Friday, November 22, 2024
Friday, November 22, 2024

World Red Cross Day ರಕ್ತದಾನದಿಂದ ಬುದ್ಧಿ ಚುರುಕು. ದೇಹ ಸದೃಢ- ಡಾ.ದಿನೇಶ್

Date:

World Red Cross Day ಜಗತ್ತಿನಲ್ಲಿ ರಕ್ತದಾನಕ್ಕಿಂತ ಅನ್ಯದಾನ ಬೇರೆ ಇಲ್ಲ. ರಕ್ತವನ್ನು ಕೃತಕವಾಗಿ ಉತ್ಪಾದನೆ ಮಾಡಲು ಆಗುವುದಿಲ್ಲ ರಕ್ತದಾನದಿಂದ ಬುದ್ಧಿ ಚುರುಕಾಗುವುದರ ಜೊತೆಗೆ ಸದಾ ಸದೃಢರಾಗಿ ಆರೋಗ್ಯವಾಗಿರುತ್ತಾರೆ ಎಂದು ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಕಾರ್ಯದರ್ಶಿ ಡಾಕ್ಟರ್ ದಿನೇಶ್ ಅವರು ಅಭಿಮತ ವ್ಯಕ್ತಪಡಿಸಿದರು.

ಸಂಜೀವಿನಿ ರೆಡ್ ಕ್ರಾಸ್, ರಕ್ತ ನಿಧಿಯಲ್ಲಿ ವಿಶ್ವ ರೆಡ್ ಕ್ರಾಸ್ ದಿನಾಚರಣೆ ಅಂಗವಾಗಿ ಹೆನ್ರಿ ಡೊನಾಲ್ಡ್ ರವರ ಜನ್ಮದಿನದ ಪ್ರಯುಕ್ತ ಹಮ್ಮಿಕೊಳ್ಳಲಾದ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.

ಅವರು ಯುದ್ಧಕಾಲದಲ್ಲಿ ನಡೆದ ಘೋರ ದುರಂತವನ್ನು ನೋಡಿ ರಕ್ತದ ಕೊರತೆಯನ್ನು ನೀಗಿಸಲು ರೆಡ್ ಕ್ರಾಸ್ ಸಂಸ್ಥೆಯನ್ನ ಪ್ರಾರಂಭ ಮಾಡಿದರು ಇದರಿಂದ ಕೋಟ್ಯಾಂತರ ಜನರಿಗೆ ಅನುಕೂಲವಾಯಿತು. ಮನುಕುಲದ ಸೇವೆಯಲ್ಲಿ ಭಾರತೀಯ ಕ್ರಾಸ್ ಸಂಸ್ಥೆ ಸದಾ ಮುಂಚೂಣಿಯಲ್ಲಿದೆ.ಈ ನಿಟ್ಟಿನಲ್ಲಿ ಎಲ್ಲಾ ಯುವಕರು ರಕ್ತದಾನ ಮಾಡುವುದರ ಮುಖಾಂತರ ರಕ್ತದ ಕೊರತೆಯನ್ನು ನೀಗಿಸಬೇಕೆಂದು ಕರೆ ನೀಡಿದರು.

ಇದೇ ಸಂದರ್ಭದಲ್ಲಿ ಜೆಸಿಐ ಶಿವಮೊಗ್ಗ ಬರವಸೆ ಸಂಸ್ಥೆಯ ಅಧ್ಯಕ್ಷರಾದ ಲಕ್ಷ್ಮಿಕಾಂತ್ ರವರು ಮಾತನಾಡುತ್ತಾ ಸಾವಿರಾರು ವರ್ಷಗಳ ಮನುಕುಲದ ಸೇವೆಯಲ್ಲಿ ತೊಡಗಿಕೊಂಡಿರುವ ರೆಡ್ ಕ್ರಾಸ್ ಸಂಸ್ಥೆ ಇಂದಿಗೂ ಸದಾ ಸೇವೆ ಸಲ್ಲಿಸುತ್ತಿದೆ ಈ ನಿಟ್ಟಿನಲ್ಲಿ ಇವತ್ತು ವಿಶ್ವ ರೆಡ್ ಕ್ರಾಸ್ ಸಂಸ್ಥೆಯ ದಿನಾಚರಣೆ ಅಂಗವಾಗಿ ನಮ್ಮ ಎಲ್ಲಾ ಸದಸ್ಯರು ಸಾರ್ವಜನಿಕರು ರಕ್ತದಾನ ಮಾಡಿ ಸಮಾಜದಲ್ಲಿ ಪವಿತ್ರ ದಾನಿಗಳಾದರು.

World Red Cross Day 112 ಬಾರಿ ರಕ್ತದಾನ ಮಾಡಿದ ಧರಣೇಂದ್ರ ದಿನಕರ್ ಅವರು ಮಾತನಾಡುತ್ತಾ. ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಮನುಕುಲಕ್ಕೆ ವಿಶೇಷವಾದ ಸೇವೆಯನ್ನ ಸಲ್ಲಿಸುತ್ತಾ ಬಂದಿದೆ ಸುನಾಮಿ ಹಾಗೂ ಕರೋನಾದಲ್ಲಿ ಮಾಡಿದ ಸೇವೆ ಅವಿಸ್ಮರಣೀಯ ಇಂದು ಸಾಕಷ್ಟು ರಕ್ತದ ಕೊರತೆ ಇದೆ ಅದನ್ನು ನೀಗಿಸಲು ರಕ್ತದಾನ ಒಂದೇ ದಾರಿ ಆದರಿಂದ ಎಲ್ಲರೂ ರಕ್ತದಾನ ಮಾಡಿ ಸಮಾಜದಲ್ಲಿ ನಿಜವಾದ ಹೀರೋಗಳ ಆಗಬೇಕೆಂದು ಮನವಿ ಮಾಡಿದರು.

ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಸಹಕಾರದ ಶ್ರೀ ವಿಜಯಕುಮಾರ್ ಅವರು ಮಾತನಾಡುತ್ತಾ. ನಾನು 47 ಬಾರಿ ರಕ್ತದಾನ ಮಾಡಿದ್ದೇನೆ ರಕ್ತದಾನ ಮಾಡುವುದರಿಂದ ಯಾವುದೇ ತರಹದ ದೇಹಕ್ಕೆ ಆರೋಗ್ಯ ಹಾಳಾಗುವುದಿಲ್ಲ ಮೂಢನಂಬಿಕೆಯಿಂದ ಹೊರ ಬಂದು ಎಲ್ಲರೂ ರಕ್ತದಾನ ಮಾಡಿ ರಥದಾನ ಮಾಡುವುದರಿಂದ ಹೃದಯಘಾತ ಕಡಿಮೆಯಾಗುತ್ತದೆ ಸದಾ ನವನವಿಕೆ ಹಾಗೂ ನಮಗೆ ಗೊತ್ತಿಲ್ಲದ ಕಾಯಿಲೆಗಳ ಬಗ್ಗೆ ಮಾಹಿತಿ ಈ ರಕ್ತದಾನದಿಂದ ಸಿಗುತ್ತದೆ ಆದ್ದರಿಂದ ಪ್ರತಿಯೊಬ್ಬರೂ ವೈದ್ಯರ ಸಲಹೆ ಮೇರೆಗೆ ರಕ್ತದಾನ ಮಾಡಿ. ಎಂದು ಕರೆ ನೀಡಿದರು.

ರೆಡ್ ಕ್ರಾಸ್ ಸಂಸ್ಥೆಯ ನಿರ್ದೇಶಕ ಮಂಜು ಸಿ ಅಪ್ಪಾಜಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಸಾರ್ವಜನಿಕರು ಹಾಗೂ ಜೆಸಿಐ ಭರವಸೆಯ ಸಂಸ್ಥೆಯ ಸದಸ್ಯರು ರಕ್ತದಾನ ಮಾಡಿ ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ರೆಡ್ ಕ್ರಾಸ್ ಸಂಸ್ಥೆಯ ಪದಾಧಿಕಾರಿಗಳು ಜೆಸಿಐ ಸಂಸ್ಥೆಯ ಪದಾಧಿಕಾರಿಗಳು ಸ್ಪಂದನ ಹೆಲ್ತ್ ಫೌಂಡೇಶನ್ ಪದಾಧಿಕಾರಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Mohare Hanumantharaya Award ಪ್ರಶಸ್ತಿ ಪುರಸ್ಕೃತ ಪತ್ರಕರ್ತ, ‘ಕ್ರಾಂತಿ ದೀಪ ‘ಮಂಜುನಾಥ್ ಅವರಿಗೆ ಸನ್ಮಾನ

Mohare Hanumantharaya Award ಪತ್ರಿಕೋದ್ಯಮದ ಪ್ರತಿಷ್ಠಿತ ಪ್ರಶಸ್ತಿಗಳಲ್ಲಿ ಒಂದಾದ ಮೊಹರೆ ಹಣಮಂತರಾಯ...

MESCOM ನವೆಂಬರ್ 23 .ಹೊಳಲೂರು ಸುತ್ತಮುತ್ತ ವಿದ್ಯುತ್ ಸರಬರಾಜು ವ್ಯತ್ಯಯ

MESCOM ಹೊಳಲೂರು ಗ್ರಾಮದ 66/11 ಕೆವಿ ವಿದ್ಯುತ್ ವಿತರಣಾ ಕೇಂದ್ರದಿಂದ ಸರಬರಾಜಾಗುವ...

Rotary Club Shimoga ಪ್ರೌಢಾವಸ್ಥೆಯು ದೇಹದಲ್ಲಿ ಅನೇಕ ಬದಲಾವಣೆ ತರುತ್ತದೆ.ಅದನ್ನ ಗಮನಿಸಬೇಕು- ಡಾ.ಮೋಕ್ಷಾ

Rotary Club Shimoga ರೋಟರಿ ಸಂಸ್ಥೆಯು ನಿಸ್ವಾರ್ಥವಾಗಿ ವಿಶ್ವದ ಎಲ್ಲ ಭಾಗಗಳಲ್ಲಿ...

M.B.Patil 2025 ಫೆಬ್ರವರಿ 11.ಜಾಗತಿಕ ಹೂಡಿಕೆದಾರರ ಸಮಾವೇಶ.ಪೂರ್ವಸಿದ್ಧತೆ- ಸಚಿವ ಎಂ.ಬಿ.ಪಾಟೀಲ್

M.B.Patil 2025ರ ಫೆಬ್ರವರಿ 11 ರಿಂದ 14ರ ವರೆಗೆ ಬೆಂಗಳೂರಿನಲ್ಲಿ ನಡೆಯಲಿರುವ...