Robot Suicide News ಜೀವವಿರುವ ದುರ್ಬಲ ಮನಸ್ಸಿರುವ ಮನುಷ್ಯರು ತಾವು ಮಾಡಿದ ಕೆಲ ತಪ್ಪುಗಳಿಂದಲೂ ಅಥವಾ ಬೇರೆಯವರ ಕಿರುಕುಳದಿಂದಲೂ ಜೀವನದ ಜಿಗುಪ್ಸೆಯಿಂದಲೂ ಆತ್ಮಹತ್ಯೆಯ ದಾರಿ ಹಿಡಿಯುತ್ತಾರೆ. ಇದು ದಿನನಿತ್ಯ ನಡೆಯುವ ಸಹಜವಾದ ಘಟನೆಗಳು. ಆದರೆ ಮನುಷ್ಯ ತಯಾರಿಸಿದ ರೋಬೋಟ್ ಆತ್ಮಹತ್ಯೆ ಮಾಡಿಕೊಂಡಿದೆಯಂತೆ. ಹೀಗೆ ಹೇಳಲು ನಂಬಲು ಸಾಧ್ಯವೆ..? ಹೌದು ಎನ್ನಬೇಕು.
ಮಧ್ಯ ದಕ್ಷಿಣ ಕೊರಿಯಾದ ಪುರಸಭೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ರೋಬೋಟ್ ಮೆಟ್ಟಿಲುಗಳ ಮೇಲಿಂದ ಜಿಗಿದು ಆತ್ಮಹತ್ಯೆಗೆ ಶರಣಾಗಿದೆ. ವಿಶ್ವದಲ್ಲಿಯೇ ಮೊಟ್ಟ ಮೊದಲ ಬಾರಿಗೆ ರೋಬೋಟ್ ಒಂದು ಆತ್ಮಹತ್ಯೆ ಮಾಡಿಕೊಂಡಿರುವುದು ಕೇಸ್ ಇದಾಗಿದೆ.
ಮೆಟ್ಟಿಲುಗಳ ಕೆಳಗೆ ಬಿದ್ದ ನಂತರ ರೋಬೋಟ್ ನಿಷ್ಕ್ರಿಯವಾಗಿದೆ ಎಂದು ಗುಮಿ ಸಿಟಿ ಕೌನ್ಸಿಲ್ ಹೇಳಿದೆ. ಕಟ್ಟಡದ ಮೊದಲ ಮತ್ತು ಎರಡನೇ ಮಹಡಿಗಳ ನಡುವಿನ ಮೆಟ್ಟಿಲಸಾಲುಗಳಲ್ಲಿ ಬಿದ್ದಿರುವುದು ಕಂಡುಬಂದಿದ್ದು, ರೋಬೋಟ್ ನ ಭಾಗಗಳನ್ನು ಸಂಗ್ರಹಿಸಲಾಗಿದೆ.
ಮೃತ ರೋಬೋಟ್ ಅಧಿಕೃತವಾಗಿ ಪಾಲಿಕೆಯ ಭಾಗವಾಗಿತ್ತು. ಕ್ಯಾಲಿಫೋರ್ನಿಯಾದ ಬೇರ್ ರೋಬೋಟಿಕ್ಸ್ ಇದನ್ನು ಅಭಿವೃದ್ಧಿಪಡಿಸಿತ್ತು.
ಮೊದಲ ಬಾರಿ ರೋಬೋಟ್ ಆತ್ಮಹತ್ಯೆ ಮಾಡಿಕೊಂಡಿದೆ ಎಂದು ಕರೆಯಲ್ಪಡುವ ದಕ್ಷಿಣ ಕೊರಿಯಾದ ನಗರದ ಸ್ಥಳೀಯರು ಈಗ ಶೋಕ ವ್ಯಕ್ತಪಡಿಸುತ್ತಿದ್ದಾರೆ. ಪ್ರತ್ಯಕ್ಷದರ್ಶಿಗಳು ಹೇಳುವ ಪ್ರಕಾರ ರೋಬೋಟ್ ಒಂದು ಸ್ಥಳದಲ್ಲಿ ‘ಏನೋ ಇದ್ದಂತೆ’ ಎಂಬಂತೆ ತಿರುಗುತ್ತಿತ್ತು, ಆದರೆ ಪತನಕ್ಕೆ ನಿಖರವಾದ ಕಾರಣವನ್ನು ತನಿಖೆ ಮಾಡಲಾಗುತ್ತಿದೆ. ‘ತುಂಡುಗಳನ್ನು ಸಂಗ್ರಹಿಸಲಾಗಿದೆ ಮತ್ತು ಕಂಪನಿಯು ವಿಶ್ಲೇಷಿಸುತ್ತದೆ’ ಎಂದು ಹೇಳಿದರು.
Robot Suicide News ಆತ್ಮಹತ್ಯೆ ಬಗ್ಗೆ ಅಧಿಕಾರಿಯೊಬ್ಬರು ಸಹ ವಿಷಾದ ವ್ಯಕ್ತಪಡಿಸಿದ್ದಾರಂತೆ, ಹೌದು ಮನುಷ್ಯರ ಸಾವಿಗೆ ಸಂತಾಪ ಸೂಚಿಸುವಂತೆ ಇಲ್ಲಿನ ಘಟನೆಗೂ ಅಧಿಕಾರಿ ವಿಷಾದಿಸಿದ್ದಾರಂತೆ. ಮುನ್ಸಿಪಾಲ್ ಕಾರ್ಪೊರೇಷನ್ ನ ಕೆಲಸದಲ್ಲಿ ರೋಬೋಟ್ ಸಹಾಯ ಮಾಡುತ್ತಿತ್ತು. ಕಳೆದ ಒಂದು ವರ್ಷದಿಂದ ಗುಮಿ ನಗರದ ನಿವಾಸಿಗಳಿಗೆ ಆಡಳಿತಾತ್ಮಕ ಕೆಲಸದಲ್ಲಿ ಬ್ಯುಸಿ ಆಗಿತ್ತು. ಕಳೆದ ವಾರ ಮೆಟ್ಟಿಲುಗಳ ಕೆಳಭಾಗದಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ರೋಬೋಟ್ ಪತ್ತೆಯಾಗಿದೆ. ಪ್ರತ್ಯಕ್ಷದರ್ಶಿಗಳು ರೋಬೋಟ್ ಬೀಳುವ ಮೊದಲು ಓಡಾಡುತ್ತಿರೋದನ್ನು ನೋಡಿದ್ದಾರೆ. ಆತ್ಮಹತ್ಯೆಗೂ ಮುನ್ನ ಕೆಲಸ ಮಾಡುತ್ತಿತ್ತು. ಯಾಕೆ ಹಾಗೆ ಮಾಡಿಕೊಂಡಿತು ಅನ್ನೋದ್ರ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರಂತೆ.