Inner Wheel Club Shivamogga ಬೀದಿ ಬದಿಯ ಮಹಿಳೆಯರು ಸ್ವಾವಲಂಬಿಗಳಾಗಬೇಕು. ಯಾವ ಸಮಯದಲ್ಲಿ ಪರಿಸ್ಥಿತಿ ಏನಾಗುತ್ತೋ ಗೊತ್ತಿಲ್ಲ ಮಹಿಳೆಯರು ಅಡುಗೆ ಮನೆಗೆ ಸೀಮಿತವಾಗದೆ ತಮ್ಮ ಬದುಕನ್ನು ರೂಪಿಸಿಕೊಳ್ಳುವ ನಿಟ್ಟಿನಲ್ಲಿ ಆಲೋಚನೆ ಮಾಡಬೇಕು ಎಂದು ಇನ್ನರ್ ವೀಲ್ ಕ್ಲಬ್ ಶಿವಮೊಗ್ಗ ಪೂರ್ವ ಮಾಜಿ ಅಧ್ಯಕ್ಷ ಉಮಾ ವೆಂಕಟೇಶ್ ನುಡಿದರು.
ಶಿವಮೊಗ್ಗದ ಗಾಂಧಿಬಜಾರ್ ನಲ್ಲಿ ಆರ್ಥಿಕವಾಗಿ ಹಿಂದುಳಿದ ಬೀದಿ ಬದಿಯ ತರಕಾರಿ ವ್ಯಾಪಾರಸ್ಥರಿಗೆ ಛತ್ರಿಗಳನ್ನ ವಿತರಣೆ ಮಾಡುತ್ತ ಮಾತನಾಡಿದರು ತಮ್ಮ ಬದುಕನ್ನು ಕಟ್ಟಿಕೊಳ್ಳಲು ಬೀದಿ ಬದಿ ವ್ಯಾಪಾರಸ್ಥರು ಸತತ ಪರಿಶ್ರಮ ಮಾಡುತ್ತಿದ್ದಾರೆ ಈ ನಿಟ್ಟಿನಲ್ಲಿ ಇಂತಹವರಿಗೆ ನಾವುಗಳು ಸಹಾಯ ಹಸ್ತ ನೀಡಿದಾಗ ಅವರ ಬದುಕು ಹಸನವಾಗುತ್ತದೆ ಎಂದರು.
ನಮ್ಮ ಇನ್ನರ್ ವೀಲ್ ಸದಸ್ಯರು ತಮ್ಮ ತಮ್ಮ ಹುಟ್ಟು ಹಬ್ಬ ವಿವಾಹ ವಾರ್ಷಿಕೋತ್ಸವ ಇಂತಹ ಸಂದರ್ಭದಲ್ಲಿ ಸಮಾಜಮುಖಿಯಾಗಿ ಆಚರಿಸಿಕೊಂಡರೆ ಅರ್ಥಪೂರ್ಣವಾಗುತ್ತದೆ ನಾವು ಮಾಡುವ ಒಂದು ಸಣ್ಣ ಅಳಿಲು ಸೇವೆಯು ಸಹ ಅವರಿಗೆ ತುಂಬಾ ಅಗತ್ಯವಾಗಿರುತ್ತದೆ ಈ ನಿಟ್ಟಿನಲ್ಲಿ ನನ್ನ 50ನೇ ವರ್ಷದ ಹುಟ್ಟುಹಬ್ಬದ ಸಂದರ್ಭದಲ್ಲಿ ಈಗಾಗಲೇ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬಂದಿದ್ದೇನೆ ಎಂದು ನುಡಿದರು.
Inner Wheel Club Shivamogga ಇದೇ ಸಂದರ್ಭದಲ್ಲಿ ಇನ್ನರ್ವಿಲ್ ಶಿವಮೊಗ್ಗ ಪೂರ್ವದ ಅಧ್ಯಕ್ಷರಾದ ಶ್ರೀಮತಿ ವಾಗ್ದೇವಿ ಡಾಕ್ಟರ್ ಬಸವರಾಜ್ ಮಾತನಾಡುತ್ತ ಹುಟ್ಟುಹಬ್ಬಗಳನ್ನು ಅರ್ಥಪೂರ್ಣವಾಗಿ ಆಚರಿಸಿಕೊಳ್ಳಬೇಕು ಹಾಗೂ ಸಮಾಜಮುಖಿಯಾಗಿ ಮಾಡಿಕೊಂಡರೆ ಅಂತಹ ಸೇವೆ ನಮ್ಮನ್ನು ಕಾಪಾಡುತ್ತದೆ ಅಗತ್ಯತೆ ಇರುವಲ್ಲಿ ಮಾತ್ರ ನಾವು ಸೇವೆ ಮಾಡಬೇಕು ಹಾಗೂ ನಾವು ಮಾಡಿದ ಸೇವೆ ಬಲಪ್ರದವಾಗಬೇಕು ಎಂದು ನುಡಿದರು ಕಾರ್ಯಕ್ರಮದಲ್ಲಿ ಇನ್ನರ್ ವೀಲ್ ಶಿವಮೊಗ್ಗ ಪೂರ್ವದ ಮಾಜಿ ಅಧ್ಯಕ್ಷರಾದ ಶ್ರೀಮತಿ ಬಿಂದು ವಿಜಯ ಕುಮಾರ್. ಕಾರ್ಯದರ್ಶಿ ಲತಾ ಸೋಮಶೇಖರ್ ಲಾವಣ್ಯ ಶಶಿಧರ್ ವಿಜಯಶ್ರೀ ಹಾಗೂ ಇನ್ನರ್ ವೀಲ್ ಸದಸ್ಯರು ಉಪಸ್ಥಿತರಿದ್ದರು.