Narendra Modi ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರದ ಬಿಜೆಪಿ ಸರ್ಕಾರವು 2014 ರಿಂದ ಸುಮಾರು 32 ಬಾರಿ ಪೆಟ್ರೋಲ್, ಡಿಸೇಲ್ ದರವನ್ನು ಹೆಚ್ಚಿಸಿದ್ದು, ಆಗ ಮೌನವಾಗಿದ್ದ ಆಗಿದ್ದ ಶಾಸಕ ಆರಗ ಜ್ಞಾನೇಂದ್ರ ಅವರು ಆಗೆಲ್ಲ ಮೌನ ಗೌರಿ ವೃತ ಆಚರಿಸುತ್ತಿದ್ದರೇನೋ ಎಂದು ಯುವ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ವಕ್ತಾರರಾದ ಆದರ್ಶ ಹುಂಚದಕಟ್ಟೆ ಹೇಳಿದರು.
ಪತ್ರಿಕಾ ಗೋಷ್ಟಿಯಲ್ಲಿ ಮಾತನಾಡಿದ ಅವರು, ಗೋವಾ ರಾಜ್ಯದಲ್ಲಿ ಬಿಜೆಪಿ ಸರ್ಕಾರವೇ ಇದ್ದು, ಅಲ್ಲಿ ಇವತ್ತಿನಿಂದ ಇಂಧನ ಬೆಲೆ ಹೆಚ್ಚಿಸಲಾಗಿದೆ. ಜ್ಞಾನೇಂದ್ರ ಮತ್ತು ಬಿಜೆಪಿಗರು ಅಲ್ಲಿಗೋಗಿ ಪ್ರತಿಭಟಿಸಲಿ. ಅವರ ಹೋಗಿ ಬರುವ ಪ್ರಯಾಣದ ವೆಚ್ಚ ಭರಿಸುವುದಾಗಿ ಸವಾಲೆಸೆದರು.
೨೦೧೪ ರಿಂದ ಈತನಕ ಕೇಂದ್ರದ ಬಿಜೆಪಿ ಸರ್ಕಾರ ಇಂಧನ ದರ ಏರಿಸುತ್ತಲೇ ಬಂದಿದೆ. ರಾಜ್ಯದ ಹಿಂದಿನ ಬಿಜೆಪಿ ಸರ್ಕಾರವೂ ತೈಲ ಬೆಲೆಯನ್ನು ಶೇ. 35 ರಷ್ಟು ಏರಿಸಿ ಬಳಿಕ ಚುನಾವಣೆಯ ಕಾರಣದಿಂದಾಗಿ ಶೇ. ೨೫ ಕ್ಕೆ ಇಳಿಸಿತ್ತು. 2014 ರ ಚುನಾವಣೆಯ ಸಂದರ್ಭದಲ್ಲಿ ಇಂಧನ ಧರ 50 ರಿಂದ 60 ರ ಆಸುಪಾಸಿನಲ್ಲಿಯೇ ಇತ್ತು. ಇದರ ವಿರುದ್ಧ ಪ್ರತಿಭಟನೆಗಳನ್ನು ಮಾಡುತ್ತಾ ಅಧಿಕಾರಕ್ಕೆ ಬಂದರೆ ಇಂಧನ ದರ ಇಳಿಸುವುದಾಗಿ ಹೇಳುತ್ತಿದ್ದ ನರೇಂದ್ರ ಮೋದಿಯವರು ತಮ್ಮ ಅಧಿಕಾರದ ಅವಧಿಯುದ್ದಕ್ಕೂ ಇಂಧನ ಬೆಲೆಯನ್ನು ಏರಿಸುತ್ತಲೇ ಹೋಗಿದ್ದಾರೆ. ಆಗೆಲ್ಲ ಸುಮ್ಮನಿದ್ದ ಮಾಜಿ ಗೃಹ ಸಚಿವರು ಹಾಗೂ ಬಿಜೆಪಿಗರು ಮೊನ್ನೆಯ ಪ್ರತಿಭಟನೆಯಲ್ಲಿ ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಮುಖವಾಡ ತೊಟ್ಟು ಅಣಕಿಸಿದ್ದು, ಶಾಸಕರು ಹಾಗೂ ಬಿಜೆಪಿಗರಿಗೆ ನಾಚಿಕೆಯಾಗಬೇಕು ಎಂದರು.
Narendra Modi ನೀಟ್ ಹಗರದಲ್ಲಿ ಕೇಂದ್ರದ ಕುಮ್ಮಕ್ಕು ಇದೆ ಎಂದು ಆರೋಪಿಸಿದ ಆದರ್ಶ ಅವರು, ತಾಲೂಕು ಕಚೇರಿಯಲ್ಲಿ ಜನರ ಕೆಲಸ ಕಾರ್ಯಗಳಾಗದಿದ್ದರೆ, ಅಧಿಕಾರಿಗಳನ್ನು ಕರೆಸಿ ಅವರ ಕಿವಿ ಹಿಂಡುವ ಅಧಿಕಾರ ಶಾಸಕರಾಗಿ ಇವರಿಗೆ ಇದ್ದೇ ಇದೆ. ಆದರೆ ಇದನ್ನು ಬಿಟ್ಟು ತಾಲೂಕು ಕಚೇರಿಯಲ್ಲಿ ಕೂತು ಪ್ರಚಾರಕ್ಕಾಗಿ ವೀಡಿಯೋ ಮಾಡಿಸುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.
ಪಟ್ಟಣ ಯುವ ಕಾಂಗ್ರೇಸ್ ಅಧ್ಯಕ್ಷ ಅಮರನಾಥ ಶೆಟ್ಟಿ , ಪುಟ್ಲೋಡು ರಾಘವೇಂದ್ರ, ಶ್ರೇಯಸ್, ಅಶ್ವಲ್ ಮುಂತಾದವರಿದ್ದರು.
Narendra Modi ಬಿಜೆಪಿ 2014 ರಿಂದ 32 ಬಾರಿ ತೈಲ ಬೆಲೆ ಏರಿಸಿದೆ. ಬಿಜೆಪಿಗರು ಮೌನ ತಾಳಿದ್ದರು. ಈಗ ದಿಢೀರನೆ ಎಚ್ಚತ್ತಿದ್ದಾರೆ!- ಕಾಂಗ್ರೆಸ್ ವಕ್ತಾರ ಆದರ್ಶ ಹುಂಚದಕಟ್ಟೆ
Date: