Tuesday, November 26, 2024
Tuesday, November 26, 2024

Bapuji MBA College ಕೃತಕ ಬುದ್ಧಿಮತ್ತೆಯ ಚಿಕ್ಕಚಿಕ್ಕ ಕೋರ್ಸ್ ಗಳನ್ನ ಕಲಿಯುವುದು ಕ್ಷೇಮಕರ- ಸಿ.ವಿ.ಗೌಡರ್

Date:

Bapuji MBA College ಕೃತಕ ಬುದ್ಧಿಮತ್ತೆಯು ಈಗಿನ್ನೂ ಆರಂಭಿಕ ಹಂತದಲ್ಲಿದ್ದು ಮುಂದೆ ವ್ಯಾಪಕವಾದಲ್ಲಿ ತಂತ್ರಾಂಶ ಅಭಿವೃದ್ಧಿ ಅಂದರೆ ಸಾಫ್ಟ್ ವೇರ್ ಡೆವಲೆಪ್ ಮೆಂಟ್ ಸಹಾ ಒಂದು ಕೌಶಲ್ಯವಾಗಿರದೇ ಸಾಮಾನ್ಯವೆನ್ನಿಸಬಹುದು, ಆದ್ದರಿಂದ ಸಾಫ್ಟ್ ವೇರ್ ಕ್ಷೇತ್ರದಲ್ಲಿ ಇರುವವರು ಕೃತಕ ಬುದ್ಧಿಮತ್ತೆಯ ಚಿಕ್ಕ ಚಿಕ್ಕ ಕೋರ್ಸ್ ಗಳನ್ನು ಈಗಿಂದಲೇ ಮಾಡುವುದು ಕ್ಷೇಮಕರ ಎಂದು ಬೆಂಗಳೂರಿನ ಎಂಪ್ಲೇ ಇನ್ಕಾರ್ಪೊರೇಷನ್ ನ ಮುಖ್ಯ ವಿಶ್ಲೇಷಣಾಧಿಕಾರಿ ಸಿ .ವಿ. ಗೌಡರ್ ಕಿವಿಮಾತು ಹೇಳಿದರು.

ಬಾಪೂಜಿ ಎಂಬಿಎ ಕಾಲೇಜಿನ ರಾಜ್ಯಮಟ್ಟದ ಅಂತರ ಕಾಲೇಜು ಯುವೋತ್ಸವ ‘ಆಕ್ಟಾಗನ್ 2024’ ನ್ನು ಉದ್ಘಾಟಿಸಿ ಮಾತನಾಡುತ್ತಾ ಕೃತಕ ಬುದ್ಧಿಮತ್ತೆಯು ಮಾನವರಂತೆಯೇ ಕಾರ್ಯನಿರ್ವಹಿಸುತ್ತದೆಯಾದರೂ ಅತ್ಯಂತ ಚುರುಕಾಗಿ ಹಾಗೂ ನಿಖರವಾಗಿ ನಿರ್ವಹಿಸುತ್ತದೆ, ಚಾಲಕನಿಲ್ಲದ ಸ್ವಯಂ ಚಾಲಿತ ಕಾರುಗಳು, ವೈದ್ಯರಿಲ್ಲದೆ ವೈದ್ಯಕೀಯ ತಪಾಸಣೆ, ತತ್ ಕ್ಷಣದ ಭಾಷಾಂತರ ವ್ಯವಸ್ಥೆ, ಯಂತ್ರಗಳೇ ನಿರ್ವಹಿಸುವ ಷೇರು ವ್ಯವಹಾರ ಮುಂತಾಗಿ ಏನೆಲ್ಲವೂ ಕೌತುಕಮಯವಾಗಬಹುದು, ಆದರೂ ಗಾಬರಿಬೇಡ, ಆಸಕ್ತಿಯ ಕ್ಷೇತ್ರದಲ್ಲಿ ಕೃತಕ ಬುದ್ಧಿಮತ್ತೆಯ ಅಳವಡಿಕೆ ಬಗ್ಗೆ ಈಗಿಂದಲೇ ಆಲೋಚನೆ ಮತ್ತು ಸಂಶೋಧನೆಗಳನ್ನು ವೈಯುಕ್ತಿಕವಾಗಿ ಕೈಗೊಳ್ಳುವುದು ಕ್ಷೇಮಕರ, ಕೃತಕ ಬುದ್ಧಿಮತ್ತೆಯು ದೊಡ್ಡ ಶಕ್ತಿಯಾಗಬಹುದಾದರೂ ಅದರ ಸದುಪಯೋಗ ಮುಖ್ಯ ಎಂದರು.

ಪ್ರಾಸ್ತಾವಿಕ ನುಡಿಗಳನ್ನಾಡುತ್ತಾ ಎಂಬಿಎ ಕಾಲೇಜಿನ ನಿರ್ದೇಶಕ ಡಾ.ಸ್ವಾಮಿ ಫತ್ರಿಭುವನಾನಂದರವರು ಆಕ್ಟಾಗನ್ ಅಂದರೆ ಅಷ್ಟಕೋನ ಎಂಬ ಈ ಉತ್ಸವದಲ್ಲಿ ಜೀವನಾವಶ್ಯಕ ಎಂಟು ಸಾಂಬಾರು ಪದಾರ್ಥಗಳ ಹೆಸರುಗಳನ್ನು ಎಂಟು ಸ್ಪರ್ಧೆಗಳಿಗೆ ಇಟ್ಟಿದ್ದು ರಾಜ್ಯದ 23 ಕ್ಕೂ ಹೆಚ್ಚು ಕಾಲೇಜುಗಳಿಂದ ಸ್ಪರ್ಧಾರ್ಥಿಗಳು ಬಂದಿದ್ದಾರೆ ಎಂದರು.

ಅಧ್ಯಕ್ಷೀಯ ನುಡಿಗಳನ್ನಾಡುತ್ತಾ ಶಿಕ್ಷಣ ಸಂಸ್ಥೆಯ ಚೇರ್ಮನ್ ಡಾ. ಅಥಣಿ ಎಸ್.ವೀರಣ್ಣನವರು ಕೃತಕ ಬುದ್ಧಿಮತ್ತೆಯು ಭವಿಷ್ಯದಲ್ಲಿ ಉದ್ಯೋಗಗಳನ್ನು ಕಸಿಯುತ್ತದೆ ಎಂಬ ಆತಂಕ ಬೇಡ, ಇದು ಹೊಸ ಹೊಸ ಉದ್ಯೋಗಗಳನ್ನು ಸೃಷ್ಟಿಸಿಕೊಡುವ ಸಾಧ್ಯತೆಗಳಿವೆ, ಆದ್ದರಿಂದಲೇ ತಮ್ಮ ಸಂಸ್ಥೆಯಲ್ಲಿ ಪಠ್ಯದಲ್ಲಿಲ್ಲದಿದ್ದರೂ ಕೃತಕ ಬುದ್ಧಿಮತ್ತೆಯ ವಿಷಯವನ್ನು ಅತಿಥಿ ಉಪನ್ಯಾಸಕರ ಮೂಲಕ ವಿದ್ಯಾರ್ಥಿಗಳಿಗೆ ಒದಗಿಸುವ ಪ್ರಯತ್ನ ಮಾಡಲಾಗುತ್ತಿದೆ ಎಂದರು.

Bapuji MBA College ವಿಭಾಗ ಮುಖ್ಯಸ್ಥ ಡಾ.ಎಸ್ ಹೆಚ್ ಸುಜಿತ್ ಕುಮಾರ್, ಅಧ್ಯಾಪಕರುಗಳಾದ ಡಾ.ಶ್ರುತಿ ಮಾಕನೂರು,ಡಾ. ಪ್ರಕಾಶ್ ಅಳಲಗೇರಿ, ವಿಜಯ್ ಕೆ, ಡಾ. ಚೈತ್ರಾ, ಸರೋಜಾ, ವನಿತಾ ಪಾಟೀಲ್,ರಾಯ್ಕರ್ ಮುಂತಾದವರ ಉಪಸ್ಥಿತಿಯಲ್ಲಿ ಸುಪ್ರಿಯಾ ದಿವಾಕರ್ ಹಾಗೂ ಅಯೇಷಾ ಸಿದ್ದಿಕಾ ನಿರೂಪಿಸಿದ ಕಾರ್ಯಕ್ರಮದಲ್ಲಿ ಪ್ರಾರ್ಥನೆಯನ್ನು ಭಾವನಾ ಹಾಡಿದರೆ ಅತಿಥಿಗಳ ಪರಿಚಯವನ್ನು ಅನುಷಾ ಧನು ಅಮೂಲ್ಯ ನಿವೇದಿತಾ ಮಾಡಿದರು.

ಆಕ್ಟಾಗನ್ 2024ರ ಪಾರಿತೋಷಕಗಳನ್ನು ಅಧ್ಯಕ್ಷರು ಮುಖ್ಯ ಅತಿಥಿಗಳು ಬಿಡುಗಡೆ ಮಾಡಿದರು.

-ಚಿತ್ರ ಹಾಗೂ ವರದಿ ಡಾ.ಎಚ್.ಬಿ.ಮಂಜುನಾಥ-

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Constitution Day ಸಂವಿಧಾನದ ಸಂದೇಶವೇ ನಮ್ಮ ಸರ್ಕಾರದ ಸಿದ್ಧಾಂತ- ಸಿದ್ಧರಾಮಯ್ಯ

Constitution Day ಸಂವಿಧಾನ ದಿನಾಚರಣೆಯ ವಿಶೇಷವಾಗಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು...

Shivamogga-Bhadravathi Urban Development Authority ಊರುಗಡೂರು ನಿವೇಶನ ಹಂಚಿಕೆ. ಭರ್ತಿ ಮಾಡಿದ ಅರ್ಜಿ ಸಲ್ಲಿಸಲು ಡಿ.5 ಅಂತಿಮ ದಿನಾಂಕ

Shivamogga-Bhadravathi Urban Development Authority ಶಿವಮೊಗ್ಗ -ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ ವತಿಯಿಂದ...

Shivamogga City Corporation ಒಂದು ತಿಂಗಳಲ್ಲಿ ಏಕರೀತಿಯ ಕರವಸೂಲಾತಿ ಹೊಸ ಕಾಯ್ದೆ ಜಾರಿ- ಸಚಿವ ರಹೀಂ ಖಾನ್

Shivamogga City Corporation ಸ್ಥಳೀಯ ಸಂಸ್ಥೆಗಳಿಗೆ ನಿಯಮಾನುಸಾರವಾಗಿ ಸಾರ್ವಜನಿಕರಿಂದ ಪಾವತಿಯಾಗಬೇಕಾದ ಕರವಸೂಲಿ...