RM Manjunatha Gowda ಕೇಂದ್ರ ಸರ್ಕಾರ ನಬಾರ್ಡ್ ಮೂಲಕ ರಾಜ್ಯಕ್ಕೆ ಪುನರ್ಧನ ನೀಡುವಲ್ಲಿ ನಿರ್ಲಕ್ಷ್ಯ ಧೋರಣೆಯೊಂದಿಗೆ ತಾರತಮ್ಯ ಮಾಡುತ್ತಿದ್ದು,ಇದರಿಂದ ರಾಜ್ಯದ ಕೃಷಿ ವಲಯಕ್ಕೆ ಹೊಡೆತ ಬಿದ್ದಿದೆ ಎಂದು ಹಿರಿಯ ಸಹಕಾರಿ,ಜಿಲ್ಲಾ ಡಿ.ಸಿ.ಸಿ.ಬ್ಯಾಂಕ್ ನಿರ್ದೇಶಕ,ಮಾಜಿ ಅಧ್ಯಕ್ಷ ಆರ್.ಎಂ.ಮಂಜುನಾಥ್ ಗೌಡ ಹೇಳಿದರು.
ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರಕಾರ ನಬಾರ್ಡ್ ಮೂಲಕ ಕೊಡುವ ಪುನರ್ಧನವನ್ನು ೭೦% ನಿಂದ ೨೩% ಇಳಿಸಿದೆ,ಬೇರೆ ರಾಜ್ಯಗಳಿಗೆ ೧೦೦%ಪುನರ್ಧನ ನೀಡುವ ಕೇಂದ್ರ ಸರಕಾರ ಕರ್ನಾಟಕವನ್ನು ನಿರ್ಲಕ್ಷಿಸಿದೆ,ನಬಾರ್ಡ್ ಕೃಷಿ ವಿರೋಧಿ ಧೋರಣೆ ಅನುಸರಿಸುತ್ತಿದೆ ಎಂದರು.
RM Manjunatha Gowda ಇತ್ತೀಚೆಗೆ ನಡೆದ ಜಿಲ್ಲಾ ಡಿ.ಸಿ.ಸಿ.ಬ್ಯಾಂಕ್ ಚುನಾವಣೆಯಲ್ಲಿ ನಮಗೆ ನಿರೀಕ್ಷಿತ ಗೆಲುವು ಬಂದಿದೆ. ನನ್ನ ಸಹಕಾರಿ ಬದುಕಲ್ಲಿ ಇದೊಂದು ಸದಾ ನೆನಪಿಡುವ ಚುನಾವಣೆಯಾಗಿದೆ. ಜಾತಿ,ಪಕ್ಷ ಹೊರತುಪಡಿಸಿ ಸಹಕಾರಿ ವ್ಯವಸ್ಥೆ ಇರಬೇಕು ಎಂಬ ಸಿದ್ದಾಂತವನ್ನು ಗಾಳಿಗೆ ತೂರಿ ಕೆಲವರು ಸ್ಪರ್ಧಿಸಿದ್ದರು.
ಸಹಕಾರಿ ಕ್ಷೇತ್ರದ ಬಗ್ಗೆ ಅರಿವಿಲ್ಲದವರೂ ಕೂಡ ಈ ಬಾರಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಇವರಿಗೆ ಸಹಕಾರಿಗಳು ತಕ್ಕ ಉತ್ತರ ನೀಡಿದ್ದಾರೆ. ಆದರೆ ಪಕ್ಷಾತೀತವಾಗಿ ಕೆಲವು ಸಹಕಾರಿಗಳು ನಮಗೆ ಬೆಂಬಲಿಸಿ ಪ್ರಜಾಪ್ರಭುತ್ವ ಮಾದರಿಯ ಚುನಾವಣೆ ಎಂದು ಸಹಕರಿಸಿದರು ಎಂದರು.
ಈ ಗೋಷ್ಠಿಯಲ್ಲಿ ಡಿ.ಸಿ.ಸಿ.ಬ್ಯಾಂಕ್ ನಿರ್ದೇಶಕ ಬಸವಾನಿ ವಿಜಯದೇವ್ ಉಪಸ್ಥಿತರಿದ್ದರು.