Sunday, December 7, 2025
Sunday, December 7, 2025

Sir M.V. Government Arts and Commerce College ಫಲಿತಾಂಶ ವಿಳಂಬ ಭದ್ರಾವತಿಯಲ್ಲಿ ಕಾಲೇಜು ವಿದ್ಯಾರ್ಥಿಗಳ ಆತ್ಮಹತ್ಯೆ ಯತ್ನ

Date:

Sir M.V. Government Arts and Commerce College ನ್ಯೂಟೌನ್ ಸರ್‌ಎಂವಿ ಕಲಾ ಮತ್ತು ವಾಣಿಜ್ಯ ಕಾಲೇಜಿನ ಅಂತಿಮ ವರ್ಷದ ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಪ್ರಥಮ ಮತ್ತು ದ್ವಿತೀಯ ವರ್ಷದ ಫಲಿತಾಂಶಗಳು ಬರದೆ ಭವಿಷ್ಯಕ್ಕೆ ಕೊಡಲಿ ಪೆಟ್ಟಾಗಿದೆ ಎಂದು ಖಂಡಿಸಿ ವಿದ್ಯಾರ್ಥಿ ಸಂಘದ ಅಧ್ಯಕ್ಷ ಪ್ರೇಮ್‌ಕುಮಾರ್ ಮತ್ತು ಕಾರ್ಯದರ್ಶಿ ಅಬ್ದುಲ್ ಆಸೀಬ್ ಖಾನ್ ಕಾಲೇಜು ಕಟ್ಟಡ ಮೇಲಿಂದ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಮಂಗಳವಾರ ನಡೆಯಿತು.

ಇದರಿಂದ ವಿದ್ಯಾರ್ಥಿ ಮತ್ತು ಉಪನ್ಯಾಸಕರಲ್ಲಿ ಕೆಲಕಾಲ ಆತಂಕ ಹುಟ್ಟತ್ತು. ಅನೇಕ ಉಪನ್ಯಾಸಕರು ಕೆಳಗೆ ಬನ್ನಿ ಕುಳಿತು ಮಾತಾಡೋಣ ಎಂದರೂ ಏನೂ ಪ್ರಯೋಜನವಾಗಿಲ್ಲ.

ನ್ಯೂಟೌನ್ ಪೊಲೀಸರು ಮತ್ತು ಅಗ್ನಿ ಶಾಮಕ ದಳ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ಬಂದು ಕೆಳಗಿಳಿಯುವಂತೆ ಮನವಿ ಮಾಡಿದರೂ ಜುಂ ಎನ್ನಲಿಲ್ಲ. ಪೊಲೀಸರು ಮತ್ತು ಉಪನ್ಯಾಸಕರು ಅನೇಕರು ಮಹಡಿ ಹತ್ತಿ ಇಳಿಸಲು
ಹೋದರೆ ಕೆಳಗೆ ಜಿಗಿಯುವುದಾಗಿ ಬೆದರಿಸಿದರು.

ಪ್ರಾಂಶುಪಾಲ ಡಾ: ಶೈಲಜ ಹೊಸಳ್ಳೇರ್ ಮೈಕ್ ಹಿಡಿದು ವಿವಿ ಅಧಿಕಾರಿಗಳ ಬಳಿ ಮಾತಾಡಿದ್ದೇನೆ. ಫೈಲ್ ತರಲು ಹೇಳಿದ್ದಾರೆ, ಎಲ್ಲಾ ಉಪನ್ಯಾಸಕರನ್ನೂ ಹಳೇಯ ಪ್ರಾಂಶುಪಾಲರನ್ನು ಕರೆಸಿ ಮಾತಾಡಿ ಸಮಸ್ಯೆ ಬಗೆಹರಿಸೋಣ ಎಂದರೂ ಇಳಿಯದೆ ಸುಮಾರು ಒಂದು ಗಂಟೆ ಕಾಲ ನಡುಕ ಹುಟ್ಟಿಸಿದ್ದರು.

ಫೋನಿನಲ್ಲಿ ರಿಜಿಸ್ಟ್ರಾರ್ ಗೋಪಿನಾಥ್ ಭರವಸೆ:
ಕುವೆಂಪು ವಿವಿ ಪರೀಕ್ಷಾಂಗ ವಿಭಾಗದ ಮೌಲ್ಯಮಾಪನ ಕುಲ ಸಚಿವ ಗೋಪಿನಾಥ್ ಮೌಬೈಲ್‌ನಲ್ಲಿ ಮಾತನಾಡಿ ಕಳೆದ ವರ್ಷ ಇಂತಹ ದೋಷಗಳ ಫೈಲ್ ಬಂದಿದ್ದು ಸರಿಪಡಿಸಲಾಗಿದೆ. ಮತ್ತೆ ಇಂತಹ ದೋಷಗಳಿದ್ದರೆ ಪ್ರಾಂಶುಪಾಲರು ಐಎಂ ಮಾರ್ಕ್ಸ್‌ಗಳನ್ನು ಸರಿಪಡಿಸಿಕೊಂಡು ಫೈಲ್ ತಂದರೆ ಸರಿಪಡಿಸಿ ಕೊಡಲಾಗುವುದು. ಇದನ್ನು ಪ್ರಾಂಶುಪಾಲರು ಮಾಡಬೇಕು. ಇಲ್ಲದಿದ್ದರೆ ನೋಟೀಸ್ ಜಾರಿಗೊಳಿಸಲಾಗುವುದು ಎಂದರು.

ಇದರಿಂದ ಸಮಾದಾನಗೊಂಡು ವಿದ್ಯಾರ್ಥಿಗಳು ಕಟ್ಟಡದ ಮೇಲಿಂದ ಕೆಳಗಿಳಿದರು.

Sir M.V. Government Arts and Commerce College ವಿದ್ಯಾರ್ಥಿ ಮುಖಂಡರ ಅಳಲು:
ಕಾಲೇಜಿನ ವಿದ್ಯಾರ್ಥಿಗಳಿಗೆ ಕಳೆದ ಮೂರು ವರ್ಷಗಳಿಂದ ಸರಿಯಾಗಿ ಫಲಿತಾಂಶಗಳು ಬರುತ್ತಿಲ್ಲ. ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಪ್ರಥಮ ಮತ್ತು ದ್ವಿತೀಯ ವರ್ಷದ ಫಲಿತಾಂಶಗಳು ಬಂದಿಲ್ಲ. ಬಂದರೂ ಕೆಲವರಿಗೆ ಪಾಸ್ ಎಂದು ಬಂದರೆ ಮತ್ತೆ ಕೆಲವರಿಗೆ ಫೇಲ್, ವಿಥಲ್ಡ್, ಆಬ್ಸೆಂಟ್ ಇತ್ಯಾದಿ ಬರುತ್ತಿದೆ. ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಪ್ರಥಮ ದ್ವಿತೀಯ ವರ್ಷಗಳ ಫಲಿತಾಂಶಗಳಲ್ಲಿ ಹಿನ್ನಡೆ ಸಾಧಿಸಿದ್ದರೆ ಅಥವಾ ಫೇಲ್ ಆಗಿದ್ದರೆ ಅಂತಿಮ ವರ್ಷದ ಪರೀಕ್ಷೆಗೆ ಹಾಜರಾಗಲು ಅವಕಾಶ ನೀಡಲ್ಲ. ಇದರಿಂದ ವಿದ್ಯಾರ್ಥಿಗಳ ಭವಿಷ್ಯಕ್ಕೆ ಕೊಡಲಿ ಪೆಟ್ಟಾಗಿದೆ. ದೋಷ ಸರಿಪಡಿಸುವಂತೆ ಕಳೆದೆರೆಡು ವರ್ಷಗಳಿಂದ ಹೋರಾಟ ಮಾಡಿದ್ದರೂ ಪ್ರಯೋಜನವಾಗಿಲ್ಲ. ಆದ್ದರಿಂದ ಆತ್ಮಹತ್ಯೆಯೇ ಕೊನೆ ಹೋರಾಟವಾಗಿದೆ ಎಂದು ಅಳಲು ತೋಡಿಕೊಂಡಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

ಡಿಸೆಂಬರ್ 6. ಸಾಮಾಜಿಕ ಭದ್ರತಾ ಸೌಲಭ್ಯ ವಿಸ್ತರಣೆ ಅರಿವು ಕಾರ್ಯಾಗಾರ

Shivamogga District Chamber of Commerce and Industry ಶಿವಮೊಗ್ಗ ಜಿಲ್ಲಾ...

Madhu Bangarappa ಹವಾಮಾನಾಧಾರಿತಬೆಳೆವಿಮೆ ಮೊತ್ತ ಪಾವತಿ ನ್ಯೂನತೆ ಸರಿಪಡಿಸಲು ಶೀಘ್ರ ಕ್ರಮ- ಮಧು ಬಂಗಾರಪ್ಪ

Madhu Bangarappa ಅತಿವೃಷ್ಟಿ, ಅನಾವೃಷ್ಟಿ, ತಾಪಮಾನದ ಏರಿಳಿತದಂತಹ ಹವಾಮಾನ ವೈಪರಿತ್ಯಗಳಿಂದ ತೋಟಗಾರಿಕೆ...

DC Shivamogga ಕೆಎಸ್ಎಫ್ ಸಿ ಎಸ್ ಸಿ ಮಳಿಗೆಗಳಲ್ಲಿ ಸಗಟು ಭತ್ತ ಖರೀದಿ ವ್ಯವಸ್ಥೆ- ಗುರುದತ್ತ ಹೆಗಡೆ

DC Shivamogga 2025-26 ನೇ ಸಾಲಿನ ಮುಂಗಾರು ಋತುವಿನಲ್ಲಿ ಕನಿಷ್ಟ ಬೆಂಬಲ...