T20 cricket ಭಾರತದ ಕ್ರಿಕೆಟ್ ಪ್ರಿಯರಿಗೆ ಸಿಕ್ಕಾಪಟ್ಟೆ ಸಂತೋಷದ ಸುದ್ದಿ.
ವೆಸ್ಟ್ ಇಂಡೀಸ್ ಬಾರ್ಬಡೋಸ್,ಕೆನ್ಸಿಂಗ್ ಟನ್ ಕ್ರೀಡಾಂಗಣದಲ್ಲಿ ಈಗಾಗಲೇ ಟಿ20 ವಿಶ್ವಕಪ್ ಗೆ ಇಂಡಿಯಾ ಟೀಮ್
ಮುತ್ತಿಕ್ಕಿದೆ. ಈ ಸಮಾಚಾರ ಮಿಂಚಿನಂತೆ ಹರಡಿದೆ.
ಪಂದ್ಯಾವಳಿಯ ಎಲ್ಲಾ ಮ್ಯಾಚುಗಳನ್ನ
ಗೆಲ್ಲುತ್ತಾ ಬಂದ ಟೀಮ್ ಇಂಡಿಯ
ಆತ್ಮವಿಶ್ವಾಸ ಹೆಚ್ಚಿಸಿಕೊಂಡಿತ್ತು.
ಟಾಸ್ ಗೆದ್ದ ಭಾರತ
ಅರ್ಧಾಂಶ ಗೆಲುವನ್ನ
ಕಿಸೆಗೆ ಹಾಕಿಕೊಂಡಿತ್ತು.
ರೋಹಿತ್ ಶರ್ಮ ಮತ್ತು ವಿರಾಟ್ ಕೊಹ್ಲಿ ಎಂದಿನಂತೆ
ಆರಂಭಿಕ ಬ್ಯಾಟರ್ ಗಳಾಗಿ ಕ್ರೀಸ್ ನಲ್ಲಿದ್ದರು.
ಅನುಭವಿ ಬೌಲರ್ ಕೇಶವ ಮಹಾರಾಜ್
ರೋಹಿತ್ ಅವರ ವಿಕೆಟನ್ನ
ಕಡಿಮೆ ಮೊತ್ತಕ್ಕೆ ಬಲಿ ತೆಗೆದುಕೊಂಡರು.
ಶರ್ಮಾ ವೈಯಕ್ತಿಕ 9 ರನ್ ಗಳಿಸಿದ್ದರು. ಇಂಡಿಯ ಆಗ ಕೇವಲ 23 ರನ್ ಫಲಕದಲ್ಲಿ ಹೊಂದಿತ್ತು. ಶರ್ಮಾ ಬ್ಯಾಟ್ ನಿಂದ
ಬಿರುಸಿನ ಹೊಡೆತಗಳನ್ನ ನಿರೀಕ್ಷೆ ಮಾಡಿದವರಿಗೆ ನಿರಾಸೆಯಾಗಿತ್ತು.
ನಂತರ ಬಂದ ರಿಷಭ್ ಬಹಳ ಹೊತ್ತು ನಿಲ್ಲಲಿಲ್ಲ.
ಕೇಶವ್ ಮಹಾರಾಜ್ ಬೌಲಿಂಗಿಗೆ ವಿಕೆಟ್ ಒಪ್ಪಿಸಿದರು.
T20 cricket ಆಗ ಇಂಡಿಯಾದ ಸ್ಕೋರ್ 23 ರಲ್ಲೇ ಇತ್ತು.
ಆದರೆ ಇಂಡಿಯಾ ತಂಡದ ಅದೃಷ್ಟ ಇನ್ನೊಂದು ತುದಿಯಲ್ಲಿ ವಿರಾಟ್ ನಿಶ್ಚಲವಾಗಿ ಬ್ಯಾಟು ಬೀಸುತ್ತಿದ್ದರು.
ತಾಳ್ಮೆಯ ಆಟವಾಡಿ 76 ರನ್ ಗಳಿಸಿದರು.
ಅವರಿಗೆ ಸರಿಯಾದ ಸಾಥ್ ನೀಡಿದ ಅಕ್ಷರ್ ಪಟೇಲ್ ಸ್ಕೋರ್ ಬೋರ್ಡನ್ನ ಚಲನೆಯಲ್ಲಿಟ್ಟಿದ್ದರು.
47 ರನ್ ಗಳಿಸಿ ಅನ್ಯಾಯವಾಗಿ ರನ್ ಔಟಾದರು.
ಈ ನಡುವೆ ಬಂದ ಬ್ಯಾಟರ್ ಗಳಲ್ಲಿ ಸೂರ್ಯ ಕುಮಾರ್ ಯಾದವ್ 3,ದುಬೆ 27, ಪಾಂಡ್ಯ ಅಜೇಯ 5.ಜಡೇಜಾ 2 ರನ್ ಕಲೆಹಾಕಿದರು.
ಒಟ್ಟು 20 ಓವರ್ ಗಳಲ್ಲಿ 176 ರನ್ ಭಾರತ ತಂಡದ ಮೊತ್ತ.
ಸೌತ್ ಆಫ್ರಿಕಾ ತಂಡವೂ ಕೂಡ ಬಿರುಸಿನ ಆಟ ಶುರುಮಾಡಿತು. ಆದರೆ 7 ರನ್ ಗಳಿಗೆ ಹೆಂಡ್ರಿಕ್ಸ್ ವಿಕೆಟ್ ಕಳೆದುಕೊಂಡಿತು.
ಬೂಮ್ರಾ ಮಾಡಿದ ಮೊದಲ ಆಘಾತ.
ಮತ್ತೆ ಆರ್ಶದೀಪ್ ಮಾರ್ಕರಂ (5) ಔಟಾದರು.
ಸೌತ್ ಆಫ್ರಿಕಾ ತಂಡ
70 ರನ್ ಕಲೆಹಾಕುವ ತನಕ ಜೋಪಾನವಾಗಿ ಆಡಿದರು.ಡಿ.ಸ್ಕಬ್ಸ್ ಅವರನ್ನ ಅಕ್ಷರ್ ಪಟೇಲ್ ಬೌಲ್ಡ್ ಮಾಡಿದರು.
ಹೀಗೇ ಮುಂದೆ ವಿಜಯಲಕ್ಷ್ಮಿ
ಭಾರತದ ಪರ ಮುನಿಸಕೊಂಡಳೇನೋ ಅನಿಸಿತು .ಏಕೆಂದರ
106 ರನ್ ತನಕ ವಿಕೆಟ್ ಬೀಳಲೇ ಇಲ್ಲ. ಕಾಂಕ್ರಿಟ್ ಆಗಿ ಆಡುತ್ತಿದ್ದ ಡಿ ಕಾಕ್ (39) ಅವರನ್ನ ಆರ್ಶದೀಪ್
ಬಲಿತೆಗೆದುಕೊಂಡರು.
ಮುಂದೆ151 ಮೊತ್ತವಾಗುವಷ್ಟರಲ್ಲಿ ಕ್ಲಾಸೆನ್(52) ಹೊರಬಿದ್ದರು.
ಆಟ ನಿರ್ಣಾಯಕ ಮತ್ತು ಕುತೂಹಕ ಘಟ್ಟ ಮುಟ್ಟಿದ್ದು ಕೊನೇ ಓವರ್ ನಲ್ಲಿ .
168 ಗಳಿಸಿದ ಸೌತ್ ಆಫ್ರಿಕಾ ಇನ್ನೇನು ಜಯಮಾಲೆಗೆ ಕೊರಳೊಡ್ಡಿತು ಎಂದಾಗ ಪಾಂಡ್ಯ ಬೌಲಿಂಗ್ ನಲ್ಲಿ ಮಿಲ್ಲರ್ ಸಿಕ್ಸರ್ ಎತ್ತದರು. ಸೂರ್ಯಕುಮಾರ ಚಾಕಚಕ್ಯತೆಯಿಂದ
ಆ ಸಿಕ್ಸರ್ ಅಸಗುವ ಬಾಲನ್ನ ಬೌಂಡತಿಯೊಳಗೆ ಕ್ಯಾಚ್ ಹಿಡಿದು ಮೇಲೆ ತೂರಿದರು.
ಓಟ್ ರಭಸಕ್ಕೆ ಅವರೇ ಬೌಂಡರಿ ದಾಟಿ ಮತ್ತೆ ಛಂಗನೆ ಒಳ ಬಂದುಕ್ಯಾಚ್ ಹಿಡಿದರು. ಕೊನೆಯ ಬಾಲ್ ಎಸೆದಾಗ ಸೌತ್ ಆಫ್ರಿಕಾ 169 ರನ್ ಗೆ ತೃಪ್ತಿಯಾಗ ಬೇಕಾಯಿತು.
ಬಹಳ ವರ್ಷಗಳ. ಟಿ20 ಕಪ್ ಬಾಯಾರಿಕೆಯಿಂದ ಬಳಲಿದ ಇಂಡಿಯಾ ತಂಡಕ್ಕೆ ಆಕಾಶ ಭೂಮಿ ಒಂದಾದ ಸಂತೋಷದಲ್ಲಿತ್ತು.
ನಾಯಕ ರೋಹಿತ್ ಮೈದಾನದಲ್ಲೇ ಮಲಗಿ ಪಿಚ್ ಗೆ ಕೃತಜ್ಞತೆ ಹೇಳುವಂತೆ ಮಾಡಿದರು.
ಭಾರತ ಈಗ ಟಿ 20
ವಿಶ್ವ ಚಾಂಪಿಯನ್ .