Devaraj Arasu ಸಾವಿರಾರು ವಿದ್ಯಾರ್ಥಿಗಳಿಗೆ ಬದುಕು ಕಲ್ಪಿಸಿಕೊಟ್ಟ ಲಾಲ್ ಬಹದ್ದೂರ್ ಕಾಲೇಜಿನ ಹಿರಿಮೆಯನ್ನು, ಶ್ರೇಷ್ಠತೆಯನ್ನು ಉಳಿಸಿ ಬೆಳೆಸಿಕೊಂಡು ಹೋಗಬೇಕಾದ ಜವಾಬ್ದಾರಿ ಎಲ್ಲರ ಮೇಲಿದೆ ಎಂದು ಕಾಲೇಜು ಆಡಳಿತ ಮಂಡಳಿ ಮಲೆನಾಡು ಅಭಿವೃದ್ಧಿ ಪ್ರತಿಷ್ಠಾನದ ಅಧ್ಯಕ್ಷ ಎಂ.ಹರನಾಥರಾವ್ ಹೇಳಿದರು.
ಸಾಗರ ಪಟ್ಟಣದ ಎಲ್ ಬಿ ಮತ್ತು ಎಸ್ ಬಿ ಎಸ್ ಕಾಲೇಜಿನ ದೇವರಾಜ ಅರಸು ಕಲಾಕ್ಷೇತ್ರದಲ್ಲಿ ಕಾಲೇಜಿನ 1989-90 ರ ಸಾಲಿನ ಬಿ.ಕಾಂ. ವಿದ್ಯಾರ್ಥಿ ಬಳಗ ಹಮ್ಮಿಕೊಂಡಿದ್ದ ಸ್ನೇಹ ಸಮ್ಮೇಳನ ಮತ್ತು ಗೌರವಾರ್ಪಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸರ್ಕಾರದ ನೆರವಿಲ್ಲದೆ ಇತ್ತೀಚೆಗೆ ಸಂಸ್ಥೆಗೆ ಆರ್ಥಿಕವಾಗಿ ಹಿನ್ನಡೆಯಾಗಿದೆ. ಕಾಲೇಜಿನ ಒಟ್ಟೂ159 ಸಿಬ್ಬಂದಿಗಳಿಗೆ ಆಡಳಿತ ಮಂಡಳಿಯೇ ವೇತನ ಪಾವತಿಸಬೇಕು. ಹಣಕಾಸಿನ ಶಕ್ತಿ ಇರುವವರು ಈ ಶೈಕ್ಷಣಿಕ ಸಂಸ್ಥೆಗೆ ನೆರವು ನೀಡಬೇಕು. ೨೫ ಕೋಟಿ ರೂ. ನಿಧಿಯೊಂದನ್ನು ಸ್ಥಾಪಿಸಿ ಅದರ ಬಡ್ಡಿ ಹಣದಲ್ಲಿ ವೆಚ್ಚವನ್ನು ನಿರ್ವಹಣೆ ಮಾಡುವ ಯೋಜನೆಯಿದೆ. ಇದರ ಜೊತೆಗೇ ಕಾಲೇಜಿನಲ್ಲಿ ಬಿ.ಬಿ.ಎಂ., ಎಂ.ಸಿ.ಎ. ಹಾಗೂ ಕಾನೂನು ಕಾಲೇಜು ಆರಂಭಿಸುವ ಯೋಚನೆಯಿದೆ. ಇದಕ್ಕೆ ಎಲ್ಲ ಹಂತದಲ್ಲಿ ಹಳೆ ವಿದ್ಯಾರ್ಥಿಗಳು, ಪೋಷಕರು, ಉಪನ್ಯಾಸಕ ವೃಂದ ಸಹಕರಿಸಬೇಕು. ಕಾಲೇಜು ಮರಳಿ ತನ್ನ ಗತವೈಭವಕ್ಕೆ ಮರಳಬೇಕು ಎಂಬ ಆಶಯ ವ್ಯಕ್ತಪಡಿಸಿದರು.
Devaraj Arasu ಆಡಳಿತ ಮಂಡಳಿಯ ಪ್ರಧಾನ ಕಾರ್ಯದರ್ಶಿ ಡಾ.ಎಚ್.ಎಂ.ಶಿವಕುಮಾರ್ ಮಾತನಾಡಿದರು.
ವಜ್ರಮಹೋತ್ಸವಕ್ಕಾಗಿ ಕಾಲೇಜು ಯೋಜನೆ ರೂಪಿಸುತ್ತಿದೆ. ಹೊಸದಾಗಿ ಕೆಲವು ಕೋರ್ಸುಗಳನ್ನು ಆರಂಭಿಸಬೇಕಿದೆ. ಹೊಸ ಕಟ್ಟಡ ನಿರ್ಮಾಣವಾಗಬೇಕಿದೆ. ಹಳೆ ವಿದ್ಯಾರ್ಥಿಗಳು ಕಾಲೇಜು ನಡೆಯುವಾಗ ಬಂದು ವೃತ್ತಿ ಮಾರ್ಗದರ್ಶನ ಮಾಡಬೇಕು. ತಾವು ಕೆಲಸ ಮಾಡುವ ಕಂಪನಿಯಿಂದ ಸಿಎಸ್‌ಆರ್ ಫಂಡ್ ಇದ್ದರೆ ಕಾಲೇಜಿನ ಅಭಿವೃದ್ಧಿಗೆ ನೆರವಾಗಬೇಕು ಎಂದು ವಿನಂತಿಸಿದರು.
Devaraj Arasu ಎಲ್ ಬಿ ಎಸ್ ಕಾಲೇಜಿನ ಹಿರಿಮೆಯ ರಕ್ಷಣೆ ಎಲ್ಲರ ಮೇಲಿದೆ- ಎಂ.ಹರನಾಥರಾವ್
Date: