Hartalu Halappa ರಿಪ್ಪನ್‌ಪೇಟೆಯಬಸವಾಪುರ ಗ್ರಾಮದಲ್ಲಿ ಕಾಡಾನೆ ದಾಳಿಯಿಂದ ಮೃತಪಟ್ಟ ರೈತ ತಿಮ್ಮಪ್ಪ ಮನೆಗೆ ಮಾಜಿ ಸಚಿವ ಹರತಾಳು ಹಾಲಪ್ಪ ಭೇಟಿ ನೀಡಿ ತಿಮ್ಮಪ್ಪನವರ ಪತ್ನಿ ಹಾಗೂ ಪುತ್ರನಿಗೆ ಸಾಂತ್ವನ ಹೇಳಿದರು.
ರಿಪ್ಪನ್ ಪೇಟೆ ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ಯಲ್ಲಿ ಮಾತನಾಡಿದ ಅವರು ಆನೆ ದಾಳಿಗೆ ಒಳಗಾದ ರೈತ ತಿಮ್ಮಪ್ಪ ಕುಟುಂಬಕ್ಕೆ 24 ಗಂಟೆಯೊಳಗೆ 15 ಲಕ್ಷ ಪರಿಹಾರ ನೀಡಬೇಕು. ಇಲ್ಲದಿದ್ದರೆ ಸರ್ಕಾರ ಹಾಗೂ ಅರಣ್ಯ ಇಲಾಖೆಯ ಅಧಿಕಾರಿಗಳ ವಿರುದ್ಧ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದರು.
ಅರಣ್ಯ ಇಲಾಖೆಯ ಅಧಿಕಾರಿಗಳು ಇಲ್ಲ ಸಲ್ಲದ ಕಥೆ ಹೇಳಿದರೇ ಸುಮ್ಮನಿರಲು ಸಾಧ್ಯವಿಲ್ಲ, ಶನಿವಾರ ಸಂಜೆಯೊಳಗೆ ಸೂಕ್ತ ಪರಿಹಾರ ಘೋಷಿಸಬೇಕು ಇಲ್ಲದಿದ್ದರೇ ಹೋರಾಟ ಅನಿವಾರ್ಯಗುತ್ತದೆ, ಅರಣ್ಯ ಇಲಾಖೆಯ ವಿರುದ್ದ ನಮಗೆ ಹೋರಾಟ ಹೊಸದೇನಲ್ಲ ಹಿಂದೆ ಇಲಾಖೆಯ ದಬ್ಬಾಳಿಕೆಗೆ ಮಸರೂರು ಗ್ರಾಮದಲ್ಲಿ ಮೃತಪಟ್ಟ ರೈತನಿಗೆ ಪರಿಹಾರವನ್ನು ಹೋರಾಟದ ಮೂಲಕವೇ ಪಡೆದುಕೊಳ್ಳಲಾಯಿತು ಹಾಗೇಯೆ ರೈತ ತಿಮ್ಮಪ್ಪನ ಕುಟುಂಬಕ್ಕೂ ನ್ಯಾಯ ಒದಗಿಸುವ ಕೆಲಸ ಮಾಡುತ್ತೇವೆ ಎಂದರು.
Hartalu Halappa ಕೆಲವು ದಿನಗಳ ಹಿಂದೆ ಕರ್ನಾಟಕದ ಆನೆ ಕೇರಳದಲ್ಲಿ ರೈತನೊಬ್ಬನನ್ನು ಸಾಯಿಸಿದ್ದಕ್ಕೆ ಕೂಡಲೇ ಪರಿಹಾರ ಕೊಟ್ಟಿದ್ದರು ಅದೇ ಪ್ರಕಾರ ಬಸವಾಪುರದ ರೈತನ ಕುಟುಂಬಕ್ಕೂ ನಾಳೆ ಸಂಜೆಯೊಳಗೆ 15 ಲಕ್ಷ ಪರಿಹಾರ ನೀಡಬೇಕು,ರೈತ ತಿಮ್ಮಪ್ಪ ತನ್ನ ತೋಟದ ಪಕ್ಕದಲ್ಲಿನ ಕಾಡಿಗೆ ದರಗಲು ತರಲು ಹೋಗಿದ್ದಾನೆಯೇ ಹೊರತು ಕೊಡಲಿ ಹಿಡಿದು ಮರ ಕಡಿಯಲು ಹೋಗಿರಲಿಲ್ಲ ಅರಣ್ಯ ಇಲಾಖೆಯವರು ಏನಾದರೂ ಕಥೆ ಕಟ್ಟಿದರೆ ಸಹಿಸಲು ಸಾಧ್ಯವಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಸಂಧರ್ಭದಲ್ಲಿ ತಾಪಂ ಮಾಜಿ ಅಧ್ಯಕ್ಷ ವೀರೇಶ್ ಆಲುವಳ್ಳಿ , ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಸತೀಶ್ , ಮುಖಂಡರುಗಳಾದ ಎಂ ಬಿ ಮಂಜುನಾಥ್ , ಆರ್ ಟಿ ಗೋಪಾಲ್ , ಸುಂದರೇಶ್ , ಸುಧೀಂದ್ರ ಪೂಜಾರಿ ,ನಾಗಾರ್ಜುನ ಸ್ವಾಮಿ, ತಾಲೂಕ್ ಜೆಡಿಎಸ್ ಅಧ್ಯಕ್ಷ ಎನ್ ವರ್ತೇಶ್ ಹಾಗೂ ಇನ್ನಿತರರಿದ್ದರು.