R.M. Manjunath Gowda ತೀರ್ಥಹಳ್ಳಿಯಲ್ಲಿ ಇತ್ತೀಚೆಗೆ ಉದ್ಘಾಟನೆಗೊಂಡ ತಾಲೂಕು ಪಂಚಾಯತಿ ನೂತನ ಕಟ್ಟಡ, ಪೋಲಿಸ್, ಅಗ್ನಿ ಶಾಮಕ ದಳ ಮತ್ತು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕಟ್ಟಡಗಳು ಸೋರುತ್ತಿದ್ದು, ಕಳಪೆ ಕಾಮಗಾರಿ ಮತ್ತು ಭೃಷ್ಟಚಾರ ನಡೆದಿದೆ. ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ ಅವರು ಇದರ ಹೊಣೆ ಹೊರಬೇಕು ಎಂದು ಕಾಂಗ್ರೆಸ್ ಮುಖಂಡ ಶಿವಮೊಗ್ಗ ಜಿಲ್ಲಾ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ. ಆರ್.ಎಂ. ಮಂಜುನಾಥ್ ಗೌಡ ಅವರು ಆಗ್ರಹಿಸಿದರು.
ತೀರ್ಥಹಳ್ಳಿಯ ಕಾಂಗ್ರೆಸ್ ಕಚೇರಿ ಗಾಂಧಿ ಭವನದಲ್ಲಿ ಜು. 17 ರಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮಂಜುನಾಥ ಗೌಡ ಅವರು, ಕಳಪೆ ಕಾಮಗಾರಿಯಿಂದಾಗಿ ಕಟ್ಟಿದ ಕೆಲವೇ ದಿನಗಳಲ್ಲಿ ಸರ್ಕಾರಿ ಕಟ್ಟಡಗಳು ಸೋರಲಾರಂಭಿಸಿವೆ. ಬಿರುಸಾದ ಮಳೆ ಈಗ 2-3 ದಿನಗಳಿಂದ ಬರುತ್ತಿದೆಯಷ್ಟೆ. ಆದರೆ ಕೆಲವು ದಿನಗಳ ಹಿಂದೆಯೇ ಸಣ್ಣ ಮಳೆಗೂ ನೂತನ ತಾಲೂಕು ಪಂಚಾಯತಿ ಕಟ್ಟಡ ಸೋರುತ್ತಿದೆಯೆಂದರೆ ಏನರ್ಥ ಎಂದು ಪ್ರಶ್ನಿಸಿದರು.
R.M. Manjunath Gowda ತಾನಂತೂ ಯಾವುದೇ ಗುತ್ತಿಗೆದಾರನ ಬಳಿ ತನ್ನ ಜೀವಮಾನದಲ್ಲಿಯೇ ಕೈಯೊಡ್ಡಿಲ್ಲ. ರಾಜಕಾರಣದಲ್ಲೂ ಮುಂದೊಂದು ಹಿಂದೊಂದು ಮಾಡುವ ಅಭ್ಯಾಸ ತನ್ನದಲ್ಲ. ಮಾಧ್ಯಮದವರು ನೂತನ ಕಟ್ಟಡಗಳ ಕಳಪೆ ಕಾಮಗಾರಿಗಳ ಕುರಿತು ಬೆಳಕು ಚೆಲ್ಲಿ ಉತ್ತಮ ಕಾರ್ಯ ಮಾಡಿದ್ದಾರೆ ಎಂದು ಮಂಜುನಾಥ ಗೌಡರು ಶ್ಲಾಘಿಸಿದರು.
ತೀರ್ಥಹಳ್ಳಿ ತಾಲೂಕಿನಲ್ಲಿ ಎಲ್ಲಾ ಸಮುದಾಯದವರ ಭವನಗಳಿಗೆ ಕರ್ನಾಟಕ ನೀರಾವರಿ ನಿಗಮದಿಂದ ಸಂಸದ ರಾಘವೇಂದ್ರ ಅವರು ಅನುದಾನವನ್ನು ನೀಡಿರುವುದು ಸಂಸದರ ನಿಧಿ ಹೇಗಾಗುತ್ತದೆ. ಇದು ಕೂಡ ರಾಜ್ಯ ಸರ್ಕಾರದ್ದೆ ಹಣ ಎಂದು ಮಂಜುನಾಥ ಗೌಡರು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆಸ್ತೂರು ಮಂಜುನಾಥ್, ಮಾಜಿ ಜಿ.ಪಂ.ಸದಸ್ಯ ಹಾರೋಗೊಳಿಗೆ ಪದ್ಮನಾಭ್ , ಮುಖಂಡರಾದ ಡಿ.ಎಸ್. ವಿಶ್ವನಾಥ ಶೆಟ್ಟಿ, ಎಲಪ್ಪ, ಬಿ.ಆರ್. ರಾಘವೇಂದ್ರ ಶೆಟ್ಟಿ, ನಾಬಳ ಶಚ್ಚೀಂದ್ರ ಹೆಗ್ಡೆ, ಪ.ಪಂ. ಸದಸ್ಯರಾದ ರಹಮತುಲ್ಲಾ ಅಸಾದಿ, ಗೀತಾ ರಮೇಶ್, ಸುಶೀಲಾ ಶೆಟ್ಟಿ, ರತ್ನಾಕರ ಶೆಟ್ಟಿ, ಮಂಜುಳಾ ನಾಗೇಂದ್ರ ಮುಂತಾದವರಿದ್ದರು.
R.M. Manjunath Gowda ತೀರ್ಥಹಳ್ಳಿಯ ಕೆಲ ಕಟ್ಟಡಗಳ ಕಳಪೆ ಕಾಮಗಾರಿ, ಶಾಸಕ ಆರಗ ಅವರು ನೈತಿಕ ಹೊಣೆ ಹೊರಬೇಕು- ಆರ್.ಎಂ.ಮಂಜುನಾಥ ಗೌಡ
Date: