Wednesday, December 17, 2025
Wednesday, December 17, 2025

Sahyadri College ಜೂನ್ 4 ರಂದು ಸಹ್ಯಾದ್ರಿ ಕಾಲೇಜಿನಲ್ಲಿ ಚುನಾವಣಾ ಮತ ಎಣಿಕೆ ನಿಮಿತ್ತ ಶಿವಮೊಗ್ಗಕ್ಕೆ ಬರುವ ವಾಹನ ಸಂಚಾರದಲ್ಲಿ ತಾತ್ಕಾಲಿಕ ವ್ಯತ್ಯಯ

Date:

Sahyadri College ಶಿವಮೊಗ್ಗ ನಗರದ ಸಹ್ಯಾದ್ರಿ ಕಾಲೇಜಿನಲ್ಲಿ ಜೂನ್ 04 ರಂದು ಶಿವಮೊಗ್ಗ ಲೋಕ ಸಭಾ ಕ್ಷೇತ್ರದ ಮತ ಎಣಿಕೆ ಕಾರ್ಯವು ನಡೆಯಲಿರುವುದರಿಂದ ಸಾರ್ವಜನಿಕರ ಸುಗಮ ಸಂಚಾರದ ದೃಷ್ಟಿಯಿಂದ ವಾಹನಗಳ ಸಂಚಾರ ನಿಷೇಧ, ವಾಹನ ನಿಲುಗಡೆ ಹಾಗೂ ವಾಹನಗಳ ಮಾರ್ಗದಲ್ಲಿ ತಾತ್ಕಾಲಿಕ ಬದಲಾವಣೆ ಮಾಡಿ ಜಿಲ್ಲಾಧಿಕಾರಿ ಗುರದತ್ತ ಹೆಗಡೆ ಆದೇಶಿಸಿದ್ದಾರೆ.
ಸಹ್ಯಾದ್ರಿ ಕಾಲೇಜಿನ ಸುತ್ತಮುತ್ತ 100 ಮೀ. ಅಂತರದಲ್ಲಿ ಎಲ್ಲಾ ವಾಹನಗಳ ಸಂಚಾರ ಮತ್ತು ನಿಲುಗಡೆ ನಿಷೇದಿಸಲಾಗಿದೆ. ಬೆಂಗಳೂರು, ಭದ್ರಾವತಿ, ಎನ್.ಆರ್.ಪುರ ಕಡೆಯಿಂದ ಬರುವ ಎಲ್ಲಾ ಭಾರಿ ವಾಹನ ಮತ್ತು ಎಲ್ಲಾ ಬಸ್‍ಗಳು ಹಾಗೂ ಕಾರು ದ್ವಿಚಕ್ರ, ತ್ರಿಚಕ್ರ ವಾಹನಗಳು ಬೈಪಾಸ್ ರಸ್ತೆ ಮೂಲಕ ಸಂಚರಿಸುವುದು. ಚಿತ್ರದುರ್ಗ, ಹೊಳೆಹೊನ್ನೂರು ಕಡೆಯಿಂದ ಬಂದು ಹೋಗುವ ಎಲ್ಲಾ ಭಾರಿ ವಾಹನ ಮತ್ತು ಬಸ್‍ಗಳು ಬಿ.ಹೆಚ್.ರಸ್ತೆ ಮಾರ್ಗವಾಗಿ ಬಸ್ ನಿಲ್ದಾಣಕ್ಕೆ ಹೋಗುವುದು. ಹೊನ್ನಾಳಿ ದಾವಣಗೆರೆಯಿಂದ ಬರುವ ಎಲ್ಲಾ ಭಾರಿ ವಾಹನ, ಎಲ್ಲಾ ಬಸ್‍ಗಳನ್ನು 100 ಅಡಿರಸ್ತೆ, ವಿನೋಬನಗರ ಮಾರ್ಗವಾಗಿ ಹೋಗುವುದು. ಸರ್ಕಾರಿ ಮತ್ತು ಖಾಸಗಿ ಬಸ್ ನಿಲ್ದಾಣದಿಂದ ಹೊನ್ನಾಳಿ, ಹರಿಹರ, ದಾವಣಗೆರೆಗೆ ಹೋಗುವ ಎಲ್ಲಾ ಬಸ್‍ಗಳು ಎ. ಎ. ಸರ್ಕಲ್, ಗೋಪಿ ಸರ್ಕಲ್, ಮಹಾವೀರ ಸರ್ಕಲ್, ಕೆಇಬಿ ಸರ್ಕಲ್ ಮುಖಾಂತರವಾಗಿ ಹೋಗುವುದು. ಸರ್ಕಾರಿ ಮತ್ತು ಖಾಸಗಿ ಬಸ್ ನಿಲ್ದಾಣದಿಂದ ಬೆಂಗಳೂರು, ಭದ್ರಾವತಿ, ಎನ್.ಆರ್.ಪುರ ಕಡೆಗೆ ಹೋಗುವ ಎಲ್ಲಾ ವಾಹನಗಳು ಬೈಪಾಸ್ ರಸ್ತೆ ಮುಖಾಂತರ ಎಂ.ಆರ್.ಎಸ್. ಸರ್ಕಲ್ ಕಡೆಗೆ ಹೋಗುವುದು. ಈ ಎಲ್ಲಾ ಮಾರ್ಗ ಬದಲಾವಣೆಗಳು ಪೊಲೀಸ್ ವಾಹನಗಳು, ಅತಿಗಣ್ಯ ವ್ಯಕ್ತಿಗಳ ವಾಹನಗಳು, ಅಂಬ್ಯುಲೆನ್ಸ್ ಹಾಗೂ ಮೂಲಭೂತ ಸೌಕರ್ಯ ಒದಗಿಸುವ ವಾಹನಗಳನ್ನು ಅನುಕೂಲಕ್ಕೆ ತಕ್ಕಂತೆ ಹೊರತುಪಡಿಸಿದೆ.
ಏಜೆಂಟರು ಮತ್ತು ಎಲ್ಲಾ ಇಲಾಖೆಯ ಅಧಿಕಾರಿಗಳ ವಾಹನಗಳ ನಿಲುಗಡೆ ಸಹ್ಯಾದ್ರಿ ಸೈನ್ಸ್ ಕಾಲೇಜು ಎದುರು ಮತ್ತು ವಜ್ರ ಮಹೋತ್ಸವ ಕಟ್ಟಡದ ಎದುರು ಮತ್ತು ಬಿ.ಹೆಚ್.ರಸ್ತೆಗೆ ಹೊಂದಿಕೊಂಡಂತಿರುವ ಮ್ಯಾಚ್ ಫ್ಯಾಕ್ಟರಿಗೆ ಸೇರಿದ ಮೈದಾನದಲ್ಲಿ ವಾಹನ ಪಾರ್ಕಿಂಗ್‍ಗೆ ಅನುಮತಿಸಿದೆ. ಎಂ.ಆರ್.ಎಸ್. ಸರ್ಕಲ್‍ನ ಹತ್ತಿರವಿರುವ ಕೆ.ಇ.ಬಿ ಸಮುದಾಯ ಭವನದ ಹಿಂಭಾಗ ವಾಹನಗಳ Sahyadri College ಪಾರ್ಕಿಂಗ್‍ಗೆ ಅನುಮತಿ ನೀಡಿದೆ. ಸಾರ್ವಜನಿಕರ ಕಾರು ಮತ್ತು ದ್ವಿಚಕ್ರ ವಾಹನಗಳ ನಿಲುಗಡೆ ಎಂಆರ್.ಎಸ್. ನಿಂದ ಎನ್.ಆರ್.ಪುರ ರಸ್ತೆಯ ಎಡಭಾಗದಲ್ಲಿ ಪಾರ್ಕಿಂಗ್ ಮಾಡುವುದು. ಬೈಪಾಸ್ ರಸ್ತೆಗೆ ಹೊಂದಿಕೊಂಡಂತಿರುವ ಸಹ್ಯಾದ್ರಿ ಕಾಲೇಜಿನ ಸ್ವೇಡಿಯಂ ಹತ್ತಿರ ಸಾರ್ವಜನಿಕರ ಎಲ್ಲಾ ವಾಹನಗಳ ಪಾರ್ಕಿಂಗ್‍ಗೆ ಅನುಮತಿ ನೀಡಿದೆ. ಎಂ.ಆರ್.ಎಸ್. ಸರ್ಕಲ್‍ನಿಂದ ಬಿ.ಹೆಚ್.ರಸ್ತೆ, ವಿದ್ಯಾನಗರ, ಮತ್ತೂರು ಕ್ರಾಸ್‍ವರೆಗೆ ಸಾರ್ವಜನಿಕರ ವಾಹನಗಳು ಒಡಾಡದಂತೆ ನಿಷೇದಿಸಿದೆ ಎಂದು ಜಿಲ್ಲಾಧಿಕಾರಿಗಳ ಆದೇಶದಲ್ಲಿ ತಿಳಿಸಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

MESCOM ಡಿಸೆಂಬರ್ 18. ಶಿವಮೊಗ್ಗ ಮೆಸ್ಕಾಂ ಗ್ರಾಮೀಣ ಉಪವಿಭಾಗ ಕಛೇರಿಯಲ್ಲಿ ಜನಸಂಪರ್ಕ ಸಭೆ

MESCOM ಶಿವಮೊಗ್ಗ ಮೆಸ್ಕಾಂ ಗ್ರಾಮೀಣ ಉಪವಿಭಾಗ, ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಕಛೇರಿ,...

Scheduled Castes Welfare Department ಮಾನಿಸಿಕ ಒತ್ತಡ ನಿರ್ವಹಣೆ ಬಗ್ಗೆ ಆನ್ ಲೈನ್ ಪಾಡ್ ಕ್ಯಾಸ್ಟ್ ವಿಡಿಯೊ ಸಂವಾದ

Scheduled Castes Welfare Department ಶಿವಮೊಗ್ಗ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್,...

Kuvempu University ಶ್ರೀಕಾಂತ್ ಬಿರಾದಾರ್ ಅವರಿಗೆ ಕುವೆಂಪು ವಿವಿ ಡಾಕ್ಟರೇಟ್ ಪದವಿ

Kuvempu University ಮೂಡಲಗಿ ಶ್ರೀ ಶ್ರೀಪಾದಬೋಧ ಸ್ವಾಮೀಜಿ ಸರ್ಕಾರಿ ಪ್ರಥಮ ದರ್ಜೆ...