Saturday, December 6, 2025
Saturday, December 6, 2025

HD Kumaraswamy ಕಾಂಗ್ರೆಸ್ ಸರ್ಕಾರಕ್ಕೆ ಸತ್ಯಾಂಶ ಬೇಕಿಲ್ಲ. ಜೆಡಿಎಸ್& ದೇವೇಗೌಡರ ಕುಟುಂಬದ ವರ್ಚಸ್ಸು ಹಾಳು ಮಾಡಬೇಕಿತ್ತು-‌ಕುಮಾರಸ್ವಾಮಿ

Date:

HD Kumaraswamy ಪ್ರಜ್ವಲ್ ರೇವಣ್ಣ ಅವರು ಸಂಸದರಾಗಿದ್ದಾಗಲೇ ನಮ್ಮ ಸಂಪರ್ಕದಲ್ಲಿ ಇರಲಿಲ್ಲ. ಹಾಗಾಗಿರುವಾಗ ವಿದೇಶದಲ್ಲಿರುವ ಅವರು ನಮ್ಮ ಸಂಪರ್ಕಕ್ಕೆ ಸಿಗುವರೇ? ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪ್ರಶ್ನಿಸಿದರು.

ಮೈಸೂರು ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, “ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಸತ್ಯಾಂಶ ಬೇಕಾಗಿಲ್ಲ, ಜೆಡಿಎಸ್ ಹಾಗೂ ದೇವೇಗೌಡರ ಕುಟುಂಬದ ವರ್ಚಸ್ಸು ಹಾಳು ಮಾಡಬೇಕಾಗಿತ್ತು.

ಹಾಗಾಗಿ ಎಸ್.ಐ.ಟಿ.ಮೂಲಕ ಅನಾವಶ್ಯಕವಾಗಿ ಕೆಲವರನ್ನು ತನಿಖೆ ಮಾಡಿ ಹಿಂಸೆ ನೀಡುತ್ತಿದ್ದಾರೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ʼಎಸ್.ಐ.ಟಿ. ತನಿಖೆ ಪ್ರಾಮಾಣಿಕವಾಗಿ ತನಿಖೆ ನಡೆಸುತ್ತಿಲ್ಲ. ವಕೀಲ ದೇವೇರಾಜೇಗೌಡರನ್ನು ಬಂಧಿಸಿ, ಅವರಿಂದ ಪ್ರಕರಣ ದ ಬಗ್ಗೆ ಮಾಹಿತಿ ಪಡೆಯುವ ಬದಲು ಆಡಿಯೋ ಕ್ಲಿಪಿಂಗ್ ಪಡೆಯುವ ಪ್ರಯತ್ನ ಮಾಡುತ್ತಿದ್ದಾರೆ.

ಪ್ರಕರಣದಲ್ಲಿ ರಾಜ್ಯ ಸರ್ಕಾರ ಬಿದ್ದು ಹೋಗುವ ಭಯ ಕಾಂಗ್ರೆಸ್‌ ನಾಯಕರಿಗೆ ಕಾಡುತ್ತಿದೆ. ಹಾಗಾಗಿ ಸರ್ಕಾರ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಎಸ್.ಐ.ಟಿ.ಯಿಂದ ತನಿಖೆ ನಡೆಸುತ್ತಿದ್ದಾರೆʼ ಎಂದು ಹೇಳಿದರು.

HD Kumaraswamy “ತನಿಖೆಯ ಇಂಚಿಚೂ ವರದಿ ಗೃಹ ಸಚಿವರಿಗೆ ಹೋಗುತ್ತಿಲ್ಲ. ಬದಲಾಗಿ ಮಂಡ್ಯದ ಶಾಸಕರಿಗೆ ಹೋಗುತ್ತಿದೆ. ಹಾಗಾಗಿ ಆ ಶಾಸಕರು ವಾರದೊಳಗೆ ದೊಡ್ಡ ತಿಮಿಂಗಿಲ ಬಯಲಿಗೆ ಬರುತ್ತದೆ. ಅವರನ್ನು ಬಂಧಿಸಲಾಗುತ್ತದೆ ಎಂದು ಹೇಳಿದ್ದಾರೆ. ಗೃಹ ಸಚಿವರು ತಮ್ಮ ಪಕ್ಕದಲ್ಲೇ ದೊಡ್ಡ ತಿಮಿಂಗಿಲವನ್ನು ಕೂರಿಸಿಕೊಂಡಿದ್ದಾರೆ. ಅವರನ್ನು ಹಿಡಿದು ತನಿಖೆ ಮಾಡಿದರೆ ಸತ್ಯ ಹೊರಬರಲಿದೆ” ಎಂದು ನುಡಿದರು

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Indian Medical Association 30 ವರ್ಷ ದಾಟಿದ ಮಹಿಳೆಯರು ಪ್ಯಾಪ್ಸ್ ಮಿಯರ್ ಟೆಸ್ಟ್ ಅನ್ನು 3 ವರ್ಷಕ್ಕೆ ಒಂದು ಬಾರಿ‌ ಮಾಡಿಸಬೇಕು- ಡಾ.ರಕ್ಷಾರಾವ್

Indian Medical Association ಮಹಿಳೆಯರು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಜಾಗ್ರತೆ ವಹಿಸಬೇಕು...

MESCOM ಡಿಸೆಂಬರ್ ‌9. ಕುಂಸಿ ಮೆಸ್ಕಾಂ ಉಪವಿಭಾಗ ಕಚೇರಿಯಲ್ಲಿ ಜನ ಸಂಪರ್ಕ ಸಭೆ

MESCOM ಕುಂಸಿ ಮೆಸ್ಕಾಂ ಉಪವಿಭಾಗದಲ್ಲಿ ಡಿ. 09 ರಂದು ಬೆಳಗ್ಗೆ 11.00...