Wednesday, December 17, 2025
Wednesday, December 17, 2025

Rotary Biodiversity Park ಮನುಷ್ಯನ ದುರಾಸೆಯಿಂದ ಪರಿಸರ ನಾಶ-ಪ್ರೊ.ಎ.ಎಸ್.ಚಂದ್ರಶೇಖರ್

Date:

Rotary Biodiversity Park ಇಂದು ನಗರೀಕರಣ ಹಾಗೂ ಮನುಷ್ಯನ ದುರಾಸೆಯಿಂದ ಪರಿಸರ ವಿನಾಶದತ್ತ ಸಾಗುತ್ತಿದೆ ಎಂದು ಪ್ರೊ. ಎ.ಎಸ್.ಚಂದ್ರಶೇಖರ್ ಅಭಿಪ್ರಾಯಪಟ್ಟರು.
ಶಿವಮೊಗ್ಗ ನಗರದ ಹೊರವಲಯದಲ್ಲಿರುವ ರೋಟರಿ ಬಯೋಡೈವರ್ಸಿಟಿ ಪಾರ್ಕ್ ನಲ್ಲಿ ನಗರದ ಎಲ್ಲ ರೋಟರಿ ಕ್ಲಬ್‌ಗಳ ಸಹಯೋಗದಲ್ಲಿ ಹಾಗೂ ಇಂಡೋ ಕಿಡ್ಸ್ ಮಕ್ಕಳು ಹಾಗೂ ಶಿಕ್ಷಕರು ಆಡಳಿತ ಮಂಡಳಿ ಸಹಕಾರದಲ್ಲಿ ಆಯೋಜಿಸಿದ್ದ ಗಿಡ ನೆಡುವುದು ಹಾಗೂ ಸ್ವಚ್ಛತೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪರಿಸರದಿಂದ ಸಕಲವನ್ನು ಪಡೆದ ನಾವು ಕಾಡುಗಳನ್ನು ಕಡಿದು ಪರಿಸರವನ್ನ ಹಾನಿ ಮಾಡುತ್ತಿದ್ದೇವೆ. ಕಾಡು ಕಡಿತದಿಂದ ಕಾಡಿನಲ್ಲಿ ಇರುವ ಪ್ರಾಣಿಗಳು ನಾಡಿಗೆ ಬರುತ್ತಿವೆ. ಅದರಿಂದ ಮನುಕುಲಕ್ಕೆ ತೊಂದರೆಯಾಗುತ್ತಿದೆ ಎಂದು ತಿಳಿಸಿದರು.
ವಾಯುಮಾಲಿನ್ಯ ಮತ್ತು ಜಲಮಾಲಿನ್ಯದಿಂದ ಭೂಮಿ ತನ್ನ ಫಲವತ್ತತೆ ಕಳೆದುಕೊಳ್ಳುತ್ತಿದೆ. ಅತಿಯಾದ ಪ್ಲಾಸ್ಟಿಕ್ ಬಳಕೆ ಮನುಕುಲವನ್ನ ವಿನಾಶದತ್ತ ಕರೆದೊಯ್ಯುತ್ತಿದೆ. ಇಂದು ಗಿಡಗಳನ್ನ ಬೆಳೆಸುವವರ ಸಂಖ್ಯೆ ಕಡಿಮೆಯಾಗುತ್ತಿದೆ. ಸ್ವಲ್ಪ ಜಾಗ ಸಿಕ್ಕರೂ ಸಹ ವಾಣಿಜ್ಯ ಬಳಕೆಗೆ ಬಳಸುತ್ತಾರೆ ಎಂದರು.
ಹವಾಮಾನ ವೈಪರೀತ್ಯದಿಂದ ಹಾಗೂ ಅತಿಯಾದ ತಾಪಮಾನದಿಂದ ಮನುಷ್ಯ ಜೀವಿಸುವುದು ಕಷ್ಟಕರವಾಗಿದೆ. ಜಲ ಮಾಲಿನ್ಯದಿಂದ ನೀರನ್ನು ಕಲುಷಿಗೊಳಿಸುವುದರಿಂದ ಅನೇಕ ರೋಗಗಳಿಗೆ ತುತ್ತಾಗುತ್ತಿದ್ದೇವೆ. ಆದ್ದರಿಂದ ಪರಿಸರ ಸಂರಕ್ಷಣೆಯು ಮುಖ್ಯ. ಸಸಿಗಳನ್ನು ನೆಟ್ಟು ಪೋಷಣೆ ಮಾಡಬೇಕು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಸಹಾಯಕ ಗವರ್ನರ್ ಕೋಟೋಜಿ ರವಿ ಮಾತನಾಡಿ, ಪರಿಸರಕ್ಕೆ ನಮ್ಮ ಕೊಡುಗೆ ಏನು ಎಂಬುದನ್ನು ಚಿಂತಿಸಬೇಕು. ಶುದ್ಧವಾದ ಆಮ್ಲಜನಕದ ಕೊರತೆ ಇದೆ. ವಿವಾಹ ವಾರ್ಷಿಕೋತ್ಸವ ಹಾಗೂ ಜನ್ಮದಿನ ಸೇರಿದಂತೆ ವಿಶೇಷ ಸಂದರ್ಭಗಳಲ್ಲಿ ಗಿಡಗಳನ್ನ ನೆಡುವುದರ ಮುಖಾಂತರ ಪರಿಸರ ಸಂರಕ್ಷಣೆ ಮಾಡಬೇಕು ಎಂದು ತಿಳಿಸಿದರು.
Rotary Biodiversity Park ಇದೇ ಸಂದರ್ಭದಲ್ಲಿ ವಲಯ 10ರ ನಿಯೋಜಿತ ಸಹಾಯಕ ಗವರ್ನರ್ ನಾಗರಾಜ್ ಎಸ್ಸಾರ್ ಮಾತನಾಡಿ, ಕಲುಷಿತ ವಾತಾವರಣ, ಗ್ಲೋಬಲ್ ವಾರ್ಮಿಂಗ್‌ನಿಂದ ಯಾವಾಗ ಬೇಕಾದರೂ ಆವಾಗ ಮಳೆ ಬರುವುದು ಹಾಗೂ ತಾಪಮಾನ ಹೆಚ್ಚುವುದು ಆಗುತ್ತಿದೆ. ಪರಿಸರ ಸಂರಕ್ಷಣೆ ನಮ್ಮ ನಿಮ್ಮೆಲ್ಲರ ಆದ್ಯ ಕರ್ತವ್ಯ ಎಂದು ಪಾಲಿಸಬೇಕು ಎಂದರು.
ಪ್ರತಿಯೊಬ್ಬ ಮಕ್ಕಳು ಸಸಿ ನೆಡುವ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ರೋಟರಿ ಮಾಜಿ ಸಹಾಯಕ ಗವರ್ನರ್ ಜಿ.ವಿಜಯಕುಮಾರ್, ಪ್ರಧಾನ ಕಾರ್ಯದರ್ಶಿ ಹಾಗೂ ಮಾಜಿ ಸಹಾಯಕ ಗೌವರ್ನರ್ ಎಂ.ಪಿ.ಆನಂದಮೂರ್ತಿ, ಭಾರತಿ ಚಂದ್ರಶೇಖರ್, ಕೆ.ಪಿ.ಶೆಟ್ಟಿ, ಗುರುರಾಜ್, ಎಂ.ಎಸ್.ಬಸವರಾಜ್ ಹಾಗೂ ರೋಟರಿ ಬಯೋ ಡೈವರ್ಸಿಟಿ ಪಾರ್ಕಿನ ಮುಖ್ಯ ರೂವಾರಿ ಉಮೇಶ್, ಸೋಮಶೇಖರ್, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು, ರೋಟರಿ ಪದಾಧಿಕಾರಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Women and Child Development Department ಡಿಸೆಂಬರ್ 20. ಶಿವಮೊಗ್ಗದಲ್ಲಿ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ

Women and Child Development Department ಶಿವಮೊಗ್ಗ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್,...

Madhu Bangappa ಯಾವುದೇ ಶಾಲೆ ಆದರೂ ಕನ್ನಡ ಕಲಿಸಬೇಕು ಅಂತ ಮುಚ್ಚಳಿಕೆ ಬರೆಸಿಕೊಳ್ಳುತ್ತೇವೆ- ಮಧು ಬಂಗಾರಪ್ಪ

Madhu Bangappa ರಾಜ್ಯದ ಎಲ್ಲಾ ಮಾದರಿ ಬೋರ್ಡ್‌ಗಳು ಕಡ್ಡಾಯವಾಗಿ ಕನ್ನಡ...