Ramakrishna Vidyaniketan School ಶಿವಮೊಗ್ಗ ಗೋಪಾಲದಲ್ಲಿರುವ ಶ್ರೀ ರಾಮಕೃಷ್ಣ ವಿದ್ಯಾನಿಕೇತನ ಶಾಲೆಗೆ ಎಂದಿನಂತೆ ಎಸ್ ಎಸ್‌ಎಲ್ ಸಿ ಪರೀಕ್ಷೆಯಲ್ಲಿ ಈ ಬಾರಿಯೂ ಶೇಕಡಾ 100ರಷ್ಟು ಫಲಿತಾಂಶ ಲಭಿಸಿದೆ.
ಸದ್ಯದ ಮಾಹಿತಿ ಅನುಸಾರ ಶಿವಮೊಗ್ಗ ಜಿಲ್ಲೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ಇಬ್ಬರು ವಿದ್ಯಾರ್ಥಿಗಳನ್ನು ಈ ಸಂಸ್ಥೆ ಕಂಡಿದೆ.
619 ಅಂಕ ಗಳಿಸಿ ಪ್ರಣಿತ್ ಜಿ ಹಾಗೂ ವಿಧಾತ್ರಿ ಬಾಯರಿ 619 ಅಂಕ ಗಳಿಸುವ ಮೂಲಕ ಜಿಲ್ಲೆಯಲ್ಲೆ ಅತ್ತುತ್ತಮ ಸ್ಥಾನವನ್ನು ಗುರುತಿಸಿಕೊಂಡಿದ್ದಾರೆ. ಫಲಿತಾಂಶದ ಅಂತಿಮ ಅಂತದ ಮಾಹಿತಿ ದೊರೆತಾಗ ವಿವರ ಸಿಗಲಿದೆ ಅಂತೇಯೆ ಶಾಲೆಯ ಅನನ್ಯ ಕೆ.ಎಸ್ 618, ವಿಕಾಸ್ ಡಿ.ಬಿ 616 ಅಂಕ ಪಡೆದಿದ್ದು, ಈ ನಾಲ್ಕು ವಿದ್ಯಾರ್ಥಿಗಳು ಕನ್ನಡದಲ್ಲಿ ಶೇ.100ರಷ್ಟು ಫಲಿತಾಂಶ ದಾಖಲಿಸಿರುವುದು ವಿಶೇಷ.
Ramakrishna Vidyaniketan School ಶಾಲೆಯ 19 ಮಕ್ಕಳು 600ಕ್ಕಿಂತ ಹೆಚ್ಚು ಅಂಕ ಪಡೆದಿದ್ದು, ನಿಖಿಲ್ ರಾಜ್ 615, ಅಂಕಿತ್ 613, ಸೃಷ್ಠಿ ಕಮಲ 610, ಟಿ. ಚಿನ್ನರೆಡ್ಡಿ 608, ಶಕ್ತಿ ಎಸ್ ಬಾದಲ್ 607, ಲಾವಣ್ಯ ಎಸ್.ಎಂ. 607, ಹರೀಶ್ ಗೌಡ 606, ಗೋವರ್ಧನ್ ಗೌಡ 606, ಪ್ರೇಕ್ಷಾ ಹೆಚ್.ಎಸ್. 605, ಖಾದ್ರಿರ 604, ಧನ್ಯ ಬಿದರೆ 604, ಭೂಮಿಕ ಎನ್ 604 ಮಹಮ್ಮದ್ ಶಾಹಿದ್ 604, ಸಂಪ್ರಿತ್ ತಿವಾರಿ 603, ಪ್ರೇರಣಾ 600 ಅಂಕ ಪಡೆದಿದ್ದು ವಿಶೇಷ.
ಶಾಲೆಯಲ್ಲಿ 95 ವಿದ್ಯಾರ್ಥಿಗಲು ಡಿಸ್ಟಿಂಕ್ಷನ್ ಪಡೆದಿದ್ದು,70 ವಿದ್ಯಾರ್ಥಿಗಳು ಪ್ರಥಮ ದರ್ಜೆ ಹಾಗೂ ನಾಲ್ವರು ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. ಅತ್ಯುತ್ತಮ ಫಲಿತಾಂಶವನ್ನು ಕೊಡಿಸಿದ ಶಿಕ್ಷಕ ವೃಂದಕ್ಕೆಹಾಗೂ ವಿದ್ಯಾರ್ಥಿ ವೃಂದಕ್ಕೆ ರಾಮಕೃಷ್ಣ ವಿದ್ಯಾನಿಕೇತನದ ಅಧ್ಯಕ್ಷ ಡಾ.ನಾಗೇಶ್, ಕಾರ್ಯದರ್ಶಿ ಶೋಭಾವೆಂಕರಮಣ ಅಭಿನಂದಿಸಿದ್ದಾರೆ.