Manasa Trust ಕೌಶಲ್ಯ ತರಬೇತಿ ನೀಡುವ ಆಶಯದಿಂದ ಅಡ್ವಾನ್ಸ್ಡ್ ಸ್ಕಿಲ್ ಅಕಾಡೆಮಿ ಹಾಗೂ ಮಾನಸ ಟ್ರಸ್ಟ್ ಒಡಂಬಡಿಕೆ ಮಾಡಿಕೊಂಡಿದೆ. ಮಾನಸ ಸಮೂಹ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳು ಮತ್ತು ಆಸ್ಪತ್ರೆಯ ಸಿಬ್ಬಂದಿಗೆ ಕೌಶಲ್ಯವೃದ್ಧಿಗೆ ಅಗತ್ಯ ತರಬೇತಿ ನೀಡುವುದು ಒಡಂಬಡಿಕೆಯ ಪ್ರಮುಖ ಆಶಯವಾಗಿದೆ.
ಮಾನಸ ಟ್ರಸ್ಟ್ ವತಿಯಿಂದ ಮ್ಯಾನೇಜಿಂಗ್ ಟ್ರಸ್ಟಿ ಡಾ. ರಜನಿ ಪೈ, ಪ್ರೀತಿ ವಿ ಶಾನಭಾಗ್ ಹಾಗೂ ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ವತಿಯಿಂದ ಅಧ್ಯಕ್ಷ ಎನ್.ಗೋಪಿನಾಥ್, ಕಾರ್ಯದರ್ಶಿ ವಸಂತ ಹೋಬಳಿದಾರ್ ಒಡಂಬಡಿಕೆ ಸಹಿ ಹಾಕಿದರು.
ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಎನ್.ಗೋಪಿನಾಥ್ ಮಾತನಾಡಿ, ಸ್ಕಿಲ್ ಅಕಾಡೆಮಿ ವತಿಯಿಂದ ಮಾನಸ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳಿಗೆ ಅಗತ್ಯ ಕೌಶಲ್ಯಗಳನ್ನು ತರಬೇತಿ ನೀಡುವುದು ಹಾಗೂ ಆಸ್ಪತ್ರೆಯ ಸಿಬ್ಬಂದಿಗೆ ವೃತ್ತಿ ಕೌಶಲ್ಯ ಹೆಚ್ಚಿಸಿಕೊಳ್ಳಲು ಸೂಕ್ತ ಮಾರ್ಗದರ್ಶನ ನೀಡುವುದು ಪ್ರಮುಖ ಉದ್ದೇಶವಾಗಿದೆ. ಇದರಿಂದ ಉತ್ತಮ ಪರಿಣಾಮಗಳನ್ನು ವೃತ್ತಿಯಲ್ಲಿ ಕಾಣಬಹುದಾಗಿದೆ ಎಂದು ಹೇಳಿದರು.
Manasa Trust ಸ್ಕಿಲ್ ಅಕಾಡೆಮಿಯು ಈಗಾಗಲೇ ವಿವಿಧ ಶಿಕ್ಷಣ ಸಂಸ್ಥೆಗಳೊಂದಿಗೆ ಒಡಂಬಡಿಕೆ ಮಾಡಿಕೊಂಡಿದ್ದು, ವಿದ್ಯಾರ್ಥಿಗಳಿಗೆ ತಂತ್ರಜ್ಞಾನ ಯುಗಕ್ಕೆ ಪೂರಕವಾಗಿ ವೃತ್ತಿಗೆ ಅವಶ್ಯವಿರುವ ಕೌಶಲ್ಯಗಳನ್ನು ಕಲಿಸುತ್ತಿದೆ. ಇದರೊಂದಿಗೆ ಉದ್ಯೋಗ ನೀಡುವ ಸಂಸ್ಥೆಗಳೊಂದಿಗೆಯು ಸ್ಕಿಲ್ ಅಕಾಡೆಮಿ ಕಾರ್ಯ ನಿರ್ವಹಿಸುತ್ತಿದ್ದು, ವಿದ್ಯಾರ್ಥಿಗಳಿಗೆ ಶಿಕ್ಷಣ ಪೂರೈಕೆ ನಂತರ ಉದ್ಯೋಗ ಅವಕಾಶ ಕಲ್ಪಿಸಿಕೊಡಲು ಸಹಕಾರಿಯಾಗಲಿದೆ ಎಂದು ತಿಳಿಸಿದರು.
ಮಾನಸ ಟ್ರಸ್ಟ್ ಮ್ಯಾನೇಜಿಂಗ್ ಟ್ರಸ್ಟಿ ಡಾ. ರಜನಿ ಪೈ ಅವರು ವಿದ್ಯಾರ್ಥಿಗಳ ಭವಿಷ್ಯದ ದೃಷ್ಠಿಯಿಂದ ಒಡಂಬಡಿಕೆಯು ಅನುಕೂಲವಾಗಲಿದೆ ಎಂದು ಅನಿಸಿಕೆ ವ್ಯಕ್ತಪಡಿಸಿದರು.
ಒಡಂಬಡಿಕೆ ವೇಳೆಯಲ್ಲಿ ಸ್ಕಿಲ್ ಅಕಾಡೆಮಿ ಸಿಇಒ ಸವಿತಾ ಮಾಧವ್, ಕಟೀಲ್ ಅಶೋಕ್ ಪೈ ಮೆಮೋರಿಯಲ್ ಕಾಲೇಜ್ ಡಾ. ಸಂಧ್ಯಾ ಕಾವೇರಿ, ಮಾನಸ ಗ್ರೂಪ್ ಆಡಳಿತಾಧಿಕಾರಿ ಪ್ರೊ. ಆರ್.ಕೆ.ಬಾಳಿಗ ಉಪಸ್ಥಿತರಿದ್ದರು.
Manasa Trust ಮಾನಸ ಟ್ರಸ್ಟ್ & ಅಡ್ವಾನ್ಸ್ಡ್ ಸ್ಕಿಲ್ ಅಕಾಡೆಮಿ ಒಡಂಬಡಿಕೆಗೆ ಸಹಿ
Date: