Mother’s Day ಇಂದು ವಿಶ್ವ ತಾಯಂದಿರ ದಿನ.
ತಂದೆತಾಯಿಯರು ನಮಗೆ ಮೊದಲ
ದೇವರು.ನಮಗೆ ಮೊದಲ ಗುರುಗಳೂ ಹೌದು.
ಅವರಿಗೆ ನಿತ್ಯ ನಾವು ಗೌರವಗಳನ್ನು ಸಲ್ಲಿಸುವುದಲ್ಲದೇ ,ಇಂತಹ ವರ್ಷಕ್ಕೊಂದು
ಸಾರಿ ಬರುವ ವಿಶೇಷ ದಿನದಲ್ಲಿ ವಿಶೇಷವಾದ
ಗೌರವಾದರಗಳನ್ನು ಇಬ್ಬರಿಗೂ ತೋರಿಸುವುದರಿಂದ
ಈ ದಿನದ ಆಚರಣೆ ಅರ್ಥಪೂರ್ಣವಾಗುತ್ತದೆ.
ತಂದೆತಾಯಿಯರು ನಮಗೆ ಲಕ್ಷ್ಮೀನಾರಾಯಣ ಸ್ವರೂಪವಿದ್ದಂತೆ.
ತಂದೆ ಪ್ರೀತಿಯು ಒಂದು ತೆರನಾದರೆ,ತಾಯಿಯ ಪ್ರೀತಿ
ಇನ್ನೊಂದು ತರಹೆಯಾಗಿರುತ್ತೆ.
ಒಟ್ಟಾರೆ ತಂದೆತಾಯಿಯರ ಪ್ರೀತಿಯ ಪೋಷಣೆಯೇ
ಮಕ್ಕಳು ದೊಡ್ಡವರಾಗಿ ಬೆಳೆಯಲು ಸಾಧ್ಯ.
ಮಕ್ಕಳ ಪೋಷಣೆಯಲ್ಲಿ ತಾಯಿಯ ಪಾತ್ರ ಮಹತ್ತರವಾಗಿದೆ.ತಾಯಿ ಒಂಭತ್ತು ತಿಂಗಳು ತನ್ನ ಹೊಟ್ಟೆಯಲ್ಲಿ ಹೊತ್ತು ,ತಾನು ಕಷ್ಟಗಳನ್ನು ಅನುಭವಿಸಿದರೂ ಮಕ್ಕಳಿಗಾಗಿ ಅವುಗಳನ್ನು ಸಹಿಸಿ
ಕೊಳ್ಳುವ ಸಹನಾಮೂರ್ತಿ ತಾಯಿ.ಒಮ್ಮೆ ದಿನ ತುಂಬಿ
ಪ್ರಸವವಾದ ಮೇಲೆ ,ಮಗುವಿನ ಅಮ್ಮಾ…ಅಮ್ಮಾಎನ್ನುವ
Mother’s Day ಧ್ವನಿಯನ್ನು ಕೇಳಿದ ಕೂಡಲೇ ಅನುಭವಿಸಿದ ನೋವೆಲ್ಲವೂ ಮಾಯವಾಗಿ ಸಮಾಧಾನದ ನಿಟ್ಟುಸಿರುಬಿಡುತ್ತಾಳೆ.ಹೊಟ್ಟೆಯಲ್ಲಿದ್ದಾಗಿನಿಂದ,ಭೂಮಿಯಲ್ಲಿ ಹುಟ್ಟಿದಮೇಲೆ ಮತ್ತು ಮಕ್ಕಳನ್ನು ದೊಡ್ಡವರನ್ನಾಗಿಬೆಳೆಸುವ ತನಕ ತಾಯಿಯ ಜವಾಬ್ದಾರಿ ಮಹತ್ವಪೂರ್ಣದ್ದಾಗಿದೆ.ತಂದೆಯದು ಪೋಷಣೆಯಾದರೆತಾಯಿಯದುಪಾಲನೆಯಾಗುತ್ತದೆ.ಕೆಟ್ಟ ಮಕ್ಕಳಿರಬಹುದುಆದರೆಕೆಟ್ಟತಾಯಿಇರಳಾರಳು.
ಮಕ್ಕಳಿಗೆ ತಾಯಿತಂದೆಯರಿಬ್ಬರ ಪ್ರೀತಿಯೂ ಬೇಕು.
ತಂದೆತಾಯಿಯರನ್ನು ಗೌರವಿಸೋಣ,ಆದರಿಸೋಣ
ಪ್ರೀತಿಸೋಣ.
ವಿಶ್ವತಾಯಂದಿರ ದಿನದಂದು ತಂದೆತಾಯಿಯರಿಗೆ
ನಮಸ್ಕರಿಸಿ ಅವರ ಆಶೀರ್ವಾದ ಪಡೆಯೋಣ.
Mother’s Day ವಿಶ್ವ ಅಮ್ಮಂದಿರ ದಿನವಿಶೇಷ ಲೇಖನ:ಎನ್.ಜಯಭೀಮ ಜೊಯ್ಸ್.ಶಿವಮೊಗ್ಗ
Date: