D.C. Mayanna ಜೀವನ ಪರ್‍ಯಂತ ಅಸಂಘಟಿತ ಕಾರ್ಮಿಕರ ಶೋಷಿತರ ಅಮಾಯಕರ ತಳ ಮಟ್ಟದವರ ಪರ ಹೋರಾಡುತ್ತಾ ಬಂದಿರುವ 90ರ ಇಳಿ ವಯಸ್ಸಿನ ಕಾರ್ಮಿಕ ಮುಖಂಡ ಡಿ.ಸಿ.ಮಾಯಣ್ಣ ಜೀವಂತವಾಗಿರುವಾಗಲೇ ಅವರನ್ನು ಅವರ ಸೇವೆ ಗುರುತಿಸಿ ಅಭಿನಂದಿಸುವ ಕಾರ್ಯಕ್ರಮ ಹಮ್ಮಿಕೊಂಡಿರುವುದಾಗಿ ಡಿ.ಸಿ.ಮಾಯಣ್ಣ ಅಭಿಮಾನಿಗಳ ಸಂಘದ ಪ್ರಧಾನ ಸಂಚಾಲಕ ಬಿ.ಎನ್.ರಾಜು ಹೇಳಿದರು.
ಅವರು ಪತ್ರಿಕಾ ಗೋಷ್ಟಿಯಲ್ಲಿ ಮಾತನಾಡಿ ಸಾಮಾನ್ಯವಾಗಿ ಸಮಾಜದಲ್ಲಿ ಗುರುತಿಸಿ ಕೊಂಡವರು ಮರಣ ಹೊಂದಿದ ಮೇಲೆ ಸಂಘ ಸಂಸ್ಥೆಗಳು ಸ್ಮರಣೆ ಕಾರ್ಯಕ್ರಮಗಳನ್ನು ಮಾಡುವುದು ವಾಡಿಕೆ. ಆದರೆ ನಾವು ಅದಕ್ಕೆ ಭಿನ್ನವಾಗಿ ಡಿ.ಸಿ.ಮಾಯಣ್ಣ ರವರು ಮಾಡಿದ 50 ವರ್ಷಗಳ ನಿರಂತರ ಸೇವೆ ಮತ್ತು ಹೋರಾಟಕ್ಕೆ ತಕ್ಕ ಪ್ರತಿಫಲ ನೀಡಲು ಅವರ ಜೀವಿತ ಕಾಲದಲ್ಲಿಯೇ ಅಭಿನಂದನಾ ಸಮಾರಂಭ ಮಾಡಲು ಮುಂದಾಗಿದ್ದೇವೆ.
ಗೌರವಾರ್ಪಣೆಯಿಂದ ಅವರಿಗೂ ಸಮಾಜ ನಮ್ಮನ್ನು ಗುರ್ತಿಸಿ ಗೌರವಿಸಿದೆ ಎಂಬ ಆತ್ಮ ತೃಪ್ತಿ ಲಭಿಸಲಿದೆ. ಇಂತಹ ಸಮಾರಂಭವನ್ನು ಜೀವಂತವಿದ್ದಾಗಲೇ ಕಣ್ತುಂಬಿಕೊಳ್ಳಲಿ ಎಂದು ಹಂಬಲಿಸಿ ಸಮಾರಂಭಕ್ಕೆ ಮುಂದಾಗಿದ್ದೇವೆ.
ಜೂ: 23 ರಂದು ಭಾನುವಾರ ಸಂಜೆ 4 ಗಂಟೆಗೆ ಹಳೇನಗರದ ಶ್ರೀ ಅಕ್ಕಮಹಾದೇವಿ ಸಮುದಾಯ ಭವನದಲ್ಲಿ ನಡೆಯುವ ಕಾ: ಡಿ.ಸಿ.ಮಾಯಣ್ಣ ನವರ ೯೦ ನೇ ಜನ್ಮ ದಿನಾಚರಣೆ ಮತ್ತು ಅಭಿನಂದನಾ ಸಮಾರಂಭದ ಅಧ್ಯಕ್ಷತೆಯನ್ನು ಶಾಸಕ ಬಿ.ಕೆ.ಸಂಗಮೇಶ್ವರ್ ವಹಿಸಿದರೆ, ಜಿಲ್ಲಾ ಉಸ್ತುವಾರಿ ಹಾಗೂ ಪ್ರಾಥಮಿಕ ಶಿಕ್ಷಣ ಸಚಿವ ಎಸ್.ಮಧು ಬಂಗಾರಪ್ಪ ಉದ್ಘಾಟಿಸಲಿದ್ದಾರೆ.
D.C. Mayanna ಸಂಸದ ಬಿ.ವೈ.ರಾಘವೇಂದ್ರ ರವರು ಮಾಯಣ್ಣ ರವರ ಜೀವನ ಚರಿತ್ರೆಯ ಪುಸ್ತಕದ ಮುಖಪುಟ ಅನಾವರಣ ಮಾಡುವರು. ರೈತ ಸಂಘದ ರಾಜ್ಯ ಅಧ್ಯಕ್ಷ ಕೆ.ಟಿ.ಗಂಗಾಧರ್ ಮುಖ್ಯ ಭಾಷಣಕಾರರಾಗಿ ಭಾಗವಹಿಸಲಿದ್ದಾರೆ.
ವಿಧಾನ ಪರಿಷತ್ ಸದಸ್ಯೆ ಬಲ್ಕೀಶ್‌ಬಾನು, ನಗರಸಭೆ ಮಾಜಿ ಅಧ್ಯಕ್ಷ ಆರ್.ಕರುಣಾಮೂರ್ತಿ, ಮಾಯಣ್ಣ ಅಭಿಮಾನಿಗಳ ಸಂಘದ ಅಧ್ಯಕ್ಷ ಸೀತಾರಾಮ್, ಕಾರ್ಮಿಕ ಮುಖಂಡರಾದ ಟಿ.ಜಿ.ಬಸವರಾಜಯ್ಯ, ಕಾಳೇಗೌಡ, ಎಸ್.ಆಂಜನೇಯ, ಡಿಎಸ್‌ಎಸ್ ಸಂಸ್ಥಾಪಕ ಕಾರ್ಯದರ್ಶಿ ಎಸ್.ಜಿ.ರಾಜು ಮುಂತಾದವರು ಭಾಗವಹಿಸಲಿದ್ದಾರೆಂದು ಬಿ.ಎನ್.ರಾಜು ತಿಳಿಸಿದರು.