Saturday, June 20, 2026
Saturday, June 20, 2026

Bhadravathi Urban Development Authority ನ್ಯಾಯಾಲಯದ ಆದೇಶದಂತೆ ವಾಜಪೇಯಿ ಬಡಾವಣೆ ನಿವೇಶನ ಹಂಚಿಕೆ ಪ್ರಕ್ರಿಯೆ- ಸೂಡಾ ಅಧ್ಯಕ್ಷ ಹೆಚ್.ಎನ್.ಸುಂದರೇಶ್

Date:

Bhadravathi Urban Development Authority ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರವು ೨೦೦೯-೧೦ನೇ ಸಾಲಿನಲ್ಲಿ ನಗರದ ಹೊರವಲಯ ಮಲ್ಲಿಗೇನಹಳ್ಳಿಯಲ್ಲಿ ಸಾರ್ವಜನಿಕ ವಿತರಣೆಗಾಗಿ ಸುಮಾರು ೧೭೨ಎಕರೆ ಪ್ರದೇಶದಲ್ಲಿ ಸೃಜಿಸಲಾಗಿದ್ದ ಅಟಲ್ ಬಿಹಾರಿ ವಾಜಪೇಯಿ ಬಡಾವಣೆಯ ನಿವೇಶನ ಹಂಚಿಕೆಯಲ್ಲಿ ಆಗಿರಬಹುದಾದ ಸಮಸ್ಯೆಯ ಪರಿಹಾರಕ್ಕಾಗಿ ೨೦೨೩ರ ಆಗಸ್ಟ್ ಮಾಹೆಯಲ್ಲಿ ನ್ಯಾಯಾಲಯ ನೀಡಿದ ಆದೇಶದಂತೆ ಅರ್ಹ ಫಲಾನುಭವಿಗಳಿಗೆ ನಿವೇಶನ ಹಂಚಲು ಕ್ರಮ ವಹಿಸಲಾಗುವುದು ಎಂದು ಸೂಡಾ ಅಧ್ಯಕ್ಷ ಹೆಚ್.ಎನ್.ಸುಂದರೇಶ್ ಅವರು ಹೇಳಿದರು.
ಅವರು ಇಂದು ತಮ್ಮ ಕಚೇರಿ ಸಭಾಂಗಣದಲ್ಲಿ ಮಾಧ್ಯಮ ಪ್ರತಿನಿಧಿಗಳಿಗೆ ಈ ಕುರಿತು ವಿವರ ನೀಡಿ ಮಾತನಾಡುತ್ತಿದ್ದರು. ನ್ಯಾಯಾಲಯದ ತೀರ್ಪಿನಂತೆ ಸೂಡಾದಲ್ಲಿ ಸೇವೆ ಸಲ್ಲಿಸುತ್ತಿರುವ ೧೭ ಸಿಬ್ಬಂಧಿಗಳು ಸೇರಿದಂತೆ ಅಧ್ಯಕ್ಷರ ವಿವೇಚನಾ ಕೋಟಾದಡಿ ಹಂಚಿಕೆ ಮಾಡಲಾಗಿದ್ದ ೧೪೨ ಜನರು ಮತ್ತು ಪತಿ-ಪತ್ನಿ ಪ್ರಕರಣಗಳಲ್ಲಿ ಆಯ್ಕೆಗೊಂಡಿದ್ದ ೧೬ಫಲಾನುಭವಿಗಳನ್ನು ಹೊರತುಪಡಿಸಿ, ಅಪರ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಈವರೆಗೆ ಪರಿಶೀಲಿಸಲಾಗಿರುವ ೩೧೮ ಅರ್ಜಿಗಳ ಫಲಾನುಭವಿಗಳಿಗೆ ನಿವೇಶನಗಳನ್ನು ಹಂಚಿಕೆ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದರು.
Bhadravathi Urban Development Authority ನ್ಯಾಯಾಲಯದ ಈ ಆದೇಶಕ್ಕೆ ಮೊದಲು, ಲೋಕಾಯುಕ್ತರ ತನಿಖಾ ವರದಿಯ ನಂತರ, ಪ್ರಾಧಿಕಾರದ ಸಭೆಯ ನಿರ್ಣಯದಂತೆ ನಿವೃತ್ತ ನ್ಯಾಯಾಧೀಶರ ಸಮಿತಿಯಲ್ಲಿ ವಿಸ್ತೃತವಾಗಿ ಸಮಾಲೋಚನೆ ನಡೆಸಿ, ಅರ್ಹರನ್ನು ಆಯ್ಕೆ ಮಾಡಲಾಗಿತ್ತು. ಕೆಲವು ಸೌಲಭ್ಯ ವಂಚಿತ ಅರ್ಜಿದಾರರು ಹಲವು ನಿಯಮಗಳನ್ನು ಉಲ್ಲಂಘಿಸಲಾಗಿರುವ ಬಗ್ಗೆ ಉಚ್ಚ ನ್ಯಾಯಾಲದಯಲ್ಲಿ ಪ್ರಶ್ನಿಸಿದ್ದರು. ಸದರಿ ಪ್ರಕರಣದಲ್ಲಿ ವಾದ-ವಿವಾದಗಳನ್ನು ಆಲಿಸಿದ ನ್ಯಾಯಾಲಯವು ನೀಡಿದ ತೀರ್ಪಿನಂತೆ ಪ್ರಸ್ತುತ ಕ್ರಮ ವಹಿಸಲಾಗುತ್ತಿದೆ ಎಂದರು.
ವಾಜಪೇಯಿ ಬಡಾವಣೆಯಲ್ಲಿ ೧೮೦೧ನಿವೇಶನಗಳನ್ನು ಸೃಜಿಸಲಾಗಿದೆ. ಈ ನಿವೇಶನಗಳಲ್ಲಿ ೨೧೭ನಿವೇಶನಗಳನ್ನು ಭೂಮಾಲೀಕರಿಗೆ ಪರಿಹಾರ ರೂಪದಲ್ಲಿ ನೀಡಲಾಗಿದೆ. ೨೫೦ಮೂಲೆ ನಿವೇಶನಗಳನ್ನು ಕಾಯ್ದಿರಿಸಲಾಗಿದೆ. ೧೯ನಿವೇಶನಗಳನ್ನು ವೀರಪ್ಪನ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದವರಿಗೆ ಸರ್ಕಾರದ ಆದೇಶದಂತೆ ವಿತರಿಸಲಾಗಿದೆ. ಭೂಮಾಲೀಕರಿಗೆ ನಿವೇಶನ ರೂಪದ ಪರಿಹಾರ ಪಡೆಯದೇ ನಗದು ರೂಪದ ಪರಿಹಾರ ಪಡೆದಾಗ ಉಳಿದ ೧೪೨ ನಿವೇಶನಗಳನ್ನು ವಿವೇಚನಾ ಕೋಟಾದಡಿ ಹಂಚಿಕೆ ಮಾಡಲಾಗಿದೆ ಎಂದರು.
ಪ್ರಾಧಿಕಾರದ ವ್ಯಾಪ್ತಿಗೊಳಪಡುವ ಭದ್ರಾವತಿಯಲ್ಲಿ ೩೪ಎಕರೆ ಭೂಪ್ರದೇಶವನ್ನು ಗುರುತಿಸಲಾಗಿದ್ದು, ಅಭಿವೃದ್ಧಿಪಡಿಸಲು ಉದ್ದೇಶಿಸಲಾಗಿದೆ. ಅಲ್ಲದೇ ಊರುಗಡೂರು ಪ್ರದೇಶದಲ್ಲಿ ಈಗಾಗಲೇ ೮೫ಶೇ. ಕಾಮಗಾರಿ ಪೂರ್ಣಗೊಂಡಿದ್ದು, ಸುಮಾರು ೬೮೭ನಿವೇಶನಗಳ ಹಂಚಿಕೆ ಕಾರ್ಯ ಶೀಘ್ರದಲ್ಲಿ ಕೈಗೊಳ್ಳಲಾಗುವುದು ಎಂದರು.
ಸಭೆಯಲ್ಲಿ ಸೂಡಾ ಆಯುಕ್ತ ವಿಶ್ವನಾಥ ಮುದ್ದಜ್ಜಿ, ಇಂಜಿನಿಯರ್ ಬಸವರಾಜ್ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

B.Y. Raghavendra ಪಿಎಂ- ವಿಬಿಆರ್ ವೈ ಯೋಜನೆಯಿಂದ ಉದ್ಯೋಗ ಸೃಷ್ಠಿ- ಬಿ.ವೈ.ರಾಘವೇಂದ್ರ

B.Y. Raghavendra ಪ್ರಧಾನ ಮಂತ್ರಿ ವಿಕಸಿತ್ ರೋಜ್ ಗಾರ್ ಯೋಜನೆ ಅಡಿಯಲ್ಲಿ...

Rotary Organization ಸಮಾಜಮುಖಿ ಸೇವೆಗಳ ಮೂಲಕ ರೋಟರಿ ಸಂಸ್ಥೆ ಮುಂಚೂಣಿಯಲ್ಲಿದೆ- ರೋಟರಿ ಗೌರ್ನರ್ ಕೆ.ಫಾಲಾಕ್ಷ

Rotary Organization ಮನುಕುಲದ ಮಾನವೀಯ ಸೇವೆಯಲ್ಲಿ ರೋಟರಿ ಸಂಸ್ಥೆ ಮುಂಚೂಣಿಯಲ್ಲಿದೆ ಪ್ರಪಂಚಾದ್ಯಂತ...

DC Shivamogga ಹುಲಿಕಲ್ ಘಾಟಿಯಲ್ಲಿ ಮಜಲು ಬಸ್ ವಾಹನಗಳ ಸಂಚಾರಕ್ಕೆ ಅವಕಾಶ- ಪ್ರಭುಲಿಂಗ ಕವಳಿಕಟ್ಟಿ

DC Shivamogga ಸಾರ್ವಜನಿಕ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಜೂ. 18 ರಿಂದ ರಾಜ್ಯ...