Sacred Heart High School ವಿದ್ಯಾರ್ಥಿಗಳು ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಲು ಅವರ ಹಿಂದೆ ದೈಹಿಕ ಶಿಕ್ಷಕರ ಶ್ರಮ ಅಪಾರವಾಗಿದೆ ಎಂದು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಜಿ.ಸುಮತಿ ಅವರು ತಿಳಿಸಿದ್ದರು.
ಸೆಕ್ರೇಡ್ ಹಾರ್ಟ್ ಫ್ರೌಢಶಾಲಾ ಸಭಾಂಗಣದಲ್ಲಿ ಉಪ ನಿರ್ದೇಶಕರ ಕಛೇರಿ ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಶಾಲಾ ಶಿಕ್ಷಣ ಇಲಾಖೆ ಇವರ ವತಿಯಿಂದ 2023-24 ನೇ ಸಾಲಿನಲ್ಲಿ ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡಿದ ಕ್ರೀಡಾಪಟುಗಳಿಗೆ ಅಭಿನಂದನಾ ಕಾರ್ಯಕ್ರಮ ಹಾಗೂ 2023-24 ನೇ ಸಾಲಿನಲ್ಲಿ ಕ್ರೀಡಾಕೂಟ ನಡೆಸಿದ ಸಂಚಾಲಕರಿಗೆ ಅಭಿನಂದನೆ ಮತ್ತು 2024-25 ನೇ ಸಾಲಿನಲ್ಲಿ ಕ್ರೀಡಾಕೂಟ ನಡೆಸುವ ಸಂಚಾಲಕರಿಗೆ ಆಹ್ವಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ್ದರು.
ಕ್ರೀಡಾಕೂಟ ಎಂಬುದು ದೈಹಿಕ ಶಿಕ್ಷಕರಿಗೆ ಒಂದು ರೀತಿಯಲ್ಲಿ ಅತ್ಯಂತ ಕಠಿಣ ಕೆಲಸವಾಗಿದೆ. ಅದರೆ ವಿದ್ಯಾರ್ಥಿಗಳ ಭವಿಷ್ಯದ ದೃಷ್ಠಿಯಿಂದ ಇದು ಒಂದು ಉತ್ತಮ ಕಾರ್ಯವಾಗಿದ್ದು ಪ್ರತಿಯೊಬ್ಬ ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಕ್ರೀಡಾ ಕ್ಷೇತ್ರದಲ್ಲಿ ಯಶಸ್ಸು ಗಳಿಸಲು ಶಾಲಾ ಕಾಲೇಜುಗಳ ಕ್ರೀಡಾಕೂಟ ಪ್ರಾಥಮಿಕ ಮೆಟ್ಟಿಲು ಆಗಲಿದೆ. ಎಲ್ಲಾ ದೈಹಿಕ ಶಿಕ್ಷಕರು ಕ್ರೀಡಾಕೂಟಗಳನ್ನು ಅತ್ಯಂತ ಜವಾಬ್ದಾರಿಯಿಂದ ನಿರ್ವಹಿಸಿ ಮಕ್ಕಳಿಗೆ ಉತ್ತಮವಾದ ತರಬೇತಿಯನ್ನು ನೀಡುವ ಮೂಲಕ ತಾಲೂಕಿನಿಂದ 15ಕ್ಕೂ ಹೆಚ್ಚು ವಿದ್ಯಾರ್ಥಿಗಳು ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡಲು ಸಹಕಾರಿಯಾಗಿದೆ ಎಂದರು.
ತಾಲೂಕು ದೈಹಿಕ ಶಿಕ್ಷಕರ ಪರಿವೀಕ್ಷಕರಾದ ನಿರಂಜನಮೂರ್ತಿ ಅವರು ಮಾತನಾಡಿ ವಲಯ ಮಟ್ಟದಲ್ಲಿ ಕ್ರೀಡೆಗಳಲ್ಲಿ ಭಾಗವಹಿಸಿ ತಾಲೂಕು, ಜಿಲ್ಲಾ ಹಾಗೂ ರಾಷ್ಟ್ರಮಟ್ಟದಲ್ಲಿ ವಿದ್ಯಾರ್ಥಿಗಳಿಗೆ ತಯಾರಿ ಮಾಡಿ ಅವರಿಗೆ ರಾಷ್ಟ್ರ ಮಟ್ಟದಲ್ಲಿ ಸಾಧನೆ ಮಾಡಲು ದೈಹಿಕ ಶಿಕ್ಷಕರ ಶ್ರಮ ಸ್ಮರಣೀಯವಾದದ್ದು. ಈ ನಿಟ್ಟಿನಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳ ಜೊತೆಗೆ ದೈಹಿಕ ಶಿಕ್ಷಕರಿಗೂ ಗೌರವಿಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಆಯೋಜಿಲಾಗಿದೆ. ಕ್ರೀಡಾಪಟುಗಳಲ್ಲಿ ಸ್ಪರ್ಧಾ ಮನೋಭಾವ ಕ್ರೀಡೆಯಲ್ಲಿ ಮಾತ್ರವಲ್ಲ ಜೀವನದಲ್ಲೂ ಇರಬೇಕು. ಆಗ ಮಾತ್ರ ಜೀವನದಲ್ಲಿ ಉತ್ತಮವಾದ ಸಾಧಕನಾಗಲು ಸಾಧ್ಯ ಎಂದರು.
ಈ ವೇಳೆ ವಿವಿಧ ಕ್ರೀಡೆಗಳಲ್ಲಿ ರಾಷ್ಟ್ರಮಟ್ಟದಲ್ಲಿ ಭಾಗವಹಿಸಿದ ಕ್ರೀಡಾಪಟುಗಳಾದ ಇರಾನ್ ಶೇಖ್, ಶಶಾಂಕ್, ಶ್ರೀನಿವಾಸ್, ಮೊಹಮ್ಮದ್ ಬಿಲಾಲ್, ನಿಖಿತ, ಸೈಯದ್ ಪೈಜಲ್, ಶಿಥಿಲ್ ಸೇರಿದಂತೆ 15ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸೇರಿ ದೈಹಿಕ ಶಿಕ್ಷಕರಿಗೂ ಸಹ ಸನ್ಮಾನಿಸಲಾಯಿತು.
Sacred Heart High School ಈ ಸಂದರ್ಭದಲ್ಲಿ ತಾಲ್ಲೂಕು ಶಿಕ್ಷಣ ಇಲಾಖೆ ಸಂಯೋಜಕರಾದ ಬಸವರಾಜಪ್ಪ, ಮೋಹನ್, ಸೈಯದ್ ಮುಸ್ತಪೀಜ್ ಉಲ್ಲಾ ಹಸನ್ ಸಾಬ್ ಹಾಗೂ ಸೇಕ್ರೆಡ್ ಹಾರ್ಟ್ ಶಾಲೆಯ ಮುಖ್ಯಶಿಕ್ಷಕ ಹ್ಯೂಬರ್ಟ್ ಮಿರಾಂಡ, ದೈಹಿಕ ಶಿಕ್ಷಕ ಸಂಘದ ತಾಲೂಕ್ ಅಧ್ಯಕ್ಷ ಲಕ್ಷ್ಮಣ್, ಸಂಘದ ಪದಾಧಿಕಾರಿಗಳಾದ ರತನ್ ಸಿಂಗ್, ವೇದಾವತಿ, ಗೀತಾ ಸುನೀತ ಹಾಗೂ ವಿವಿಧ ಶಾಲೆಯ ದೈಹಿಕ ಶಿಕ್ಷಕರು, ಕ್ರೀಡಾ ಸಾಧಕರು ಉಪಸ್ಥಿತರಿದ್ದರು.
Sacred Heart High School ವಿದ್ಯಾರ್ಥಿಗಳು ಕ್ರೀಡೆಯಲ್ಲಿ ರಾಷ್ಟ್ರಮಟ್ಟದ ಸಾಧನೆಗೈಯುವಲ್ಲಿ ದೈಹಿಕ ಶಿಕ್ಷಕರ ಶ್ರಮ ಸ್ಮರಣೀಯ-ಜಿ.ಸುಮತಿ
Date: