Wednesday, December 17, 2025
Wednesday, December 17, 2025

Raghupathi Bhatt ತೀರ್ಥಹಳ್ಳಿಯಲ್ಲಿ ಅಭ್ಯರ್ಥಿ ರಘುಪತಿ ಭಟ್ ಪ್ರಚಾರ ಸಭೆ

Date:

Raghupathi Bhatt ನಾನು ನೈರುತ್ಯ ಪದವೀಧರ ಕ್ಷೇತ್ರದ ಐದುವರೆ ಜಿಲ್ಲೆಗಳ ಪದವೀಧರರ ಸಮಸ್ಯೆಗಳಿಗೆ ಧ್ವನಿಯಾಗಿ ಕೆಲಸಮಾಡಬೇಕಾದ ಹಿನ್ನೆಲೆಯಲ್ಲಿ ನನ್ನ ಸಾಧನೆಯ ಆಧಾರದ ಮೇಲೆ ನನಗೆ ಮತ ನೀಡಿ ಎಂದು ಪಕ್ಷೇತರ ಅಭ್ಯರ್ಥಿ ಉಡುಪಿ ರಘುಪತಿ ಭಟ್ ಹೇಳಿದರು.
ತೀರ್ಥಹಳ್ಳಿ ಪಟ್ಟಣದ ಮಯೂರ ಸಭಾಂಗಣದಲ್ಲಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ ಈ ವಿಧಾನಪರಿಷತ್ ಚುನಾವಣೆಯಲ್ಲಿ ಪಕ್ಷಕ್ಕಿಂತ ವ್ಯಕ್ತಿಯೇ ಮುಖ್ಯವಾಗುತ್ತಾರೆ,ಯಾವುದೇ ಪಕ್ಷದ ಚುನಾವಣೆ ಇದಲ್ಲ,ವ್ಯಕ್ತಿ ಆಧಾರಿತವಾದ ಈ ಚುನಾವಣೆಯಲ್ಲಿ ಸಮರ್ಥರನ್ನು ಆರಿಸಿ ಎಂದರು.
Raghupathi Bhatt ನಾನು ಒಂದು ಬಾರಿ ಉಡುಪಿ ನಗರಸಭಾ ಅಧ್ಯಕ್ಷನಾಗಿ,ನಂತರ ಮೂರು ಬಾರಿ ಉಡುಪಿ ವಿಧಾನಸಭಾ ಕ್ಷೇತ್ರದ ಶಾಸಕನಾಗಿ ಕಾರ್ಯನಿರ್ವಹಿಸಿದ್ದೇನೆ,ಜನರ ಸಮಸ್ಯೆಗಳ ಅರಿವು ನನಗಿದೆ ಎಂದರು.
ಈ ವಿಧಾನಪರಿಷತ್ ಚುನಾವಣೆಯಲ್ಲಿ ಈ ಭಾಗದ ಪದವೀಧರ ಮತದಾರರು ನನ್ನ ಹೆಸರಿನ ಮುಂದೆ ಗುರುತು ಹಾಕಿ ನನ್ನನ್ನು ಗೆಲ್ಲಿಸಿ,ನಿಮ್ಮೆಲ್ಲರ ಗಟ್ಟಿ ಧ್ವನಿಯಾಗಿ ವಿಧಾನಪರಿಷತ್ ನಲ್ಲಿ ಮಾತನಾಡಲು ಅವಕಾಶ ನೀಡಿ ಎಂದು ಮನವಿ ಮಾಡಿದರು.
ಈ ಗೋಷ್ಟಿಯಲ್ಲಿ ಮೇಲಿನಕೊಪ್ಪ ಮಹೇಶ್,ಮದನ್ ತನಿಕಲ್,ಶಂಕರ್ ಶಿವಮೊಗ್ಗ ಮುಂತಾದವರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Women and Child Development Department ಡಿಸೆಂಬರ್ 20. ಶಿವಮೊಗ್ಗದಲ್ಲಿ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ

Women and Child Development Department ಶಿವಮೊಗ್ಗ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್,...

Madhu Bangappa ಯಾವುದೇ ಶಾಲೆ ಆದರೂ ಕನ್ನಡ ಕಲಿಸಬೇಕು ಅಂತ ಮುಚ್ಚಳಿಕೆ ಬರೆಸಿಕೊಳ್ಳುತ್ತೇವೆ- ಮಧು ಬಂಗಾರಪ್ಪ

Madhu Bangappa ರಾಜ್ಯದ ಎಲ್ಲಾ ಮಾದರಿ ಬೋರ್ಡ್‌ಗಳು ಕಡ್ಡಾಯವಾಗಿ ಕನ್ನಡ...