Shivamogga Government Employees Union ಮಕ್ಕಳಿಗೆ ಪಾಲಕರೇ ಪ್ರೇರೇಪಣೆ. ಪಾಲಕರ ಉತ್ತಮ ಕೆಲಸ ನೋಡಿ, ಅವರು ಶ್ರಮಪಟ್ಟು ಕುಟುಂಬವನ್ನು ಕಟ್ಟಿದ್ದನ್ನು ಗಮನಿಸಿ ಮಕ್ಕಳು ಜವಾಬ್ದಾರಿ ಅರಿಯಬೇಕು ಎಂದು ಜಿಲ್ಲಾಧಿಕಾರಿ ಗುರುದತ್ ಹೆಗಡೆ ಹೇಳಿದರು.
ಶಿವಮೊಗ್ಗ ಜಿಲ್ಲಾ ಸರಕಾರಿ ನೌಕರರ ಸಂಘದ ವತಿಯಿಂದ ಏರ್ಪಡಿಸಲಾಗಿದ್ದ ಸರಕಾರಿ ನೌಕರರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ, ನೂತನ ಜನಪ್ರತಿನಿಧಿಗಳಿಗೆ ಸನ್ಮಾನ ಮತ್ತು ನವೀಕೃತ ಸರ್ಕಾರಿ ನೌಕರರ ಸಂಘದ ಕಟ್ಟಡದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ಪಾಲಕರು ಕಷ್ಟಪಟ್ಟು ಓದಿ ನೌಕರಿ ಹಿಡಿದಿದ್ದಾರೆ.
ಈಗ ಅವರು ತಮ್ಮ ಮಕ್ಕಳಿಗೂ ದುಡಿಮೆಯಿಂದ ವಿದ್ಯಾಭ್ಯಾಸ ಮಾಡಿಸುತ್ತಿದ್ದ್ದಾರೆ. ಪಾಲಕರ ಕಷ್ಟವನ್ನು ಮಕ್ಕಳು ಅ ರಿಯಬೇಕು. ಅವರ ಮಾರ್ಗದರ್ಶನದಲ್ಲಿ ನಡೆೆಯಬೇಕೆಂದರಲ್ಲದೆ, ಸರಕಾರಿ ನೌಕರರೆಲ್ಲ ಒಂದೇ ಕುಟುಂಬದವರು. ಸಮಾಜದ ಮತ್ತು ಜನರ ಸಮಸ್ಯೆ ಅರಿತು ಅವರಿಗೆ ಸ್ಪಂದಿಸಿ ಕೆಲಸ ಮಾಡುವವರು. ಇಂತಹ ಉತ್ತಮ ಮನಃಸ್ಥಿತಿಯಿಂದ ಮಕ್ಕಳು ಉತ್ತೇಜಿತರಾಗಬೇಕು ಎಂದು ಹೇಳಿದರು.
ಎಂಎಲ್ಸಿ ಡಾ|| ಧನಂಜಯ ಸರ್ಜಿ ಮಾತನಾಡಿ, ಸಂಘಟನೆ ಚೆನ್ನಾಗಿದ್ದರೆ ಹೆಚ್ಚು ಬಲ ಬರುತ್ತದೆ. ಹಕ್ಕಿಗಳ ಹಿಂಡಿನಂತೆ ಸಂಘಟನೆ ಇರಬೇಕು. ನೌಕರರ ಮಕ್ಕಳೂ ಸಹ ಪಾಲಕರಿಂದ ಕಲಿಯುವ ವಿಷಯಗಳು ಸಾಕಷ್ಟಿವೆ. ನಿಸ್ವಾರ್ಥ ಸೇವೆ ಮಾಡುವ ಪಾಲಕರನ್ನು ಅನುಸರಿಸಬೇಕು. ದಾನ- ಧರ್ಮದ ಮೂಲಕ ಸಮಾಜದಲ್ಲಿ ಗುರುತಿಸಿಕೊಳ್ಳಬೇಕೆಂದರು.
Shivamogga Government Employees Union ಜಿಲ್ಲಾ ಪೊಲೀಸ್ ವರಿಷ್ಠ ಮಿಥುನ್‌ಕುಮಾರ್ ಮಾತನಾಡಿ, ಯಶಸ್ಸು ಎನ್ನುವುದು ತಲೆಗೆ ಏರಬಾರದು. ಒಂದು ವೇಳೆ ತಲೆಗೇರಿದಲ್ಲಿ ಇನ್ನೊಬ್ಬರನ್ನು ಕೀಳಾಗಿ ಕಾಣುವ ಮನೋಭಾವ ಆರಂಭವಾಗುತ್ತದೆ. ನಿರಂತರ ಓದು, ಶ್ರಮ ವಹಿಸಿ ಸಾಧನೆ ಮಾಡಬೇಕು. ಸಿಕ್ಕ ಅವಕಾಶವನ್ನು ಬಿಡಬಾರದು. ಕುಟುಂಬದ ಸತತ ಪ್ರೋತ್ಸಾಹ ಪಡೆದುಕೊಂಡು ಹೆಜ್ಜೆ ಇಡಿ. ಯಾವುದೇ ಉದ್ಯೋಗ ಮಾಡಿ ಅದರಲ್ಲಿ ನಿಸ್ವಾರ್ಥತೆ, ನಿಷ್ಠೆ ಇರಲಿ. ಆಗ ಯಶಸ್ಸು ನಿಮ್ಮನ್ನು ಹುಡುಕಿಕೊಂಡು ಬರುತ್ತದೆ. ನಡೆದುಬಂದ ಹಾದಿಯನ್ನು ಯಾವತ್ತೂ ಮರೆಯಬಾರದು. ಸಮಾಜದಲ್ಲಿ ಇಂದಿನ ದಿನಗಳಲ್ಲಿ ಮೌಲ್ಯ ಕಡಿಮೆಯಾಗುತ್ತಿದ್ದು, ಅದನ್ನು ಹೆಚ್ಚೆಚ್ಚು ಕಾಪಾಡಿಕೊಳ್ಳಬೇಕು. ಮೌಲ್ಯಾಧಾರಿತ ಸಮಾಜ ಕಟ್ಟಲು ಮುಂದಾಂಬೇಕೆಂದರು.
ಸಮಾರಂಭದಲ್ಲಿ ಎಸ್ ಎಸ್ ಎಲ್ ಸಿ ಮತ್ತು ಪಿಯುನಲ್ಲಿ ಉತ್ತಮ ಸಾಧನೆ ಮಾಡಿದ ಸರಕಾರಿ ನೌಕರರ 500 ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.
ಜಿಪಂ ಸಿಇಒ ಸ್ನೇಹಲ್ ಲೋಖಂಡೆ ಮಾತನಾಡಿದರು. ವೇದಿಕೆಯಲ್ಲಿ ರಾಜ್ಯಾಧ್ಯಕ್ಷ ಸಿ ಎಸ್ ಷಡಾಕ್ಷರಿ, ಸ್ಬುಡಾ ಅಧ್ಯಕ್ಷ ಎಚ್ ಎಸ್ ಸುಂದರೇಶ್, ಬೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಸ್. ರವಿಕುಮಾರ್, ಪ. ಜಾತಿ, ಪಂಗಡಗಳ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಜಿ. ಪಲ್ಲವಿ, ಸರಕಾರಿ ನೌಕರರ ಸಂಘದ ಜಿಲ್ಲಾ ಮತ್ತು ರಾಜ್ಯ, ತಾಲೂಕು ಪದಾಧಿಕಾರಿಗಳು ಹಾಜರಿದ್ದರು.