Bharathi Tirtha ಶೃಂಗೇರಿ ಪೀಠಾಧಿಪತಿಗಳಾಗಿರುವ ಜಗದ್ಗುರು ಶ್ರೀಶ್ರೀ ಭಾರತೀ ತೀರ್ಥ ಮಹಾಸ್ವಾಮಿಗಳು ಸಂನ್ಯಾಸ ದೀಕ್ಷೆ ಸ್ವೀಕರಿಸಿ 50 ವರ್ಷಗಳು ಪೂರೈಸಿರುವ ಹಿನ್ನೆಲೆಯಲ್ಲಿ ಶೃಂಗೇರಿ ಮಠದಿಂದ “ಸುವರ್ಣ ಭಾರತೀ” ಎಂಬ ಶೀರ್ಷಿಕೆಯಡಿಯಲ್ಲಿ ಎಲ್ಲಾ ಊರುಗಳಲ್ಲಿ ಪ್ರವಚನಗಳನ್ನು ಆಯೋಜಿಸಲಾಗಿವೆ. ಅದರಂಗವಾಗಿ ಈ ಭಾಗದ ಪ್ರವಚನವನ್ನು ಶ್ರೀಶ್ರೀ ಶಿವಾನಂದ ಭಾರತೀ ಚಿಂತಾಮಣಿ ಸ್ವಾಮಿಗಳ ಸಾನಿಧ್ಯ – ಶ್ರೀ ಚಿಂತಾಮಣಿ ಮಠ, ಅಮರಾವತಿ ಹೊಸಪೇಟೆಯಲ್ಲಿ ನೆರವೇರಿತು. ಈ ಕಾರ್ಯಕ್ರಮಕ್ಕೆ ವಿಶೇಷ ಆಹ್ವಾನಿತರಾಗಿ ಪೂಜ್ಯ ಶ್ರೀಶ್ರೀ ಬ್ರಹ್ಮಾನಂದ ಭಾರತೀ ಸ್ವಾಮಿಗಳು ಆಗಮಿಸಿದ್ದರು.
ಶ್ರೀ ಮಠದ ಭಕ್ತಾದಿಗಳು ಶ್ರೀಶ್ರೀ ಬ್ರಹ್ಮಾನಂದ ಭಾರತೀ ಸ್ವಾಮಿಗಳ ಪಾದ ತೊಳೆದು ಪೂರ್ಣಕುಂಭದೊಂದಿಗೆ ಸ್ವಾಗತಿಸಿದರು. ಉಭಯಶ್ರೀಗಳು ಗೋ ಮಾತೆಗೆ ಗ್ರಾಸವನ್ನು ನೀಡಿ – ಜಗದ್ಗುರು ಶ್ರೀಶ್ರೀ ಶಂಕರಾಚಾರ್ಯರಿಗೆ ಮಂಗಳಾರತಿ ಮಾಡಿ – ದೀಪವನ್ನು ಪ್ರಜ್ವಲಿಸಿ – ವೇದಿಕೆಯಲ್ಲಿ ಆಸೀನರಾದರು. ಗಣೇಶ್ ಗೋಸಾವಿ ಮತ್ತು ಶ್ರೀನಿವಾಸ್ ರವರು ವೇದ ಘೋಷವನ್ನು ಮಾಡಿದರು – ಚಿಂತಾಮಣಿ ಮಠ ಭಕ್ತ ಮಂಡಳಿಯಿಂದ ಉಭಯಶ್ರೀಗಳಿಗೆ ಫಲ ಸಮರ್ಪಿಸಿದರು – ಪುಟ್ಟ ಮಕ್ಕಳು ಪ್ರಾರ್ಥನಾ ಗೀತೆಯನ್ನು ಹೇಳಿದರು – ಶ್ರೀಮತಿ ಲಕ್ಷ್ಮೀ ಕರಣಂರವರು ಶ್ರೀ ಚಿಂತಾಮಣಿ ಗುರುಗಳ ಬಗ್ಗೆ ಗೀತೆಯೊಂದನ್ನು ಹಾಡಿದರು – ಬಿಜಾಪುರದ ಸಂಜೀವ್ ಬಿಳಗಿಯವರು ಕಾರ್ಯಕ್ರಮದ ಉದ್ದೇಶವನ್ನು ಮುನ್ನುಡಿದರು – ಕು. ಶಿವಾನಿಯ ನಿರೂಪಿಣೆಯೊಂದಿಗೆ ಆರಂಭವಾದ ಕಾರ್ಯಕ್ರಮವು – ಉಭಯಶ್ರೀಗಳ ಪ್ರವಚನದ ನಂತರ – ಶ್ರೀ ಸತ್ಯನಾರಾಯಣ್ ಜ್ಯೋಶಿಯವರ ವಂದನಾರ್ಪಣೆಯೊಂದಿಗೆ ಸಮಾಪ್ತವಾಯಿತು.
ಶ್ರೀಶ್ರೀ ಬ್ರಹ್ಮಾನಂದ ಭಾರತೀ ಸ್ವಾಮಿಗಳು ಜಗದ್ಗುರು ಶ್ರೀಶ್ರೀ ಶಂಕರಾಚಾರ್ಯರ ಮಹತ್ವದ ಬಗ್ಗೆ ತಿಳಿಸಿಕೊಟ್ಟರು. ಶ್ರೀಶ್ರೀ ಶಿವಾನಂದ ಭಾರತೀ ಚಿಂತಾಮಣಿ ಸ್ವಾಮಿಗಳು ಜಗದ್ಗುರು ಶ್ರೀಶ್ರೀ ಭಾರತೀ ತೀರ್ಥ ಮಹಾಸ್ವಾಮಿಗಳ ಬಗ್ಗೆ ತಿಳಿಸಿಕೊಟ್ಟರು.
ಚಿಂತಾಮಣಿ ಸ್ವಾಮಿಗಳು ತಿಳಿಸಿಕೊಟ್ಟ ಶ್ರೀಶ್ರೀ ಭಾರತೀ ತೀರ್ಥ ಮಹಾಸ್ವಾಮಿಗಳ ಜೀವನ ಚರಿತ್ರೆ ಕೇಳಿ ಜನರು ಬಹಳ ಭಾವುಕರಾದರು. “ಚಲನಚಿತ್ರವನ್ನು ಕಂಡಂತೆ, ಕಣ್ಣಿಗೆ ಕಟ್ಟಿದಂತೆ ಕಥೆಯನ್ನು ಹೇಳಿದರು, ಆಲಿಸಿ ಆನಂದವಾಯಿತು” ಎಂದು ಭಕ್ತರು ಉದ್ಗರಿಸಿದರು.
ಹೊಸಪೇಟೆ ಚಿಂತಾಮಣಿ ಮಠದಲ್ಲಿ ನಿನ್ನೆ ನಡೆದ ಶೃಂಗೇರಿ ಜಗದ್ಗುರು ಶ್ರೀ ಶ್ರೀ ಭಾರತೀ ತೀರ್ಥರ ಸನ್ಯಾಸ ಸ್ವೀಕಾರ ಸುವರ್ಣ ಮಹೋತ್ಸವದಲ್ಲಿ ಪ. ಪೂ. ಶಿವಾನಂದ ಭಾರತೀ ಚಿಂತಾಮಣಿ ಮಹಾಸ್ವಾಮಿಗಳು ಮಹಾ ಸನ್ನಿಧಾನಮ್ ಅವರ ಬಾಲ್ಯದ ಪ್ರಮುಖ ಘಟನೆಗಳ ಬಗ್ಗೆ ನೀಡಿದ ಪ್ರವಚನ ಅದ್ವಿತೀಯವಾಗಿದ್ದಿತು. ನಾವು ಚಲನಚಿತ್ರ ವೀಕ್ಷಣೆ ಮಾಡುವಾಗ ನಾವೇ ಪಾತ್ರಗಳಲ್ಲಿ ಲೀನವಾದಂತೆ, ಸೀತಾರಾಮಾಂಜನೇಯರ ಬಾಲ್ಯದ ಅವರ ಏಕ ಸಂಧಿ ಗ್ರಾಹಿತ್ವ, ಏಕಾಗ್ರತೆ, ಗುರುಗಳಲ್ಲಿ ಅಚಲ ವಿಶ್ವಾಸ, ನಾವು ನಮ್ಮೆದುರಿಗೆ ನಡೆಯುತ್ತಿದೆ ಎಂಬಂತೆ ಭಾಸವಾಗುತ್ತಿತ್ತು. ಇಂತಹ ಮೇಧಾವಿ, ನಿರರ್ಗಳ ಪ್ರವಚನ ಅನುಗ್ರಹಿಸುವ ಶ್ರೀಪಾಂದಂಗಳವರನ್ನು ಪಡೆದ ನಾವೇ ಧನ್ಯರು ಎಂದು ಭಕ್ತಾದಿಗಳು
ಶ್ರೀಶ್ರೀ ಭಾರತೀ ತೀರ್ಥ ಮಹಾಸ್ವಾಮಿಗಳವರ ಜೀವನ ಚರಿತ್ರೆಯಲ್ಲಿ ಅವರ ಜನನ ಹೇಗಾಯ್ತು ? ಎನ್ನುವುದರ ಕುರಿತು ಒಂದು ಸಣ್ಣ ಕಥೆ ಮೂಲಕ ಚಿಂತಾಮಣಿ ಮಠದ ಶ್ರೀಶಿವಾನಂದ ಭಾರತೀ ಚಿಂತಾಮಣಿ ಮಹಾಸ್ವಾಮಿಗಳವರ ಪ್ರವಚನದಲ್ಲಿ ತಿಳಿಸಿದರು.
Bharathi Tirtha ಕಾರ್ಯಕ್ರಮದ ನಂತರ ಶಂಕರಾಚಾರ್ಯರಿಗೆ ಮಹಾಮಂಗಳಾರತಿಯನ್ನು ನೆರವೇರಿಸಿ, ನೆರದಿದ್ದ ಎಲ್ಲಾ ಭಕ್ತರಿಗೆ ಸ್ವಾಮೀಜಿಗಳಿಂದ ಆಶೀರ್ವಾದ ಮೂಲಕ ಫಲವನ್ನ ನೀಡುವುದರ ಮೂಲಕ ಪ್ರಸಾದವನ್ನು ವಿತರಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಚಿಂತಾಮಣಿ ಮಠದ ಭಕ್ತರು ಹೊಸಪೇಟೆ ಮತ್ತು ಸುತ್ತಮುತ್ತಲಿನ ಬ್ರಾಹ್ಮಣ ಸಮಾಜದ ಸದಸ್ಯರು ಭಾಗವಹಿಸಿದ್ದರು. ವರ್ಣನ ಆರ್ಭಟಕ್ಕೆ ಕಾರ್ಯಕ್ರಮವನ್ನು ಮಠದ ಒಳಾಂಗಣದಲ್ಲಿ ಅಚ್ಚುಕಟ್ಟಾಗಿ ಆಯೋಜಿಸಲಾಗಿತ್ತು.
ಮುರುಳಿಧರ ನಾಡಿಗೇರ್