Farmers Association ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಅವರು ಶಿವಮೊಗ್ಗ ಜಿಲ್ಲೆಯಲ್ಲಿ ಸಂಘವನ್ನು ಬಲಿಷ್ಠಗೊಳಿಸುವ ಉದ್ದೇಶದಿಂದ ಹಾಗೂ ಹಲವು ಚಳುವಳಿಗಳನ್ನು ಮಾಡುವ ಉದ್ದೇಶದಿಂದ ಜಿಲ್ಲಾ ಸಮಿತಿಯನ್ನು ಪುನರ್ ರಚನೆ ಮಾಡಿದ್ದಾರೆ.
ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ನೂತನ ಜಿಲ್ಲಾ ಕಾರ್ಯಾಧ್ಯಕ್ಷ ಅಮೃತ್‌ರಾಜ್, ನೂತನ ಜಿಲ್ಲಾಧ್ಯಕ್ಷರಾಗಿ ಮಂಜುನಾಥ್ ಅರೇಕೊಪ್ಪ, ಜಿಲ್ಲಾ ಗೌರವ ಅಧ್ಯಕ್ಷರಾಗಿ ಸೈಯದ್ ಶಫೀಉಲ್ಲಾ ಹಿರೇಕಸವಿ, ಮತ್ತು ವೀರಭದ್ರೇಗೌಡರು, ಜಿಲ್ಲಾ ಕಾರ್ಯಾಧ್ಯಕ್ಷರಾಗಿ ಅಮೃತ್‌ರಾಜ್, ಹಿರೇಬಿಲಗುಂಜಿ, ಉಪಾಧ್ಯಕ್ಷರಾಗಿ ಬಸವರಾಜ್ ಬನ್ನೂ, ಪ್ರಧಾನ ಕಾರ್ಯದರ್ಶಿಯಾಗಿ ಸತೀಶ್ ಹೆಚ್.ಪಿ. ಬೇಡರ ಹೊಸಹಳ್ಳಿ, ಕಾರ್ಯದರ್ಶಿಯಾಗಿ ನಾಗರಾಜ್ ನಾಡಕಲಸಿ, ಸಂಚಾಲಕರಾಗಿ ಯೋಗೇಶ್ ಕುಂದಗಸವಿ, ಧನಂಜಯ ಬನ್ನೂರ್, ಸೋಮಶೇಖರ್ ಶಿಗ್ಗ, ಸಂಘಟನಾ ಕಾರ್ಯದರ್ಶಿಯಾಗಿ ಬಸವರಾಜ್ ಅರೇಕೊಪ್ಪ ಹಾಗೂ ಮಹಿಳಾ ಸಂಚಾಲಕಿ ಸುಮಿತ್ರ ರವರನ್ನು ನೇಮಕ ಮಾಡಿದ್ದಾರೆ
ಕರ್ನಾಟಕದ ರೈತರ ಪರ ಹೋರಾಟ ಮಾಡಿ, ರೈತರ ಸಂಘಟನೆ ಮಾಡಿ, ಸಂಘಟನಾ ಅರಿವು ಮೂಡಿಸಿ ರೈತ ಸಂಘದ ಅಭಿವೃದ್ಧಿ ಶ್ರಮಿಸಿದ ರೈತ ಹೋರಾಟಗಾರ ಹೆಚ್.ಎಸ್. ರುದ್ರಪ್ಪ, ಸಂಸ್ಥಾಪನಾ ಅಧ್ಯಕ್ಷರವರ ನೆನಪು ಕಾರ್ಯಕ್ರಮವನ್ನು ಜುಲೈ ೧೯ ರಂದು ಶಿವಮೊಗ್ಗದ ಮತ್ತೂರು ರಸ್ತೆಯ ತೀರ್ಥಪ್ಪ ಕ್ಯಾಂಪ್‌ನಲ್ಲಿ ಆಯೋಜಿಸಲಾಗಿದೆ. ಈ ಕಾರ್ಯಕ್ರಮಕ್ಕೆ ಸಮಸ್ತ ರೈತ ವರ್ಗದವರು ಆಗಮಿಸಬೇಕೆಂದು ವಿನಂತಿಸಿದರು.
Farmers Association ರೈತರ ಬೆಳೆಗೆ ಬೆಂಬಲ ಬೆಲೆ, ಸಕಾಲದಲ್ಲಿ ರಿಯಾಯಿತಿ ದರದಲ್ಲಿ ಬಿತ್ತನೆ ಬೀಜ ಪೂರೈಕೆ, ರಸಗೊಬ್ಬರ ಸಿಗುವಂತಾಗಬೇಕು. ಈಗ ಮಳೆ ಬಿದ್ದ ಕಾರಣ ಬಿತ್ತನೆ ಬೀಜಕ್ಕೆ ಬೇಡಿಕೆ ಇದೆ. ಹೆಚ್ಚಿನ ದರದಲ್ಲಿ ಇದನ್ನು ಮಾರುತ್ತಿರುವ ಆರೋಪ ಇದೆ. ಸರಕಾರ ಇದನ್ನು ತಡೆಗಟ್ಟಬೇಕು. ಅಧಿಕಾರಿಗಳು ಗಮನಿಸಬೇಕೆಂದ ಅವರು, ರೈತ ವಿರೋಧಿ ಮೂರ ಕಾಯ್ದೆಗಳನ್ನು ರಾಜ್ಯ ಸರಕಾರ ವಾಪಸ್ ಪಡೆಯಬೇಕು. ಬರಪರಿಹಾರವನ್ನು ವಿತರಿಸಬೇಕೆಂದು ಒತ್ತಾಯಿಸಿದರು.
ಸೈಯದ್ ಶಫೀಉಲ್ಲಾ ಹಿರೇಕಸವಿ, ಸತೀಶ್ ಹೆಚ್.ಪಿ. ಬೇಡರ ಹೊಸಹಳ್ಳಿ, ವೀರಭದ್ರೇಗೌಡರು, ಮಂಜುನಾಥ್ ಅರೇಕೊಪ್ಪ ಮೊದಲಾದವರು ಹಾಜರಿದ್ದರು
Farmers Association ರಾಜ್ಯ ರೈತ ಸಂಘ ಶಿವಮೊಗ್ಗ ಜಿಲ್ಲಾ ಸಮಿತಿ ಪುನಾರಚನೆ, ಅಧ್ಯಕ್ಷರಾಗಿ ಮಂಜುನಾಥ್ ಅರೇಕೊಪ್ಪ
Date: