Horticulture Department ಶಿವಮೊಗ್ಗ ಜಿಲ್ಲಾ ತೋಟಗಾರಿಕೆ ಇಲಾಖಾ ವತಿಯಿಂದ 2024-25ನೇ ಸಾಲಿಗೆ ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯಡಿ ವಿವಿಧ ಕಾರ್ಯಕ್ರಮಗಳ ಸೌಲಭ್ಯ ಪಡೆಯಲು ಅರ್ಹ ರೈತರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ತೋಟಗಾರಿಕೆ ಬೆಳೆಗಳ ಪ್ರದೇಶ ವಿಸ್ತರಣೆ (ಅಂಗಾಂಶ ಬಾಳೆ, ಹೈಬ್ರಿಡ್ ತರಕಾರಿ, ಕಾಳುಮೆಣಸು, ಬಿಡಿಹೂ, ಸುಗಂಧರಾಜ ಮತ್ತು ಗುಲಾಬಿ), ನೀರು ಸಂರಕ್ಷಣಾ ಘಟಕಗಳಾದ ವೈಯುಕ್ತಿ ಕೃಷಿ ಹೊಂಡ ಮತ್ತು ಸಮುದಾಯ ಕೃಷಿಹೊಂಡ ನಿರ್ಮಾಣ, ಸಂರಕ್ಷಿತ ಬೇಸಾಯ ಕಾರ್ಯಕ್ರಮದಡಿ ನೆಲಹೊದಿಕೆ (ಪ್ಲಾಸ್ಟಿಕ್ ಮಲ್ಚಿಂಗ್), ಮಿನಿ ಟ್ರ್ಯಾಕ್ಟರ್ ಮತ್ತು ಮಾನವ ಸಂಪನ್ಮೂಲ ಕಾರ್ಯಕ್ರಮಗಳಾದ ರೈತರಿಗೆ ತರಬೇತಿ ಮತ್ತು ಶೈಕ್ಷಣಿಕ ಪ್ರವಾಸ ಇತ್ಯಾದಿ ಕಾರ್ಯಕ್ರಮಗಳ ಸೌಲಭ್ಯವನ್ನು ಪಡೆಯಬಹುದಾಗಿದೆ.
ಕೃಷಿ ಯಾಂತ್ರೀಕರಣ ಉಪ ಅಭಿಯನಾ (ಎಸ್.ಎಂ.ಎ.ಎಂ) ಕಾರ್ಯಕ್ರಮದಡಿ ಅಡಿಕೆ ಸುಲಿಯುವ ಯಂತ್ರ, ಅಡಿಕೆ ಗೊರಬಲು ಪಾಲಿಷತ್, ಅಡಿಕೆ ದೋಟಿ ಇತ್ಯಾದಿ ಯಂತ್ರಗಳಿಗೆ ಸಹಾಯಧನ ಲಭ್ಯವಿದೆ.
ಆಸಕ್ತ ರೈತರು ನಿಗಧಿತ ನಮೂನೆ ಅರ್ಜಿಯನ್ನು ಆಯಾ ತಾಲೂಕು ತೋಟಗಾರಿಕೆ ಇಲಾಖೆಯಲ್ಲಿ ಪಡೆದು, ಭರ್ತಿ ಮಾಡಿದ ಅರ್ಜಿಯನ್ನು ಜುಲೈ 15 ರೊಳಗಾಗಿ ಸಲ್ಲಿಸುವಂತೆ ತೋಟಗಾರಿಕೆ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ತಿಳಿಸಿದ್ದಾರೆ.
Horticulture Department ಹೆಚ್ಚಿನ ಮಾಹಿತಿಗಾಗಿ ಅಯಾ ತಾಲೂಕು ತೋಟಗಾರಿಕೆ ಕಚೇರಿ/ ರೈತ ಸಂಪರ್ಕ ಕೇಂದ್ರದ ಅಧಿಕಾರಿಗಳನ್ನು ಅಥವಾ ಜಿಲ್ಲಾ ತೋಟಗಾರಿಕೆ ಇಲಾಖೆಯನ್ನು ಸಂಪರ್ಕಿಸುವುದು.