Shivamogga City Corporation ಶಿವಮೊಗ್ಗ ನಗರದಲ್ಲಿ ವರ್ಷವಿಡೀ ಅನಧಿಕೃತ ಫ್ಲೆಕ್ಸ್ ಅಳವಡಿಕೆಯಿಂದ ನಗರ ಸೌಂದರ್ಯಕ್ಕೆ ಧಕ್ಕೆಯಾಗುತ್ತಿದ್ದು, ಅನೇಕ ಕಡೆಗಳಲ್ಲಿ ವಾಹನ ಸಂಚಾರಕ್ಕೆ, ಪಾದಾಚಾರಿಗಳಿಗೂ ತೀವ್ರ ತೊಂದರೆಯಾಗುತ್ತಿದೆ .ಇದರ ಬಗ್ಗೆ ಮಹಾನಗರಪಾಲಿಕೆಗೆ ಸಾರ್ವಜನಿಕರು, ವಿವಿಧ ಸಂಘ ಸಂಸ್ಥೆಗಳು ಅನೇಕ ಬಾರಿ ದೂರು ನೀಡಿದ್ದರೂ ಪ್ರಯೋಜನವಾಗಿರಲಿಲ್ಲ. ಈಗ ಚುನಾವಣಾ ನೀತಿ ಸಂಹಿತೆ ಎನ್ನುವ ದಿವ್ಯಾಸ್ತ್ರದಿಂದ ಫ್ಲೆಕ್ಸ್ ಹಾವಳಿಗೆ ತಾತ್ಕಾಲಿಕವಾಗಿ ಸಂಪೂರ್ಣ ಕಡಿವಾಣ ಬಿದ್ದಿದೆ. ಫ್ಲೆಕ್ಸ್ ರಹಿತ ನಗರಕ್ಕೆ ಸಾರ್ವಜನಿಕರು ಸಂತಸ ವ್ಯಕ್ತಪಡಿಸುತ್ತಿದ್ದಾರೆ.
ಶಿವಮೊಗ್ಗ ಮಹಾನಗರ ಪಾಲಿಕೆ ನಿರ್ಣಯದಂತೆ ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಫ್ಲೆಕ್ಸ್ ಅಳವಡಿಸುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ ಎಂದು ಸೆಪ್ಟೆಂಬರ್ ೨೦೧೮ರಲ್ಲೇ ಮಾನ್ಯ ಆಯುಕ್ತರು ಪ್ರಕಟಣೆಯನ್ನೂ ನೀಡಿದ್ದರು.ರಸ್ತೆ ವಿಭಜಕಗಳಲ್ಲಿ ಫ್ಲೆಕ್ಸ್ ಅಳವಡಿಸಿ ವಾಹನಗಳ ಅಪಘಾತಕ್ಕೆ ಕಾರಣವಾಗುತ್ತಿದೆ ಹಾಗೂ ಸಾರ್ವಜನಿಕ ಸಂಚಾರಕ್ಕೆ ತೊಂದರೆ ಉಂಟಾಗುತ್ತಿರುವುದಾಗಿ ಪೊಲೀಸ್ ಇಲಾಖೆಯಿಂದ ದೂರುಗಳು ಬಂದಿದ್ದು ಇದನ್ನು ಪಾಲಿಕೆ ಗಂಭೀರವಾಗಿ ಪರಿಗಣಿಸಿದೆ ಎಂದೂ ತಿಳಿಸಿದ್ದರು.
ಈ ಕಾರಣಗಳಿಂದ ೨೦೧೭ ರ ಜುಲೈ ೨೬ ರಂದು ನಡೆದ ಪಾಲಿಕೆ ಸಾಮಾನ್ಯ ಸಭೆಯಲ್ಲಿ ನಗರದ ವಿವಿಧ ೨೦ ಸ್ಥಳಗಳನ್ನು ನಿಗದಿಪಡಿಸಿದ್ದು ಅಲ್ಲಿ ಶುಲ್ಕ ಪಾವತಿಸಿ ಬೋರ್ಡ್ ಗಳನ್ನು ಹಾಕಲು ತೀರ್ಮಾನಿಸಲಾಗಿದೆ ಆದ್ದರಿಂದ ಇನ್ನೂ ಮುಂದಿನ ದಿನಗಳಲ್ಲಿ ಅನುಮತಿ ಪಡೆದು ನಿಗದಿತ ಸ್ಥಳಗಳಲ್ಲಿರುವ ಬೋರ್ಡ್ ಗಳನ್ನು ಬಿಟ್ಟು ಬೇರೆ ಸ್ಥಳದಲ್ಲಿ ಅಳವಡಿಸುವ ಫ್ಲಕ್ಸ್ ಗಳನ್ನು ಕಾನೂನು ಬಾಹಿರ ಎಂದು ಪರಿಗಣಿಸಲಾಗುವುದು ಎಂದು ತಿಳಿಸಿದ್ದರು.
Shivamogga City Corporation ಆದರೆ ಈಗ ಚುನಾವಣಾ ನೀತಿ ಸಂಹಿತೆ ಮುಗಿಯುತ್ತಿದ್ದಂತೆ ಮತ್ತೆ ಸಮಸ್ಯೆ ಮುಂದುವರಿಯುವುದು ನಿಶ್ಚಿತ. ನಗರ ಸೌಂದರ್ಯ, ಸುಗಮ ವಾಹನ ಸಂಚಾರ, ಪಾದಚಾರಿಗಳ ಸುರಕ್ಷತೆ, ನಿಷೇಧಿತ ಪ್ಲಾಸ್ಟಿಕ್ ಬಳಕೆ ತಡೆಗಟ್ಟುವಿಕೆ ಮುಂತಾದ ಸಾರ್ವಜನಿಕ ಹಿತಾಸಕ್ತಿ ಪರಿಗಣಿಸಿ ಈಗಾಗಲೇ ಇರುವ ನಿಷೇಧ ರೀತಿಯಲ್ಲೇ ಪಾಲಿಕೆ ಮುಂದುವರಿಸಬೇಕೆಂದು ಸಾರ್ವಜನಿಕರು ಕೋರಿದ್ದಾರೆ.
Shivamogga City Corporation ನಗರ ಸೌಂದರ್ಯ ವಿರೂಪಗೊಳಿಸುವ ಫ್ಲೆಕ್ಸ್ ಗಳ ಬಗ್ಗೆ ಪಾಲಿಕೆ ನಿಯಂತ್ರಣ ತರಲಿ
Date: