Shantiniketan’s Institute of Fine Arts College ಚಿಕ್ಕಮಗಳೂರಿನಲ್ಲಿರುವ ಶಾಂತಿನಿಕೇತನ ಚಿತ್ರಕಲಾ ಮಹಾವಿದ್ಯಾಲಯದಲ್ಲಿ 2024-25ನೇ ಸಾಲಿನ ದೃಶ್ಯಕಲಾ ಪದವೀಯ ಪ್ರವೇಶ ಆರಂಭವಾಗಿದೆ ಮಹಾ ವಿದ್ಯಾಲಯದ ಪ್ರಾಂಶುಪಾಲ ವಿಶ್ವಕರ್ಮ ಆಚರ್ಯ ತಿಳಿಸಿದರು.
ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಮಹಾವಿದ್ಯಾಲಯವು ಕಳೆದ 28 ವರ್ಷಗಳಿಂದ ಕಲೆ ಮತ್ತು ಸಂಸ್ಕøತಿಗಳನ್ನು ಹಂಪಿಯ ಕನ್ನಡ ವಿಶ್ವವಿದ್ಯಾನಿಲಯದ ಮಾನ್ಯತೆಯೊಂದಿಗೆ ಶಿಕ್ಷಣ ರೂಪದಲ್ಲಿ ಪದವಿ ನೀಡುತ್ತಿದೆ ಎಂದರು.
ಎಸ್‍ಎಸ್‍ಎಲ್‍ಸಿ ಪಾಸಾದ ನಂತರ ಪಿಯುಸಿ, ಐಟಿಐ, ಡಿಪ್ಲೋಮಾ ಪಾಸಾದ ಅಥವಾ ಪೇಲಾದ ವಿದ್ಯಾರ್ಥಿಗಳು ಸೃಜನಶೀಲವಾದ ಪ್ರಾಯೋಗಿಕ ಶಿಕ್ಷಣ ಆಯ್ಕೆ ಮಾಡಿದಲ್ಲಿ ಸ್ವಾವಲಂಬಿ ಬದುಕು, ನಿರಂತರ ಜೀವನೋತ್ಸಾಹದ ಶಿಕ್ಷಣ,ಅಂಕಗಳ ಪ್ರಾಧಾನ್ಯತೆಯಿಂದ ಹೊರತಾದ ಸಮಾಜದ ನಡುವೆ ವೈಯುಕ್ತಿಕವಾಗಿ ಸಾಧಿಸುವ, ಗುರುತಿಸಿಕೊಳ್ಳುವ ಸೃಜನಾತ್ಮಕ ಜೀವನಕಟ್ಟುವಲ್ಲಿ ದೇಶಾತೀತ, ಭಾಷಾತೀತ ಚಿತ್ರಕಲಾ ಶಿಕ್ಷಣ ಭರವಸೆ ಮೂಡಿಸಬಲ್ಲದು ಎಂದರು.
Shantiniketan’s Institute of Fine Arts College ಸಂಪ್ರಾದಾಯಿಕ ಶಿಕ್ಷಣವಾದ ಪದವಿ, ಇಂಜಿನಿಯರ್, ವೈದ್ಯಕೀಯ ಪದವಿಯಂತೆಯೇ ದೃಶ್ಯಕಲಾ ಪದವಿಯು ಕೂಡ ಇದಾಗಿದೆ. ಈ ದೃಶ್ಯಕಲಾ ಪದವಿ ಬಿ.ವಿ.ಎ. ಅನೌಪಚಾರೀಕ ಶಿಕ್ಷಣದಲ್ಲಿ ವಿದ್ಯಾಭ್ಯಾಸ ಮಾಡಬಹುದಾಗಿದೆ. ಈ ಪದವಿಯಲ್ಲಿ ಸ್ನಾತಕೋತ್ತರ ಹಾಗೂ ಪಿ.ಹೆಚ್.ಡಿ. ತನಕ ಶಿಕ್ಷಣ ಲಭ್ಯವಿದೆ ಎಂದರು.