾಡಿ ಕಠಿಣ ನಿರ್ಧಾರ ಕೈಗೊಳ್ಳಬೇಕು” ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕರಾದ ಹಾಗೂ ಮಾಜಿ ಮುಖ್ಯಮಂತ್ರಿಗಳಾದ ಎಚ್.ಡಿ. ಕುಮಾರಸ್ವಾಮಿ ಅವರು ಹೇಳಿದ್ದಾರೆ.

ಬಸವೇಶ್ವರರ ಚಿತ್ರಕ್ಕೆ ಅಪಮಾನವನ್ನು ಖಂಡಿಸಿ, ಜಾಗತಿಕ ಲಿಂಗಾಯತ ಮಹಾಸಭಾದವರು ಜಿಲ್ಲಾಧಿಕಾರಿ ಕಚೇರಿ ಬಳಿ ಧರಣಿ ನಡೆಸಿದ್ದಾರೆ. ಕಿಡಿಗೇಡಿಗಳ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿ ಪ್ರತಿಭಟನೆ ನಡೆಸಿದರು. ಹಾಗೂ ಈ ಸಂದರ್ಭದಲ್ಲಿ, ಮಹಾಪುರುಷರ ಪ್ರತಿಮೆಗಳಿಗೆ ರಕ್ಷಣೆ ನೀಡಲು ಒತ್ತಾಯಿಸಿದರು.
ನಾಗನೂರು ರುದ್ರಾಕ್ಷಿ ಮಠದ ಡಾ. ಅಲ್ಲಮಪ್ರಭು ಸ್ವಾಮೀಜಿ ಅವರು ಪ್ರತಿಭಟನೆಗೆ ಭಾಗವಹಿಸಿದ್ದರು.

ಇದೇ ರೀತಿ ಮಹಾರಾಷ್ಟ್ರದಲ್ಲೂ ಕೂಡ ಜನರ ಧಾರ್ಮಿಕತೆ ಮೇರೆ ಘಾಸಿಗೊಳಿಸಿದ್ದಾರೆ. ಸಂಗೊಳ್ಳಿ ರಾಯಣ್ಣನ ಪ್ರತಿಮೆ ಭಗ್ನ ಗೈದ ಪ್ರಕರಣ ಬೆಳಕಿಗೆ ಬಂದಿದೆ.

‘ಕನ್ನಡಿಗರ ಸ್ವಾಭಿಮಾನದ ಸಂಕೇತವಾಗಿರುವ ಕನ್ನಡದ ಬಾವುಟ ಕ್ಕೆ ಬೆಂಕಿ ಹಚ್ಚಿದ್ದಾರೆ. ಸಂಗೊಳ್ಳಿ ರಾಯಣ್ಣ ಪ್ರತಿಮೆಯನ್ನು ಬಗ್ಗೆ ಮಾಡಿ ಮಹಾರಾಷ್ಟ್ರ ಏಕೀಕರಣ ಸಮಿತಿ ಪುಂಡರು ದಬ್ಬಾಳಿಕೆ ನಡೆಸುತ್ತಿದ್ದಾರೆ. ಈ ಅಧಿವೇಶನ ಪೂರ್ಣಗೊಳ್ಳುವ ಮೊದಲೇ ಎಂಇಎಸ್ ಅನ್ನು ನಿಷೇಧಿಸಿ ಎಂದು ಕನ್ನಡ ಚಿತ್ರದ ನಿರ್ಮಾಪಕರಾದ ಸಾ.ರ. ಗೋವಿಂದ್ ಆಗ್ರಹಿಸಿದ್ದಾರೆ.

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಸಂದರ್ಭದಲ್ಲಿ ಅವರು ಮಾತನಾಡುತ್ತಿದ್ದರು. ” ಎಂಇಎಸ್ ನಿಷೇಧಿಸಿದರೆ ಅಷ್ಟೇ ಇಂತಹ ಕೃತ್ಯಗಳಿಗೆ ಶಾಶ್ವತ ಕಡಿವಾಣ ಹಾಕಬಹುದು. ವರನಟ ಡಾ. ರಾಜಕುಮಾರ್ ಅವರು ಈ ನಾಡಿಗೆ, ಭಾಷೆಗೆ, ನೆಲ-ಜಲಕ್ಕೆ ಅನ್ಯಾಯವಾದ ಸಂದರ್ಭದಲ್ಲಿ ಹೋರಾಟ ಮಾಡಿದ್ದರು. ಈ ಭದ್ರ ಬುನಾದಿಯಲ್ಲಿ ನಾವಿದ್ದೇವೆ. ಭಾಷಾವಾರು ಪ್ರಾಂತ್ಯ ಮಾಡಿದ ಮೇಲೆ ಕರ್ನಾಟಕದಲ್ಲಿ ಕನ್ನಡಕ್ಕೆ ಅಗ್ರಸ್ಥಾನ ದೊರಕಿದೆ. ಆಡಳಿತಕ್ಕೆ ಬಂದ ಸರ್ಕಾರ ಕೇವಲ ಮತ್ತು ಭಿಕ್ಷೆಗಾಗಿ ಕನ್ನಡಿಗರ ಮಾನ, ಮರ್ಯಾದೆ ಗೌರವವನ್ನು ಹರಾಜು ಹಾಕುತ್ತಿವೆ ಎಂದು ಕನ್ನಡ ಚಿತ್ರದ ನಿರ್ಮಾಪಕ ಸಾ.ರಾ. ಗೋವಿಂದ್ ಅವರು ಮಾಧ್ಯಮ ಮಿತ್ರರಿಗೆ ತಿಳಿಸಿದರು.

ಮಹಾರಾಷ್ಟ್ರದಲ್ಲಿ ಶಿವಸೇನಾ ಕಾರ್ಯಕರ್ತರು, ಕರ್ನಾಟಕ ನೋಂದಣಿಯ ವಾಹನಗಳ ಮೇಲೆ ಕಲ್ಲು ತೂರಾಟ ನಡೆಸುವುದನ್ನು ಮುಂದುವರಿಸಿದ್ದಾರೆ. ನೀರಜ್ ನಲ್ಲಿ ಗೋಕಾಕ ಮೂಲದ ಟ್ಯಾಕ್ಸಿಗೆ ಕಲ್ಲುಗಳ ತೂರಾಟದಿಂದ ವಾಹನದ ಹಿಂಬದಿಯ ಗಾಜು ಒಡೆದು ಹಾಕಿದ್ದಾರೆ. ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಈ ಅಧಿವೇಶನ ಪೂರ್ಣಗೊಳ್ಳುವ ಮೊದಲೇ ಎಂಇಎಸ್ ಅನ್ನು ನಿಷೇಧಿಸಲಿ ಎಂದರು.

‘ ನಾಡು, ದುಡಿಗೆ ಅನ್ಯಾಯವಾದಾಗ ಇಡೀ ಚಿತ್ರೋದ್ಯಮ ಒಂದಾಗಿರುತ್ತದೆ. ಸಮಯ ಬಂದಾಗ ಹೋರಾಟದಿಂದ ಹಿಂದೆ ಸರಿಯುವುದಿಲ್ಲ. ಮುಖ್ಯಮಂತ್ರಿಗಳು ಕಠಿಣ ನಿಲುವು ತೆಗೆದುಕೊಳ್ಳಲಿ. ಇಡೀ ರಾಜ್ಯದ ಜನತೆ ನಿಮ್ಮ ಬೆನ್ನಿಗೆ ನಿಲ್ಲಲಿದೆ ಎಂದರು.

ಈ ಸಂದರ್ಭದಲ್ಲಿ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ ಡಿ. ಆರ್. ಜೈರಾಜ್ ಅವರು ಮಾತನಾಡುತ್ತಿದ್ದರು. ” ಬೆಳಗಾವಿಯಲ್ಲಿ ಅಧಿವೇಶನ ನಡೆಯುವ ಸಂದರ್ಭದಲ್ಲಿ ಈ ರೀತಿ ಎಂಇಎಸ್ ತೊಂದರೆ ನೀಡುತ್ತಿದೆ. ಮಹಾರಾಷ್ಟ್ರ ಗಡಿಯಲ್ಲಿ ನಡೆಯುವ ಈ ಪುಂಡಾಟಕ್ಕೆ ಕೇಂದ್ರ ಸರ್ಕಾರವು ಕಡಿವಾಣ ಹಾಕಬೇಕು. ಕನ್ನಡಿಗರ ರಕ್ಷಣೆಗಾಗಿ ಸರ್ಕಾರ ಕ್ರಮ ಕೈಗೊಳ್ಳಬೇಕು. ಈ ರೀತಿ ಘಟನೆಗಳ ಆಗದಂತೆ ನಿಗಾವಹಿಸಬೇಕು” ಎಂದು ಸಾ.ರಾ. ಗೋವಿಂದ್ ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Klive Special Article ನವರಾತ್ರಿಯ ಮೊದಲ ದಿನ. ಶೈಲಪುತ್ರಿ ದೇವಿರೂಪ ಆರಾಧನೆ

ಲೇ; ಎನ್.ಜಯಭೀಮ ಜೊಯಿಸ್. ಶಿವಮೊಗ್ಗ Navaratri Festival ವಂದೇ ವಾಂಛಿತ ಲಾಭಾಯಚಂದ್ರಾರ್ಧಕೃತಶೇಖರಂ/ವೃಷಾರೂಢಂ...

Gandhi Jayanthi ನಗರದ ರೋವರ್ಸ್ ಕ್ಲಬ್ ನಲ್ಲಿ ಗಾಂಧಿ ಜಯಂತಿ ಆಚರಣೆ

Gandhi Jayanthi ನಗರದ ರೋವರ್ಸ್ ಕ್ಲಬ್ ಆವರಣದಲ್ಲಿ ಮಹಾತ್ಮ ಗಾಂಧೀಜಿಯವರ...

B.Y.Raghavendra ಸಾರ್ವಜನಿಕ ಉದ್ಯಮಗಳು & ಗೃಹ ಇಲಾಖೆ ಸಂಬಂಧಿತ ಸ್ಥಾಯಿ ಸಮಿತಿಗೆ ನೇಮಕವಾಗಿರುವ ಸಂಸದ ರಾಘವೇಂದ್ರರಿಗೆ ಅಭಿನಂದನೆ

B.Y.Raghavendra ಕೇಂದ್ರ ಸರ್ಕಾರದ ಸಂಸದೀಯ ಸಂಸ್ಥೆಗಳಾದ ಸಾರ್ವಜನಿಕ ಉದ್ಯಮಗಳ ಸಮಿತಿ,...

Mahatma Gandhi ಗಾಂಧಿ ಟೋಪಿ ಧಾರಣೆ ಕೇವಲ ತೋರಿಕೆಯಾಗಬಾರದು. ಆದರ್ಶಗಳ ಪಾಲನೆಯಾಗಬೇಕು-ಡಾ.ಎಚ್.ಬಿ.ಮಂಜುನಾಥ್.

Mahatma Gandhi ಗಾಂಧಿ ಟೋಪಿಯನ್ನು ಧರಿಸುವುದು ಕೇವಲ ತೋರಿಕೆಯಾಗದೆ ಮಹಾತ್ಮರ ಆದರ್ಶಗಳ...