Siddhana Gowda Patil ದೇವೇಗೌಡರೆ ನಿಮಗೆ ನೈತಿಕತೆ ಇದ್ರೆ ಈ ಪ್ರಕರಣದ ಹೊಣೆ ಹೊತ್ತು ರಾಜಕೀಯ ನಿವೃತ್ತಿ ಘೋಷಿಸಿ, ಈ ನಾಡಿದ ಹೆಮ್ಮೆಯ ಪ್ರಧಾನಿ ಅನ್ನೋ ಹೆಸರನ್ನು ಪಡೆದಿದ್ದಿರಲ್ಲ ಅದನ್ನ ಉಳಿಸಿಕೊಳ್ಳಿ’ ಎಂದು ಹಿರಿಯ ಹೋರಾಟಗಾರ ಸಿದ್ದನಗೌಡ ಪಾಟೀಲ್ ಸವಾಲು ಹಾಕಿದರು.
ಹಾಸನದಲ್ಲಿ ನಡೆದ ‘ಹೋರಾಟದ ನಡಿಗೆ, ಹಾಸನದ ಕಡೆಗೆ..’ ಬೃಹತ್ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, “ನಾವಿಲ್ಲಿ ಸೇರಿರುವುದು ಹೆಮ್ಮೆಯ ಸಂಗತಿಯಲ್ಲವಾದರೂ ಇಂತಹ ಪರಿಸ್ಥಿತಿಯನ್ನು ಈ ಜಿಲ್ಲೆಯ ರಾಜಕೀಯ ಪರಿಸ್ಥಿತಿ ತಂದುಕೊಟ್ಟಿದೆ. ಜಾತಿಯ ಬಲದಿದಂದ, ಹಣದ ಬಲದಿಂದ ತಾನು ಇರುವ ಪ್ರದೇಶದಲ್ಲಿ ಅಲ್ಲಿನ ಪರಿಸ್ಥಿತಿಯನ್ನು ನಿಯಂತ್ರಿಸುವ ಪರಿಸ್ಥಿತಿ ಇಂದುನೆನ್ನೆಯದಲ್ಲ. ಹಾಸನದಲ್ಲಿ ನಡೆದಿರುವ ಈ ದೌರ್ಜನ್ಯವನ್ನು ಸರ್ಕಾರದ ಹೆಗಲಿಗೆ ಬಿಡದೆ, ಈ ರಾಜ್ಯದ ಜನಪರ ಚಳುವಳಿಗಳು ಜವಾಬ್ದಾರಿವಹಿಸಿ ಮಾಡುತ್ತಿರುವ ಹೋರಾಟ, ಈ ರಾಜ್ಯದಲ್ಲಿ ಯಾವುದೇ ಪ್ರಭಾವಿ ವ್ಯಕ್ತಿ ದೌರ್ಜನ್ಯ ಎಸಗಿದರೆ ನಾವು ಸುಮ್ಮನಿರುವುದಿಲ್ಲ ಎಂಬ ಎಚ್ಚರಿಕೆಯನ್ನು ನೀಡುತ್ತಿದ್ದೇವೆ” ಎಂದರು.
“ಕ್ರಿಮಿಲ್‌ಗಳು, ಅತ್ಯಾಚಾರಿಗಳು, ಭ್ರಷ್ಟಾಚಾರಿಗಳು ಈ ದೇಶದಲ್ಲಿ ರಾಜಕಾರಣಿಗಳು ಆಗ್ತಾ ಇರುವ ಸಂದರ್ಭದಲ್ಲಿ, ಜನಪರ ಸಂಘಟನೆಗಳು ವಾಚ್‌ಡಾಗ್ ರೀತಿ ಕೆಲಸಮಾಡಬೇಕಿದೆ” ಎಂದರು.
“ಹಾಸನದಲ್ಲಿ ಹಲವು ದಶಕಗಳ ಹಿಂದೆ ನಡೆದ ನುಗ್ಗೆಹಳ್ಳಿ ನೀರಿನ ಹೋರಾಟದ ಸಂದರ್ಭದಲ್ಲಿ ಅಲ್ಲಿನ ಹಳ್ಳಿಯ ಮಹಿಳೆಯರ ಮೇಲೂ ಪೊಲೀಸರು ದೌರ್ಜನ್ಯ ಎಸಗಿಸುವಂತಹ, ಜೈಲಿಗಟ್ಟುವ ಕೆಲಸ ಮಾಡಿದ್ದ ದೇವೇಗೌಡರಿಗೆ ಇಲ್ಲಿನ ಜನ ಅಂದೇ ಸರಿಯಾದ ಪಾಠ ಕಲಿಸಿದ್ದಿದ್ದರೆ, ಇಂದು ಈ ಸ್ಥಿತಿ ಬರುತ್ತಿರಲಿಲ್ಲ” ಎಂದು ಹೇಳಿದರು.
Siddhana Gowda Patil “ದೇವೇಗೌಡರು ಮೊಮ್ಮಗನಿಗೆ ಒಂದು ಎಚ್ಚರಿಕೆ ಪತ್ರ ಬರೆದಿದ್ದರು.., ಎಲ್ಲಿದ್ದರೂ ಬಂದು ಶರಣಾಗು ಅಂತ. ಆದ್ರೆ, ನಾನು ನಿಮಗೆ ನೇರವಾಗಿ ಒಂದು ಮಾತನ್ನು ಹೇಳ್ತೇನೆ, ನಿಮಗೆ ನೈತಿಕತೆ ಇದ್ರೆ ಈ ಪ್ರಕರಣದ ಹೊಣೆ ಹೊತ್ತು ರಾಜಕೀಯ ನಿವೃತ್ತಿ ಘೋಷಿಸಿ, ಈ ನಾಡಿದ ಹೆಮ್ಮೆಯ ಪ್ರಧಾನಿ ಅನ್ನೋ ಹೆಸರನ್ನು ಪಡೆದಿದ್ದಿರಲ್ಲ ಅದನ್ನ ಉಳಿಸಿಕೊಳ್ಳಿ. 4ರಂದು ಫಲಿತಾಂಶ ಬಂದ ನಂತರ ದೇವೇಗೌಡರ ಕುಟುಂಬದ ದನಿಗಳು ಎನಾಗುತ್ತವೋ ಗೊತ್ತಿಲ್ಲ. ಆದರೆ, ನಾವಂತೂ ನಿಮ್ಮ ಕೃತ್ಯವನ್ನು ಖಂಡಿಸದೆ, ತಕ್ಕ ಪಾಠವನ್ನು ಕಲಿಸುತ್ತೇವೆ ಎಂಬ ಎಚ್ಚರಿಕೆಯನ್ನು ಕೊಟ್ಟು ಹೋಗುತ್ತಿದ್ದೇವೆ. ಪ್ರಜ್ವಲನಂತಹ ಅತ್ಯಾಚಾರಿಗಳನ್ನು ಶಿಕ್ಷೆಗೆ ಗುರಿಪಡಿಸಲು ಒಗ್ಗಟ್ಟಿನ ಹೋರಾಟ ಮಾಡುತ್ತೇವೆ” ಎಂದರು