Sunday, August 2, 2026
Sunday, August 2, 2026

JNNCE College Shivamogga ಪ್ರತಿಭೆ ಅನಾವರಣಗೊಳ್ಳಲು ಉತ್ತಮ ವೇದಿಕೆ ಅಗತ್ಯ. ಅದನ್ನು “ಉತ್ಥಾನ” ನೀಡಿದೆ- ನಟಿ ನಿಧಿ ಸುಬ್ಬಯ್ಯ

Date:

JNNCE College Shivamogga ಇಂದಿನ ಯುವಕ ಯುವತಿಯರಲ್ಲಿ ಸಾಕಷ್ಟು ಪ್ರತಿಭೆ ಗಳಿವೆ. ಈ ಪ್ರತಿಭೆಗಳು ಅನಾವರಣ ಗೊಳ್ಳಲು ಉತ್ತಮ ವೇದಿಕೆ ಅಗತ್ಯ. ಅದನ್ನು ಉತ್ಥಾನ ಎಲ್ಲರಿಗೂ ನೀಡಿದೆ ಎಂದು ಖ್ಯಾತ ಸಿನಿಮಾ ತಾರೆ ನಿಧಿ ಸುಬ್ಬಯ್ಯ ಅವರು ಹೇಳಿದರು.

ಜೆಎನ್‌ಎನ್‌ಸಿಇ ಎಂಬಿಎ ವಿಭಾಗ ದಿಂದ ಆಯೋಜಿಸಿದ್ದ ರಾಜ್ಯಮಟ್ಟದ ಶೈಕ್ಷಣಿಕ, ಕ್ರೀಡಾ, ಸಾಂಸ್ಕೃತಿಕ ಸ್ಪರ್ಧೆಗಳ ಉತ್ಥಾನ ಕಾರ್ಯ ಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡುತ್ತ ಮೇಲಿನಂತೆ ನುಡಿದರು.

ರಾಷ್ಟ್ರೀಯ ಶಿಕ್ಷಣ ಸಮಿತಿ ಅಧ್ಯಕ್ಷ ಜಿ.ಎಸ್. ನಾರಾಯಣ ರಾವ್ ಅವರು ಮಾತನಾಡಿ, ಇಂದಿನ ವಿದ್ಯಾರ್ಥಿ ಗಳಲ್ಲಿ ನೈತಿಕ ಶಿಕ್ಷಣ ದ ಅಗತ್ಯತೆಯನ್ನು ತಿಳಿಸಿ ವಿದ್ಯಾರ್ಥಿಗಳು ಸಮಯಪಾಲನೆ ಪಾಲಿಸಿದಾಗ ಮಾತ್ರ ಬದುಕಿನಲ್ಲಿ ಸಾಧನೆ ಮಾಡಲು ಸಾಧ್ಯ ಆ ದಿಸೆಯಲ್ಲಿ ಕಾರ್ಯ ಪ್ರವೃತ್ತರಾಗಬೇಕೆಂದರು.

ಶಿವಮೊಗ್ಗ ಹಾಲು ಉತ್ಪಾದಕ ಸಂಘದ (ಶಿಮೂಲ್) ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಶೇಖರ್ ಅವರು ಮಾತನಾಡಿ, ಎಂಬಿಎ ವಿಭಾಗದ ಉತ್ಥಾನ ಕಾರ್ಯಕ್ರಮ ಈ ನಾಡಿನ ಸಾಂಸ್ಕೃತಿಕ.ಗಿದೆ ಎಂದರು.

ಸಮಾರಂಭದಲ್ಲಿ ರಾಷ್ಟ್ರೀಯ ಶಿಕ್ಷಣ ಸಮಿತಿಯ ಕಾರ್ಯದರ್ಶಿ ಎಸ್.ಎನ್. ನಾಗರಾಜ, ಖಜಂಚಿ ಡಿ.ಜೆ. ರಮೇಶ್, ನಿರ್ದೇಶಕರುಗಳಾದ ಟಿ.ಆರ್. ಅಶ್ವಥ್ ನಾರಾಯಣ ಶೆಟ್ಟಿ, ಶಿವಕುಮಾರ್ ಉಪಸ್ಥಿತರಿದ್ದರು.

JNNCE College Shivamogga ಜೆಎನ್‌ಎನ್‌ಸಿಇ ಕಾಲೇಜ್ ಪ್ರಾಂಶುಪಾಲ ಡಾ. ವೈ ವಿಜಯ ಕುಮಾರ್ ಅಧ್ಯಕ್ಷತೆ ವಹಿಸಿದ್ದರು, ಎಂಬಿಎ ವಿಭಾಗದ ನಿರ್ದೇಶಕ ಡಾ. ಸಿ. ಶ್ರೀಕಾಂತ ಅವರು ಮಾತನಾಡಿ ಕಾರ್ಯಕ್ರಮದ ಯಶಸ್ವಿಯಾಗಿ ಆಯೋಜಿಸಲು ಕಾರಣರಾದ ಶ್ರೀಮತಿ ಅನುರಾಧ, ಡಾ. ಸಂತೋಷ, ಡಾ. ಪ್ರವೀಣ್ ಕುಮಾರ್ ಹಾಗೂ ಸಹೋದ್ಯೋಗಿ ಗಳಿಗೆ ಅಭಿನಂದನೆಸಲ್ಲಿಸಿದರು. ಸುಮಾರು ೩೦ಪದವಿ ಕಾಲೇಜ್‌ಗಳಿಂದ ೮೫೦ಕ್ಕೂ ಅಽಕ ವಿದ್ಯಾರ್ಥಿಗಳು, ಸಮೂಹ ನೃತ್ಯ, ರಸಪ್ರಶ್ನೆ, ಸಮೂಹ ಗಾನ ಪೇಸ್ ಪೈಟಿಂಗ್ ಟ್ರಜರ ಹಂಟ್ ಪೇಪರ್ ಪ್ರಸೆಂಟೇಶನ್, ವಾಲಿಬಾಲ್ ಮುಂತಾದ ಸ್ಪರ್ಧೆಯಲ್ಲಿ ಭಾಗವಹಿಸಿ ದ್ದರು ಎಂ ಬಿ ಎ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಬಿ.ವಿ. ಶ್ರೀನಿವಾಸ್ ಮೂರ್ತಿ ಇನ್ನಿತರರಿದ್ದರು

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

B.Y. Raghavendra ₹ 6.400 ಕೋಟಿ ವೆಚ್ಚದ ಶಿವಮೊಗ್ಗ- ತುಮಕೂರು ಚತುಷ್ಪಥ ರಸ್ತೆ ಮುಂದಿನ ಮಾರ್ಚ್ ಗೆ ಸಿದ್ಧ- ಬಿ.ವೈ.ರಾಘವೇಂದ್ರ

B.Y. Raghavendra ಮಲೆನಾಡು ಹಾಗೂ ರಾಜಧಾನಿ ಬೆಂಗಳೂರು ನಡುವಿನ ಸಂಪರ್ಕವನ್ನು ಕ್ರಾಂತಿಕಾರಕವಾಗಿ...

S. N. Channabasappa ಬಡಾವಣೆಗಳಿಗೆ ಮೂಲಭೂತ ಸೌಕರ್ಯ ಒದಗಿಸುವುದು ನಮ್ಮ ಮುಖ್ಯ ಕರ್ತವ್ಯ- ಎಸ್.ಎನ್.ಚನ್ನಬಸಪ್ಪ

S. N. Channabasappa ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಒಳಪಡುವ...

Rotary Club of Shivamogga ಮಕ್ಕಳಲ್ಲಿ ರೋಟರಿ ಸಂಸ್ಥೆ ನಾಯಕತ್ವ ಗುಣಗಳನ್ನ ಬೆಳೆಸುತ್ತದೆ- ಡಿ.ಕೆ.ನರಹರಿ

Rotary Club of Shivamogga ರೋಟರಿ ಸಂಸ್ಥೆಯು ಮಕ್ಕಳಿಗೆ ಶಾಲಾ ಹಂತದಲ್ಲಿಯೇ...

B.Y. Raghavendra ಹವಾಮಾನ ಆಧಾರಿತ ಬೆಳೆವಿಮೆ: ಅರ್ಜಿ ಸಲ್ಲಿಕೆ ಅಂತಿಮ ದಿನಾಂಕ ವಿಸ್ತರಿಸಿ- ಸಂಸದ ಬಿ.ವೈ‌.ರಾಘವೇಂದ್ರ

B.Y. Raghavendra ಮುಂಗಾರು ಹಂಗಾಮಿನಲ್ಲಿ ರಾಜ್ಯಾದ್ಯಂತ ವಾಡಿಕೆಗಿಂತ ಶೇ.34 ರಷ್ಟು ಮಳೆ...