Kavite with K Live ಸಜ್ಜನರ ಸಂಗ ದುರ್ಜನರ ಸಂಗ
ಈ ಲೋಕದೊಳಗೆ ಎಲ್ಲಕ್ಕಿಂತ
ಮಿಗಿಲಾದ ಸಂಗ ಮನಸೊಳಗಿನ
ಏಕಾಂತದ ನಿರುಮ್ಮಳ ಸಂಗ.
ಹುಟ್ಟು ಉಚಿತ ಸಾವು ಖಚಿತ
ಎರಡಕ್ಕೂ ಹೆಸರಿಲ್ಲದೆ ಸದಾ
ಜಂಜಾಟದಲ್ಲಿ ರೋಸಿಹೋಗಿ
ಕಳೆದೋಗುವುದೇ ಈ ಸಂಗ.
ಕಾಲದೊಂದಿಗೆ ಬಂದಾಗ ಬಂದಂತೆ
ಕಾಲಾನಂತರ ಇದ್ದಾಗ ಇದ್ದಂತೆ
ಒಳ್ಳೆಯವರನ್ನು ಹುಡುಕುವುದಕ್ಕಿಂತ
ನಾವೇ ಬದಲಾದರೆ ಒಳಿತಲ್ಲವೇ.
ಏನೇ ಆಗಲಿ ಬಂದದ್ದು ಬರಲಿ
ಹೋಗೋದು ಇಲ್ಲೆ ಹೋಗಲಿ
ಎಲ್ಲಾ ಭಾರಕ್ಕಿಂತ ಈ ಜೀವನದ
ಭಾರವು ಎಲ್ಲಕ್ಕಿಂತ ಮಿಗಿಲಲ್ಲವೇ.
ಕಷ್ಟ ಸುಖ ಏನೇನೋ ಬರಲಿ
ಜೀವನದ ಬಂಡಿ ಮುಂದೆ ಸಾಗಲಿ
ಹಸಿವಿನ ಶಕ್ತಿ ಇಂಗಿಸೋ ಕೈಗಳಿಗೆ
ಆತ್ಮಸ್ಥೈರ್ಯದ ಬಲ ಒದಗಲಿ.
Kavite with K Live ಈ ಹೊಟ್ಟೆ ಉರಿಸಲೆಂದೆ ನೂರಾರು
ಕಿಡಿಗಳು ಕಾದಿವೆ ಜಗ್ಗದೆ ಕುಗ್ಗದೆ
ಮುಗಿಲ ಕಡೆ ಮುಖವ ಮಾಡಿ
ಮುನ್ನುಗ್ಗುತಾ ಸಾಗಲೇಬೇಕು.
ಎಲ್ಲವನು ಮೀರುವುದಕ್ಕಿಂತ
ಯೋಚಿಸಿ ಕೂತರೆ ಲೇಸು
ಕರಿಮಸಿಯೊಳಗಿನ ಬಿಂಬಕ್ಕೆ
ಯಾವತ್ತೂ ಸರದಾರನಾಗಬಾರದು.
ರಚನೆ : ರವಿಕುಮಾರ್.ಕೆ.ಎಂ, ಸಹಾಯಕ ಪ್ರಾಧ್ಯಾಪಕರು, ಯುವಕವಿ, ಹವ್ಯಾಸಿ ಬರಹಗಾರರು, ಶಿವಮೊಗ್ಗ