Sunday, December 7, 2025
Sunday, December 7, 2025

AUMA India Private Ltd ಮೇ 25 ರಂದು ಐಎಎಫ್ ದಕ್ಷಿಣ ವಲಯ ವಾರ್ಷಿಕ ಅಧಿವೇಶನ

Date:

AUMA India Private Ltd ಶಿವಮೊಗ್ಗ ಸಮೀಪದ ವಿಮಾನ ನಿಲ್ದಾಣ ರಸ್ತೆಯಲ್ಲಿರುವ ಮಲ್ನಾಡ್ ಶೈರ್ ಇಕೋ ರೆಸಾರ್ಟ್ ನಲ್ಲಿ ಮೇ25ರಂದು ಸಂಜೆ 6ಕ್ಕೆ ಐಐಎಫ್ ದಕ್ಷಿಣ ವಲಯದ 2023-24ನೇ ವಾರ್ಷಿಕ ಅಧಿವೇಶನ ಹಮ್ಮಿಕೊಳ್ಳಲಾಗಿದೆ.
ಎಯುಎಂಎ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಬೆಂಗಳೂರಿನ ಸಪ್ಲೆ ಚೈನ್ ಮ್ಯಾನೇಜ್‌ಮೆಂಟ್ ಮುಖ್ಯಸ್ಥ ಸೌರೆನ್ ಪಾಲ್ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳುವರು. ಐಐಎಫ್ ರಾಷ್ಟ್ರೀಯ ಅಧ್ಯಕ್ಷ ಡಿ.ಎಸ್.ಚಂದ್ರಶೇಖರ್ ಗೌರವ ಅತಿಥಿಯಾಗಿ ಪಾಲ್ಗೊಳ್ಳುವರು. ದಕ್ಷಿಣ ಭಾರತದ 200ಕ್ಕೂ ಹೆಚ್ಚು ಉದ್ಯಮ ಪ್ರತಿನಿಧಿಗಳು ಭಾಗವಹಿಸುವರು.
ಐಐಎಫ್ ದಕ್ಷಿಣ ವಲಯದ 2024-25ನೇ ಸಾಲಿನ ಅಧ್ಯಕ್ಷರಾಗಿ ಶಿವಮೊಗ್ಗದ ವಿಜಯ್ ಟೆಕ್ನೋಕ್ರಾಟ್ಸ್ ಪ್ರೈವೇಟ್ ಲಿಮಿಟೆಡ್ ಕಾರ್ಯನಿರ್ವಾಹಕ ನಿರ್ದೇಶಕ ಡಿ.ಜಿ.ಬೆನಕಪ್ಪ ನೇಮಕಗೊಳ್ಳಲಿದ್ದಾರೆ. ಇವರ ಅಧ್ಯಕ್ಷತೆಯಲ್ಲಿ ಫೌಂಡ್ರಿ ಉದ್ಯಮದ ಸರ್ವತೋಮುಖ ಅಭಿವೃದ್ದಿಗಾಗಿ ಕಾರ್ಯಕ್ರಮಗಳನ್ನು ಪ್ರಚುರಪಡಿಸಲಿದ್ದಾರೆ.
ಭಾರತ ದೇಶದ ಕೈಗಾರಿಕಾ ಕ್ಷೇತ್ರದ ಉತ್ಪಾದನಾ ವಲಯದಲ್ಲಿ ಹೆಚ್ಚುತ್ತಿರುವ ಬೇಡಿಕೆಗೆ ತಕ್ಕಂತೆ ಉದ್ಯಮದ ಕೌಶಲ್ಯಾಭಿವೃದ್ಧಿ, ಮಾನವ ಸಂಪನ್ಮೂಲ ಕ್ರೋಢಿಕರಣ, ಸುಧಾರಿತ ಯಾಂತ್ರೀಕರಣ, ಸ್ವಯಂಚಾಲಿತ ತಂತ್ರಜ್ಞಾನ ನವೀಕರಣ, ಕೈಗಾರಿಕೆಗಳಲ್ಲಿ ಹಸರೀಕರಣ, ಯುವ ಉದ್ಯಮಿಗಳು ಹಾಗೂ ತಾಂತ್ರಿಕ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ, ಆಂತರ ವಲಯಗಳ ಭೇಟಿ ಹಾಗೂ ವಿಚಾರ ವಿನಿಮಯ, ರಪ್ತು ವ್ಯವಹಾರದ ಬಗ್ಗೆ ತಿಳವಳಿಕೆ, ರಾಜ್ಯ, ಕೇಂದ್ರ ಸರ್ಕಾರಗಳಲ್ಲಿ ಉದ್ಯಮಗಳನ್ನು ಪ್ರತಿನಿಧಿಸುವುದು ಹಾಗೂ ಇನ್ನಿತರೆ ಕಾರ್ಯಕ್ರಮಗಳನ್ನು ನಿರೂಪಿಸಿ ಕಾರ್ಯಗತಗೊಳಿಸಲು ತಂಡ ಬದ್ದವಾಗಿದೆ.
AUMA India Private Ltd ದಿ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯನ್ ಫೌಂಡ್ರಿಮನ್ 1950ರಲ್ಲಿ ಆರಂಭವಾಗಿ 75ನೇ ವರ್ಷದ ಅಮೃತ ಮಹೋತ್ಸವವನ್ನು ಆಚರಿಸುತ್ತಿದ್ದು, ದೇಶಾದ್ಯಂತ ನೆಲೆಸಿರುವ ಫೌಂಡ್ರಿ ಉದ್ಯಮಗಳ ಶ್ರೇಯೋಭಿವೃದ್ಧಿಗಾಗಿ ಶ್ರಮಿಸುತ್ತಿರುವ ವೃತ್ತಿಪರ ಸಂಸ್ಥೆಯಾಗಿದೆ. ಕೋಲ್ಕತ್ತದಲ್ಲಿ ಪ್ರಧಾನ ಕಚೇರಿ ಇದ್ದು, 3000ಕ್ಕಿಂತ ಹೆಚ್ಚು ನೋಂದಿತ ಸದಸ್ಯ ಬಲವನ್ನು ಹೊಂದಿರುತ್ತದೆ. ಪೂರ್ವ, ಪಶ್ಚಿಮ, ಉತ್ತರ ಹಾಗೂ ದಕ್ಷಿಣ ಎಂಬ ನಾಲ್ಕು ವಲಯಗಳನ್ನುಹೊಂದಿದೆ. ಅನುಕ್ರಮವಾಗಿ ಕೋಲ್ಕತ್ತ, ಮುಂಬಯಿ, ನವದೆಹಲಿ ಹಾಗೂ ಚೆನೈ ನಗರಗಳಲ್ಲಿ ಕಚೇರಿಗಳನ್ನುಹೊಂದಿರುವ ಸಂಸ್ಥೆ ಈಗ 27 ಶಾಖೆಗಳ ಮೂಲಕ ದೇಶಾದ್ಯಂತ ಕಾರ್ಯ ನಿರ್ವಹಿಸುತ್ತಿದೆ.
ಐಐಎಫ್ ದಕ್ಷಿಣ ವಲಯವು 2024ರ ಫೆ. 2ರಿಂದ 4 ವರೆಗೆ ಐಐಎಫ್ ರಾಷ್ಟ್ರೀಯ, ಅಂತರಾಷ್ಟ್ರೀಯ ಫೌಂಡ್ರಿ ಪ್ರದರ್ಶನ ಮೇಳವನ್ನು ಬೆಂಗಳೂರಿನ ಬಿಐಇಸಿನಲ್ಲಿ ರಾಷ್ಟ್ರೀಯ ಅಧ್ಯಕ್ಷ ಡಿ.ಎಸ್.ಚಂದ್ರಶೇಖರ್ ನೇತೃತ್ವದಲ್ಲಿ ಐಐಎಫ್ ಶಿವಮೊಗ್ಗ ಶಾಖೆ ಸಹಭಾಗಿತ್ವದಲ್ಲಿ ನೇರವೇರಿಸಿ, ಅದ್ಭುತ ಯಶಸ್ಸು ಹಾಗೂ ಐಐಎಫ್ ಕೀರ್ತಿಯನ್ನು ಹೆಚ್ಚಿಸಲು ಸಹಕಾರಿಯಾಯಿತು ಎಂದು ಐಐಎಫ್ ಶಿವಮೊಗ್ಗ ಶಾಖೆ ಗೌರವ ಕಾರ್ಯದರ್ಶಿ ಮಹಾವೀರ ಜೈನ್ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

ನಿವೃತ್ತ ಅಧ್ಯಾಪಕರಿಗೆ ಪಂಚಣಿ ಪರಿಷ್ಕರಣೆಯಿಂದ ಅನ್ಯಾಯ, ಸರಿಪಡಿಸಲು ಆಗ್ರಹ

ನಿವೃತ್ತ ಅಧ್ಯಾಪಕರಿಗೆ ಆಗುವ ಅನ್ಯಾಯವನ್ನು ಸರಿಪಡಿಸುವಂತೆ ಜಿಲ್ಲಾ ವಿಶ್ವವಿದ್ಯಾಲಯ ಮತ್ತು ಪದವಿ...

ಡಿಸೆಂಬರ್ 6. ಸಾಮಾಜಿಕ ಭದ್ರತಾ ಸೌಲಭ್ಯ ವಿಸ್ತರಣೆ ಅರಿವು ಕಾರ್ಯಾಗಾರ

Shivamogga District Chamber of Commerce and Industry ಶಿವಮೊಗ್ಗ ಜಿಲ್ಲಾ...

Madhu Bangarappa ಹವಾಮಾನಾಧಾರಿತಬೆಳೆವಿಮೆ ಮೊತ್ತ ಪಾವತಿ ನ್ಯೂನತೆ ಸರಿಪಡಿಸಲು ಶೀಘ್ರ ಕ್ರಮ- ಮಧು ಬಂಗಾರಪ್ಪ

Madhu Bangarappa ಅತಿವೃಷ್ಟಿ, ಅನಾವೃಷ್ಟಿ, ತಾಪಮಾನದ ಏರಿಳಿತದಂತಹ ಹವಾಮಾನ ವೈಪರಿತ್ಯಗಳಿಂದ ತೋಟಗಾರಿಕೆ...