Gopalakrishna Belur ಶರಾವತಿ ಹಿನ್ನೀರು ಪ್ರದೇಶದ ಜನರು ಕತ್ತಲಿನಲ್ಲಿ ಇರಬಾರದು. ನಾಡಿಗೆ ಬೆಳಕು ನೀಡಲು ತಮ್ಮ ಸರ್ವಸ್ವವನ್ನು ಕಳೆದುಕೊಂಡ ಹಿನ್ನೀರಿನ ಜನರಿಗೆ ದಿನದ ೨೪ ಗಂಟೆ ವಿದ್ಯುತ್ ಕೊಡುವುದು ನಮ್ಮ ಕರ್ತವ್ಯ. ಮೆಸ್ಕಾಂ ಅಧಿಕಾರಿಗಳು ತುಮರಿ ಸೇರಿದಂತೆ ಶರಾವತಿ ಹಿನ್ನೀರು ಪ್ರದೇಶದ ಬಗ್ಗೆ ಹೆಚ್ಚು ಗಮನ ಹರಿಸಿ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಮೆಸ್ಕಾಂ ಅಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ.
ಇಲ್ಲಿನ ಉಪವಿಭಾಗಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸೋಮವಾರ ಕರೆಯಲಾಗಿದ್ದ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ನಾವು ಬೆಳಕಿನಲ್ಲಿದ್ದು ಹಿನ್ನೀರಿನ ಜನರು ಕತ್ತಲಿನಲ್ಲಿರುವುದು ಎಂತಹ ನ್ಯಾಯ. ಅವರ ಸಮಸ್ಯೆಗೆ ಸ್ಪಂದಿಸಿ ಎಂದು ಸೂಚನೆ ನೀಡಿದರು.
Gopalakrishna Belur ಮಳೆಗಾಲ ಪ್ರಾರಂಭವಾಗಿದ್ದು ಕೃಷಿ ಮತ್ತು ತೋಟಗಾರಿಕೆ ಇಲಾಖೆ ಅಧಿಕಾರಿಗಳು ಹೆಚ್ಚು ಜಾಗೃತೆಯಿಂದ ಕೆಲಸ ಮಾಡಬೇಕು. ರೈತರ ಯಾವುದೇ ದೂರುಗಳು ನನ್ನತನಕ ಬರಬಾರದು. ಸೊಸೈಟಿ ಮೂಲಕ ಗೊಬ್ಬರವನ್ನು ರೈತರಿಗೆ ಕೊಡಲು ಈಗಾಗಲೆ ಅಗತ್ಯಕ್ರಮ ಕೈಗೊಳ್ಳಲಾಗಿದೆ. ಬೆಳೆವಿಮೆ ಬಗ್ಗೆ ರೈತರಿಗೆ ಮಾಹಿತಿ ನೀಡಿ ಹೆಚ್ಚು ರೈತರು ವಿಮೆ ಮಾಡಿಸಿಕೊಳ್ಳುವಂತೆ ಪ್ರೇರೆಪಿಸಿ. ಮಣ್ಣು ಪರೀಕ್ಷೆಯನ್ನು ಕಾಲಕಾಲಕ್ಕೆ ನಡೆಸಿ ರೈತರು ಉತ್ತಮ ಫಸಲು ತೆಗೆಯಲು ನೆರವಾಗಿ ಎಂದು ಸೂಚಿಸಿದ ಬೇಳೂರು, ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ ನೂರಾರು ಕೋಟಿ ಖರ್ಚು ಮಾಡಿದೆ. ನಿಗಧಿತ ಅವಧಿಯಲ್ಲಿ ಗ್ರಾಮಗಳಿಗೆ ನೀರು ಹರಿಸಬೇಕು. ಮುಂದಿನ ಏಪ್ರಿಲ್‌ನೊಳಗೆ ಆವಿನಹಳ್ಳಿ, ಭಾರಂಗಿ ಮತ್ತು ಕಸಬಾ ಹೋಬಳಿಗೆ ನೀರು ಹರಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಗಮನಹರಿಸಿ ಎಂದರು.
Gopalakrishna Belur ಶರಾವತಿ ಹಿನ್ನೀರು ಪ್ರದೇಶದ ಜನತೆ ಆಶೋತ್ತರಗಳ ಬಗ್ಗೆ ಗಮನ ಹರಿಸಲು ಆಧಿಕಾರಿಗಳಿಗೆ ಆಗ್ರಹಿಸಿದ ಶಾಸಕ ಬೇಳೂರು ಗೋಪಾಲಕೃಷ್ಣ
Date: