Agumbe Ghat ಮಳೆ ಹಿನ್ನೆಲೆಯಲ್ಲಿ ಭಾರೀ ವಾಹನ್ಳಿಗೆ ಗಳಿಗೆ ಆಗುಂಬೆ ಘಾಟಿಯಲ್ಲಿ ನಿರ್ಬಂಧ ಹೇರಲಾಗಿದೆ. ಈಮಧ್ಯೆ ಘಾಟಿಯಲ್ಲಿ ಕಳೆದ ರಾತ್ರಿ ಗುಡ್ಡ ಕುಸಿದಿದೆ.
ಸ್ವಲ್ಪ ಪ್ರಮಾಣದಲ್ಲಿ ಈಗ ಕುಸಿದಿದ್ದರೂ ಮಳೆ ಹೆಚ್ಚಿರುವ ಕಾರಣ ಆತಂಕ ಉಂಟಾಗಿದೆ.
ಘಾಟಿ ತಿರುವುಗಳಲ್ಲಿ ಧರೆಯಿಂದ ಇಳಿಯುವ ನೀರು, ಮಣ್ಣನ್ನು ಸಡಿಲಗೊಳಿಸುತ್ತಲೇ ಇರುತ್ತವೆ. ಇನ್ನೂ ರಸ್ತೆ ಮೇಲಿನ ನೀರು ಧರೆಕೊರೆಯುತ್ತಾ ಹರಿಯುತ್ತವೆ. ಇದರ ಪರಿಣಾಮವೋ ಏನೋ ಎಂಬಂತೆ ಇವತ್ತು ಐದು ಮತ್ತು ಆರನೇ ಕ್ರಾಸ್‌ನಲ್ಲಿ ಬೆಟ್ಟದಲ್ಲಿ ರಸ್ತೆ ಪಕ್ಕದ ಧರೆ ತುಸು ಪ್ರಮಾಣದಲ್ಲಿ ಕುಸಿದಿದೆ.
Agumbe Ghat ಕುಸಿದ ಮಣ್ಣು ರಸ್ತೆ ಮೇಲೆ ಬಿದ್ದಿದ್ದು, ಅರ್ಧರಸ್ತೆಯ ತುಂಬಾ ಹರಡಿದೆ. .
ಸ್ಥಳೀಯರು ಹೇಳುವ ಪ್ರಕಾರ, ಇನ್ನೊಂದಿಷ್ಟು ದಿನ ಹೀಗೆ ಧರೆಕುಸಿಯುವ ಆತಂಕವಿದೆ. ಈ ಹಿಂದೆ ದೊಡ್ಡ ಪ್ರಮಾಣದಲ್ಲಿ ಘಾಟಿಯಲ್ಲಿ ಗುಡ್ಡ ಕುಸಿದಿತ್ತು. ಆ ಥರದ ಘಟನೆಗಳು ಮತ್ತೆ ಸಂಭವಿಸದೇ ಇರಲಿ ಎನ್ನುತ್ತಾರೆ.
ಭಾರಿ ತೀರ್ಥಹಳ್ಳಿ – ಉಡುಪಿ ಮಾರ್ಗವಾಗಿ ಹೋಗುವ ವಾಹನಗಳು ಹುಲಿಕಲ್ ಘಾಟಿ ಮಾರ್ಗವಾಗಿ ಹೋಗುತ್ತಿವೆ. ಈಗ ಆಗುಂಬೆ ಘಾಟಿಯ 5 ನೇ ತಿರುವಿನಲ್ಲಿ ಸಣ್ಣ ಪ್ರಮಾಣದಲ್ಲಿ ಗುಡ್ಡ ಕುಸಿಯಲು ಆರಂಭವಾಗಿದ್ದು ವಾಹನ ಸವಾರರು ಎಚ್ಚರಿಕೆವಹಿಸಬೇಕಿದೆ.