Kimmane Ratnakara ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟ ಮಹಾತ್ಮ ಗಾಂಧೀಜಿ ಕುರಿತ ಓದದೇ ಇರುವ ಪ್ರಧಾನಿ ಇದ್ದರೆ, ಅದು ನರೇಂದ್ರ ಮೋದಿ ಮಾತ್ರ. ಇದು ದೇಶದ ಅತಿ ದೊಡ್ಡ ದುರಂತ. ಆದ್ದರಿಂದ, ಗಾಂಧಿ ಬಗ್ಗೆ ಅಧ್ಯಯನ ನಡೆಸಲು ಶೀಘ್ರವಾಗಿ ಪುಸ್ತಕ ಕಳುಹಿಸಿ ಕೊಡುವೆ. ಅರ್ಥ ಆಗುವ ಭಾಷೆಗೆ ತರ್ಜುಮೆ ಮಾಡಿಕೊಂಡು ಮೋದಿ ಓದಲಿ ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ ಹೇಳಿದರು.
ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿನಿಮಾ ನೋಡಿ ಗಾಂಧಿ ಬಗ್ಗೆ ತಿಳಿದುಕೊಂಡೆ ಎನ್ನುವ ಮೋದಿ ಅವರ ಜ್ಞಾನಕ್ಕೆ ಮೆಚ್ಚುಗೆ ವ್ಯಕ್ತಪಡಿಸಬೇಕು. ದೇಶದಲ್ಲಿ ಗಾಂಧಿ ಬಗ್ಗೆ ಕಲಿಸದ ಶಾಲೆಗಳು ಎಲ್ಲಿಯೂ ಇಲ್ಲ. ಗಾಂಧಿ ಮರಣ ಹೊಂದಿದಾಗ ಅದೇ ಮೊದಲ ಬಾರಿ ಅರ್ಧ ಬಾವುಟ ಹಾರಿಸಲಾಗಿತ್ತು. ಇದರ ಬಗ್ಗೆಯೂ ಮೋದಿಗೆ ಅರಿವಿಲ್ಲ. ಇಲ್ಲಿ ಗಾಂಧಿ ಬಗ್ಗೆ ಸರಿ ಸಮನಾದ ವ್ಯಕ್ತಿ ಮತ್ತೊಬ್ಬರಿಲ್ಲ. ಮುಂದಿನ ದಿನದಲ್ಲಾದರೂ ಮೋದಿ ಅವರು ಗಾಂಧೀಜಿ ಬಗ್ಗೆ ಅರಿಯಲಿ ಎಂದರು.
ಮಾರ್ಟಿನ್ ಲೂಥರ್, ನೆಲ್ಸನ್ ಮಂಡೇಲಾ, ವಿನ್‌ಸ್ಟೆನ್ ಚರ್ಚಿಲ್, ಐನ್‌ಸ್ಟಿನ್, ಲಾರ್ಡ್ ಮೌಂಟ್ ಬ್ಯಾಟೆನ್ ಸೇರಿದಂತೆ ವಿಶ್ವದ ಅನೇಕ ಮಹನೀಯರು ಗಾಂಧೀಜಿಯವರನ್ನು ಹಾಡಿಹೊಗಳಿದ್ದಾರೆ. ಗಾಂಧೀಜಿಯವರ ತತ್ವಗಳೇ ನಮಗೆ ಮಾರ್ಗದರ್ಶನ ಎಂದು ಹೇಳಿದ್ದಾರೆ.
Kimmane Ratnakara ಸುಮಾರು 250 ದೇಶಗಳಲ್ಲಿ ಗಾಂಧಿ ಅಧ್ಯಯನ ಕೇಂದ್ರವಿದೆ. ಸುಮಾರು 35 ಸಾವಿರಕ್ಕೂ ಹೆಚ್ಚು ಪುಸ್ತಕಗಳು ಗಾಂಧೀಜಿ ಕುರಿತು ಬಂದಿದೆ. 145ಕ್ಕೂ ಹೆಚ್ಚು ದೇಶಗಳಲ್ಲಿ ಗಾಂಧೀಜಿಯವರ ಪ್ರತಿಮೆಗಳಿವೆ. ಭವಿಷ್ಯ ಇವೆಲ್ಲವೂ ಮೋದಿಯವರಿಗೆ ಗೊತ್ತಿರಲಿಕ್ಕಿಲ್ಲ ಎಂದರು.
ಮೋದಿ ಈಗ ಹತಾಶರಾಗಿದ್ದಾರೆ. ಸುಳ್ಳು ಹೇಳಿಕೆಗಳನ್ನು ನೀಡತೊಡಗಿದ್ದಾರೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಮೀಸಲಾತಿಯನ್ನು ತೆಗೆದುಬಿಡುತ್ತಾರೆ ಎಂದು ಅಪಪ್ರಚಾರ ಮಾಡುತ್ತಿದ್ದಾರೆ. ಸ್ವಾತಂತ್ರ್ಯಾ ನಂತರ ಇಷ್ಟು ವರ್ಷಗಳಲ್ಲಿ ಆರ್‌ಎಸ್‌ಎಸ್ ಆಗಲಿ, ಬಿಜೆಪಿಯಾಗಲಿ ಮೀಸಲಾತಿ ಪರವಾಗಿ ಇಲ್ಲ ಎಂದರು.