Thursday, August 6, 2026
Thursday, August 6, 2026

Shimoga Double Murder ಬೀರನಕೆರೆ: ಬೆಳ್ಳಂಬೆಳಿಗ್ಗೆ ರೌಡಿ‌ ಕಾಲಿಗೆ ಗುಂಡು. ಶೊಯಬ್ ಸೆರೆ

Date:

ಬೆಳ್ಳಂಬೆಳಗ್ಗೆ ಶಿವಮೊಗ್ಗ ಸಮೀಪ ಗುಂಡಿನ ಸದ್ದು… ಆತ್ಮ ರಕ್ಷಣೆಗಾಗಿ ಆರೋಪಿಗೆ ಗುಂಡು ಹೊಡೆದ ಪೊಲೀಸರು..!

Shimoga Double Murder ಇತ್ತೀಚೆಗೆ ಶಿವಮೊಗ್ಗದ ಲಷ್ಕರ್‌ ಮೊಹಲ್ಲಾದಲ್ಲಿ ನಡೆದ ಮೂವರ ಹತ್ಯೆ ಪ್ರಕರಣ ಸಂಬಂಧ ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನಕ್ಕೆ ತೆರಳಿದ್ದ ವೇಳೆ ಆತ ಪೊಲೀಸರ ಮೇಲೆ ದಾಳಿ ನಡೆಸಿದ್ದಾನೆ. ಈ ಸಂದರ್ಭ ಪೊಲೀಸರು ಆತ್ಮರಕ್ಷಣೆಗಾಗಿ ಆರೋಪಿಯ ಕಾಲಿಗೆ ಗುಂಡು ಹೊಡೆದಿದ್ದಾರೆ. ಶಿವಮೊಗ್ಗ ತಾಲೂಕು ಬೀರನಕೆರೆ ಗ್ರಾಮದ ಬಳಿ ಘಟನೆ ಸಂಭವಿಸಿದೆ.

ಶೋಯಬ್‌ ಅಲಿಯಾಸ್‌ ಅಂಡ ಎಂಬಾತನ ಕಾಲಿಗೆ ಗುಂಡು ಹೊಡೆಯಲಾಗಿದೆ. ಖಚಿತ ಮಾಹಿತಿ ಮೇರೆಗೆ ಇವತ್ತು ಬೆಳಗಿನ ಜಾವ ಶೋಯಬ್‌ನ ಬಂಧನಕ್ಕೆ ಪಿಎಸ್‌ಐ ಕುಮಾರ್‌ ಮತ್ತು ಸಿಬ್ಬಂದಿ ಅಣ್ಣಪ್ಪ ಬೀರನಕೆರೆಗೆ ತೆರಳಿದ್ದರು. ಈ ಸಂದರ್ಭ ಮಾರಕಾಸ್ತ್ರದಿಂದ ಪೊಲೀಸ್‌ ಸಿಬ್ಬಂದಿ ಮೇಲೆ ಆತ ದಾಳಿಗೆ ಯತ್ನಿಸಿದ್ದ.ಆತ್ಮರಕ್ಷಣೆಗಾಗಿ ಪಿಎಸ್‌ಐ ಕುಮಾರ್‌ ಗುಂಡು ಹಾರಿಸಿದ್ದಾರೆ.

Shimoga Double Murder ಶೋಯಬ್‌ ಅಲಿಯಾಸ್‌ ಅಂಡ ಹಲವು ಅಪರಾಧ ಚಟುವಟಿಕೆಯಲ್ಲಿ ತೊಡಗಿದ್ದ. ಆತನ ವಿರುದ್ಧ ವಿವಿಧ ಠಾಣೆಗಳಲ್ಲಿ ಐದು ಪ್ರಕರಣಗಳಿವೆ. ಈ ಪೈಕಿ ಎರಡು ಕೊಲೆ ಯತ್ನ ಪ್ರಕರಣಗಳಿವೆ.ಈತ ಆದಿಲ್‌ ಗ್ಯಾಂಗ್‌ನಲ್ಲಿದ್ದ ಎಂದು ಜಿಲ್ಲಾ ರಾಕ್ಷಣಾಧಿಕಾರಿ ಮಿಥುನ್‌ ಕುಮಾರ್‌ ಮಾಧ್ಯಮಗಳಿಗೆ ವಾಟ್ಸಪ್‌ನಲ್ಲಿ ತಿಳಿಸಿದ್ದಾರೆ

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Shivamogga News ಥಣ್ಣಗಾಗುತ್ತಿರುವ ಸಚಿವಾಕಾಂಕ್ಷಿತನ..…ಶಿವಕೌಶಲ

Shivamogga News ರಾಜಕೀಯದಲ್ಲಿ ಸ್ಥಿರತೆ ಯಾವತ್ತಿಗೂ ನಿರೀಕ್ಷಿಸಲಾಗದು ಎಂಬ ಮುತ್ಸದ್ದಿಗಳ ಮಾತಿದೆ....

DC Shivamogga ಮುಂದಿನ 61 ವಾರಗಳಿಗೆ ಜಾನುವಾರುಗಳ ಅಗತ್ಯ ಮೇವಿಗೆ ಕೊರತೆಯಿಲ್ಲ : ಪ್ರಭುಲಿಂಗ ಕವಳಿಕಟ್ಟಿ

DC Shivamogga ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವತಿಯಿಂದ ಆಗಸ್ಟ್...