S.N. Channabasappa ಶಿವಮೊಗ್ಗ ಜಿಲ್ಲೆಯಲ್ಲಿ ಈ ಬಾರಿ ಮಳೆಗಾಲಕ್ಕೆ ಭರ್ಜರಿ ಆರಂಭ ಸಿಕ್ಕಿದೆ. ಕಳೆದ ಎರಡು ವಾರದಿಂದ ನಗರದಲ್ಲಿ ಬಿಡದೆ ಸತತವಾಗಿ ಮಳೆ ಧೋ ಎಂದು ಸುರಿದು ಬಿಸಿಲಿನ ಝಳಕ್ಕೆ ಬೆಂದ ಜನರಿಗೆ ಕೂಲ್ ವಾತವರಣವನ್ನು ನೀಡಿದೆ. ಬೇಸಿಗೆಯಲ್ಲಿ 40 ಡಿಗ್ರಿ ಉಷ್ಣಾಂಶ ತಲುಪಿದ್ದ ಶಿವಮೊಗ್ಗ ಸತತ ಮಳೆ ಕಾರಣದಿಂದ 27ಡಿಗ್ರಿಗೆ ಬಂದಿಳಿದಿದೆ.
ಮಳೆರಾಯನ ಎಫೆಕ್ಟ್ ನಿಂದ ಹಾನಿ ಅಷ್ಟಾಗಿ ಕಂಡು ಬರದೆ ಇದ್ದರೂ ನಿನ್ನೆ ಬಂದ ಮಳೆಗೆ ನಗರದಲ್ಲಿ ಒಂದಷ್ಟು ವಸತಿ ಪ್ರಮುಖ ಪ್ರದೇಶದ ಜನ ಪರಿತಪಿಸುವಂತಾಗಿದೆ.
ಸೋಮವಾರ ಬಂದ ಮಳೆಗೆ ಆರ.ಎಮ್.ಎಲ್ ನಗರದ ಜನ ಹೈರಾಣಾಗಿದ್ದಾರೆ.
ಬಿಡದಂತೆ ಬಿರುಸಾಗಿ ಬಂದ ಮಳೆಯ ಕಾರಣ ಡ್ರೈನೇಜ್ ತುಂಬಿ ಕಲುಷಿತ ನೀರು ಮನೆಗಳಿಗೆ ನುಗ್ಗಿದೆ ಪ್ರತಿ ಮಳೆಗಾಲದಲ್ಲಿ ಎದುರಾಗುವ ಮಳೆರಾಯನ ಕಾಟದಿಂದ ಪಾರು ಮಾಡಲು ಆಗದ ಪಾಲಿಕೆ ಆಡಳಿತ ಹಾಗು ಜನಪ್ರತಿನಿಧಿಗಳಿಗೆ ಸಾರ್ವಜನಿಕರು ಹಿಡಿ ಶಾಪ ಹಾಕುತ್ತಿದ್ದಾರೆ.
S.N. Channabasappa ಮಳೆ ಹಾನಿ ಪ್ರದೇಶಕ್ಕೆ ಶಾಸಕ ಎಸ್.ಎನ್ ಚನ್ನಬಸಪ್ಪ ಭೇಟಿ;
ಶಿವಮೊಗ್ಗ ನಗರ ಶಾಸಕರಾದ ಎಸ್ ಎನ್ ಚನ್ನಬಸಪ್ಪ ಆರ್.ಎಮ್.ಎಲ್ ನಗರದಲ್ಲಿ ನೀರು ನುಗ್ಗಿದ ಪ್ರದೇಶಕ್ಕೆ ಮಳೆ ಹಾನಿ ಸ್ಥಳ ಹಾಗು ಮನೆಗಳಿಗೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿ, ಇದರ ಕುರಿತು ಶೀಘ್ರ ಕ್ರಮಗಳನ್ನು ಕೈಗೊಳ್ಳುವಂತೆ ಸಂಬಂಧಪಟ್ಟಂತ ಅಧಿಕಾರಿಗಳೊಂದಿಗೆ ಸೂಚನೆ ನೀಡಿದರು.