Karnataka Lokayukta ಮೇ 30ರಂದು ಶಿವಮೊಗ್ಗ ತಾಲೂಕು ಕಸಬಾ -1 ಹೋಬಳಿ, ಗಾಡಿಕೊಪ್ಪ ವೃತ್ತ, ಗ್ರಾಮ ಅಡಳಿತ ಅಧಿಕಾರಿ ಸುರೇಶ್ ಜಿ. ಬಿನ್ ನಾಗಪ್ಪಜಿ ಎಂಬುವವರು ಜಮೀನು ಖಾತೆ ಮಾಡಿಕೊಡಲು ಆರು ಸಾವಿರ ರೂ.ಗಳ ಲಂಚ ಪಡೆಯುವಾಗ ಲೋಕಾಯುಕ್ತ ಅಧಿಕಾರಿಗಳು ಬಂಧಿಸಿದ್ದಾರೆ.
ಶಿವಮೊಗ್ಗ ನಗರದ ಕೃಷಿನಗರ ವಾಸಿ ಸಂಕೇತ್ ಎಂಬುವವರು ಖರೀದಿಸಿದ ಜಮೀನನ್ನು ತನ್ನ ತಾಯಿ ಶ್ರೀಮತಿ ವೀಣಾ ಬಿ.ಎಂ. ಎಂಬುವವರ ಹೆಸರಿಗೆ ನೋಂದಣಿ ಮಾಡಿಸಿಕೊಂಡಿರುತ್ತಾರೆ. ಶಿವಮೊಗ್ಗ ವಿನೋಬನಗರ ಪ್ರೀಡಂ ಪಾರ್ಕ್‍ನಲ್ಲಿರುವ ಗ್ರಾಮ ಆಡಳಿತ ಅಧಿಕಾರಿಗಳ ಕಚೇರಿ ಹೋಗಿ ವಿ ಎ ಆಗಿರುವ ಸುರೇಶ್ ಜಿ. ಬಳಿ ತಾವು ಖರೀದಿಸಿದ ಜಮೀನನ್ನು ಖಾತೆ ಮಾಡಿಕೊಡುವಂತೆ ಕೇಳಿಕೊಂಡಾಗ ಕೆಲಸ ಮಾಡಿಕೊಡಲು ರೂ. 6000/-ಗಳ ಲಂಚಕ್ಕೆ ಬೇಡಿಕೆ ಇಟ್ಟಿರುವ ವಿಚಾರವಾಗಿ ಇವರ ವಿರುದ್ಧ ಶಿವಮೊಗ್ಗ ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಲಾಗಿತ್ತು.
Karnataka Lokayukta ಅಪಾದಿತರನ್ನು ಬಂಧಿಸಿ ಮುಂದಿನ ತನಿಖೆಯನ್ನು ಪೊಲೀಸ್ ನಿರೀಕ್ಷಕರು ವೀರಬಸಪ್ಪ ಎಲ್ ಕುಸಲಾಪುರರವರು ಕೈಗೊಂಡಿರುತ್ತಾರೆ. ಕಾರ್ಯಾಚರಣೆಯಲ್ಲಿ ಕ.ಲೋ.ಪೋ. ಅಧೀಕ್ಷಕ ಮಂಜುನಾಥ್ ಚೌಧರಿ ಎಂ.ಹೆಚ್. ಮತ್ತು ಪೊಲೀಸ್ ಉಪಾಧೀಕ್ಷಕ ಉಮೇಶ ಈಶ್ವರ ನಾಯ್ಕ ಇವರುಗಳ ಮಾರ್ಗದರ್ಶನದಲ್ಲಿ ಲೋಕಾಯುಕ್ತ ಕಚೇರಿ ಸಿಬ್ಬಂದಿಗಳಾದ ವಿ.ಎ.ಮಹಂತೇಶ ಸಿ.ಹೆಚ್.ಸಿ., ಯೋಗೇಶ್ .ಸಿ.ಹೆಚ್.ಸಿ. ಸುರೇಂದ್ರ ಹೆಚ್.ಜಿ., ಸಿ.ಹೆಚ್.ಸಿ., ಬಿ.ಟಿ ಚನ್ನೇರ್ಶ. ಸಿ.ಪಿ.ಸಿ., ಪ್ರಶಾಂತ್‍ಕುಮಾಋ ಸಿ.ಪಿ.ಸಿ., ರಘುನಾಯ್ಕ ಸಿ.ಪಿ.ಸಿ., ದೇವರಾಜ್ ಸಿ.ಪಿ.ಸಿ., ಗಂಗಾಧರ ಎ.ಪಿ.ಸಿ., ಪ್ರದೀಪ್ ಎ.ಪಿ.ಸಿ., ಗೋಪಿ ವಿ.,ಎ.ಪಿ.ಸಿ., ಹಾಗು ಜಯಂತ್ ಎ.ಪಿ.ಸಿ. ಇವರುಗಳು ಹಾಜರಿದ್ದರು.
Karnataka Lokayukta ಗಾಡಿಕೊಪ್ಪ ವೃತ್ತ ಗ್ರಾಮಾಡಳಿತಾಧಿಕಾರಿ ಲೋಕಾಯುಕ್ತದಿಂದ”ರೆಡ್ ಹ್ಯಾಂಡ್” ಅರೆಸ್ಟ್
Date: