Lok Sabha Election ಕಳೆದ 10 ವರ್ಷಗಳಲ್ಲಿ ಈ ದೇಶದ ರೈತರ ಆದಾಯ ದುಪ್ಪಟ್ಟುಗೊಳಿಸುತ್ತೇವೆ ಎಂಬ ಭರವಸೆ ನೀಡಿ ಅಧಿಕಾರಕ್ಕೆ ಬಂದ ಬಿಜೆಪಿಯ ರೈತ ವಿರೋಧಿ ನೀತಿಯಿಂದಾಗಿ ಇಂದು ರೈತರ ಸಾಲ ದುಪ್ಪಟ್ಟಾಗಿದೆ ಎಂದು ಭದ್ರಾವತಿ ವಿಧಾನಸಭಾ ಕ್ಷೇತ್ರದ ಲೋಕಸಭಾ ಚುನಾವಣಾ ಉಸ್ತುವಾರಿ ಎಂ.ರಮೇಶ್ ಶೆಟ್ಟಿ ಇವರು ಅಭಿಪ್ರಾಯಪಟ್ಟಿದ್ದಾರೆ.
ಅವರು ಶಿವಮೊಗ್ಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಗೀತಾ ಶಿವರಾಜ್ ಕುಮಾರ್ ಪರ ಭದ್ರಾವತಿ ತಾಲ್ಲೂಕ್ ಕೂಡ್ಲಿಗೆರೆ, ಅರಳೀಹಳ್ಳಿ, ವೀರಾಪುರ ಗ್ರಾಮಗಳಲ್ಲಿ ಏರ್ಪಡಿಸಿದ್ದ ಸಾರ್ವಜನಿಕ ಸಭೆಯಲ್ಲಿ ಮಾತನಾಡುತ್ತಿದ್ದರು.
ನಮ್ಮ ದೇಶದ ಸನ್ಮಾನ್ಯ ಪ್ರಧಾನಮಂತ್ರಿಗಳಾದ ನರೇಂದ್ರಮೋದಿಯವರು 2022ಕ್ಕೆ ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳಾಗಲಿದೆ. ದೇಶ ಸುವರ್ಣಮಹೋತ್ಸವ ಆಚರಿಸುವ ಸಂದರ್ಭದಲ್ಲಿ ನಮ್ಮ ದೇಶದ ರೈತರ ಆದಾಯ ದುಪ್ಪಟ್ಟುಗೊಳಿಸಲಾಗುವುದು ಎಂಬ ಭರವಸೆ ನೀಡಿ 2019ರಲ್ಲಿ ಅಧಿಕಾರಕ್ಕೆ ಬಂದರು. ಆದರೆ ರೈತರಿಗೆ ಒಂದು ಕಡೆ ನೀಡಬೇಕಾದ ಸಬ್ಸಿಡಿಯನ್ನು ಕಡಿಮೆ ಮಾಡಿದರು.
Lok Sabha Election ಇನ್ನೊಂದೆಡೆ 150ರೂಪಾಯಿ ಇದ್ದ ಡಿಎಪಿ ಬೆಲೆ 300 ಕ್ಕೆ ಏರಿಸಿದರು. ಬಿಜೆಪಿ ಸರ್ಕಾರದ ಇಂತಹ ದ್ವಂಧ್ವನೀತಿಯಿಂದಾಗಿ ರೈತರ ಆದಾಯ ದುಪ್ಟಟ್ಟಾಗುವ ಬದಲು ಸಾಲ ದುಪ್ಪಟಾಗಿದೆ ಎಂದರು.
ಇಂದು ರಾಜ್ಯ ಸರ್ಕಾರ ನುಡಿದಂತೆ ನಡೆದಿದೆ. ಸರ್ಕಾರದ ಗ್ಯಾರಂಟಿಗಳು ಸುಮಾರು ನಾಲ್ಕೂವರೆ ಕೋಟಿ ಜನರ ಮನೆಗಳನ್ನು ತಲುಪಿದೆ. ರಾಜ್ಯದಲ್ಲಿರುವ ಬಡವರು, ರೈತರು, ಕೂಲಿ ಕಾರ್ಮಿಕರು, ಯುವಕರು, ಮಹಿಳೆಯರು ರಾಜ್ಯದ ಗ್ಯಾರಂಟಿಯಿಂದಾಗಿ ನೆಮ್ಮದಿಯ ಬದುಕನ್ನು ಕಂಡುಕೊಂಡಿದ್ದಾರೆ. ಕೇಂದ್ರದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಅಧಿಕಾರಕ್ಕೆ ಬಂದರೆ ಇನ್ನಷ್ಟು ಗ್ಯಾರಂಟಿಗಳ ಭರವಸೆ ನೀಡಿದೆ. ಇವುಗಳು ಹಾಗೂ ಬಂಗಾರಪ್ಪಜೀಯವರು ಮಾಡಿರುವ ಜನಹಿತ ಕಾರ್ಯಗಳಿಂದಾಗಿ ನಮ್ಮ ಅಭ್ಯರ್ಥಿ ಗೀತಾ ಶಿವರಾಜ್ ಕುಮಾರ್ ಗೆಲುವು ಶತಸಿದ್ಧವೆಂದು ಅಚಲವಾದ ಭರವಸೆ ವ್ಯಕ್ತಪಡಿಸಿದರು.
ಪ್ರಚಾರ ಸಭೆಯಲ್ಲಿ ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಷಡಾಕ್ಷರಿ, ನಗರಾಧ್ಯಕರಾದ ಎಸ್.ಕುಮಾರ್, ಗ್ಯಾರಂಟಿ ಅನುಷ್ಠಾನ ಯೋಜನಾ ಸಮಿತಿ ಅಧ್ಯಕ್ಷರಾದ ಮಣಿಶೇಖರ್, ಮಾಜಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾದ ಬಲ್ಕೀಶ್ ಬಾನು, ಕಾಂಗ್ರೆಸ್ ಮುಖಂಡರಾದ ತಳ್ಳಿಕಟ್ಟಿ ಲೋಕೇಶ್, ಹಾಲೇಶ್ ನಾಯಕ, ಜುಂಜಾನಾಯಕ್, ಯುವ ಮುಖಂಡರ ಮುರುಗೇಶ್ ಮುಂತಾದವರುಗಳು ಉಪಸ್ಥಿತರಿದ್ದರು.