Monday, May 4, 2026
Monday, May 4, 2026

SVEEP Shivamogga ರೇಡಿಯೊ ಶಿವಮೊಗ್ಗದಿಂದ ಮತದಾನ ಜಾಗೃತಿ ಕಾರ್ಯಕ್ರಮ

Date:

SVEEP Shivamogga ಶಿವಮೊಗ್ಗ ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ, ಜಿಲ್ಲಾ ಸ್ವೀಪ್ ಸಮಿತಿ, ರೇಡಿಯೋ ಶಿವಮೊಗ್ಗ, ಪರಿಸರ ಅಧ್ಯಯನ ಕೇಂದ್ರ, ಕೊಡಚಾದ್ರಿ ಇಂಟಿಗ್ರೇಟೆಡ್ ಡೆವೆಲೆಪ್ ಮೆಂಟ್ ಸೊಸೈಟಿ (ಕಿಡ್ಸ್) ಹಾಗೂ ರಾಷ್ಟ್ರೀಯ ಶಿಕ್ಷಣ ಸಮಿತಿ ಸಹಯೋಗದಲ್ಲಿ ಶಿವಮೊಗ್ಗದ ಜೆ ಎನ್ ಎನ್ ಸಿ ಇ ಕಾಲೇಜಿನ ಎಂಸಿಎ ವಿಭಾಗದಲ್ಲಿ ಮತದಾನ ಜಾಗೃತಿ ಹಾಗೂ ಪ್ರಥಮ ಬಾರಿಗೆ ಮತದಾನ ಮಾಡುತ್ತಿರುವವರಿಗೆ ಮತದಾನದ ಅರಿವು ಮೂಡಿಸುವ ಸರಣಿ ಕಾರ್ಯಕ್ರಮವನ್ನು ನಡೆಸಲಾಯಿತು

ಜಿಲ್ಲಾ ಸ್ವೀಪ್ ಸಮಿತಿಯ ರಾಜ್ಯ ಮಟ್ಟದ ತರಬೇತುದಾರ ನವೀದ್ ಅಹ್ಮದ್ ಪರ್ವೇಜ್ ಮತದಾನದ ಅರಿವು ನೀಡಿ, ಮತದಾನದ ಪ್ರತಿಜ್ಞೆ ಬೋಧಿಸಿದರು. ಇದರ ಜೊತೆಗೆ ಪಿಪಿಟಿ ಮುಖಾಂತರವಾಗಿ ಚುನಾವಣಾ ರಸಪ್ರಶ್ನೆ ನಡೆಸಿಕೊಟ್ಟರು.

ರಾಷ್ಟ್ರೀಯ ಶಿಕ್ಷಣ ಸಮಿತಿ ಕಾರ್ಯದರ್ಶಿ ನಾಗರಾಜ ರಾವ್, ಪ್ರಾಚಾರ್ಯ ವೈ. ವಿಜಯಕುಮಾರ್, ಸಹಾಯಕ ಪ್ರಾಧ್ಯಾಪಕ ಶ್ರೀನಿವಾಸಮೂರ್ತಿ, ಪರಿಸರ ಅಧ್ಯಯನ ಕೇಂದ್ರದ ಸಂಯೋಜಕ ದಿನೇಶ್ ಹೊಸನಗರ, ರೇಡಿಯೋ ಶಿವಮೊಗ್ಗದ ಕಾರ್ಯಕ್ರಮ ಸಂಯೋಜಕ ಕೆ.ವಿ. ಅಜೇಯ ಸಿಂಹ, ಅಭಿನಾಟ್ಯ ಇನ್ನಿತರರಿದ್ದರು.

SVEEP Shivamogga ಏಪ್ರಿಲ್ 30ರಂದು ಮತದಾನ ಜಾಗೃತಿ ಕಾರ್ಯಕ್ರಮವನ್ನು ಶಿವಮೊಗ್ಗ ಮಹಾನಗರಪಾಲಿಕೆಯ ಸಹಯೋಗದೊಂದಿಗೆ ಪುರಲೆಯ ಸುಬ್ಬಯ್ಯ ಬೋಧನಾ ಆಸ್ಪತ್ರೆಯಲ್ಲಿ ನಡೆಸಲಾಯಿತು. ವೈದ್ಯಕೀಯ ವಿದ್ಯಾರ್ಥಿಗಳಿಗೆ ಮತದಾನದ ಮಹತ್ವವನ್ನು ಪಾಲಿಕೆಯ ಅಧಿಕಾರಿಗಳಾದ ಅನುಪಮಾ ಹಾಗೂ ಸುಪ್ರಿಯಾ ತಿಳಿಸಿಕೊಟ್ಟರು. ಸುಬ್ಬಯ್ಯ ಬೋಧನಾ ಆಸ್ಪತ್ರೆಯ ಪ್ರಾಚಾರ್ಯ ಡಾ. ಸಿದ್ದಲಿಂಗಪ್ಪ ಸಿ.ಎಂ., ಆಸ್ಪತ್ರೆಯ ಸಾರ್ವಜನಿಕ ಸಂಪರ್ಕಾಧಿಕಾರಿ ನಿರಂಜನಮೂರ್ತಿ, ಅಭಿನಾಟ್ಯ ಇದ್ದರು.

ರೇಡಿಯೋ ಶಿವಮೊಗ್ಗದ ಕಾರ್ಯಕ್ರಮ ಸಂಯೋಜಕ ಕೆ.ವಿ. ಅಜೇಯ ಸಿಂಹ ಚುನಾವಣಾ ರಸಪ್ರಶ್ನೆ ನಡೆಸಿಕೊಟ್ಟರು. ರೇಡಿಯೋ ಶಿವಮೊಗ್ಗನಿಲಯ ಸಂಯೋಜಕ ಗುರುಪ್ರಸಾದ್ ಬಾಲಕೃಷ್ಣ ಕಾರ್ಯಕ್ರಮವನ್ನು ನಿರೂಪಣೆ ಮಾಡಿದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Rotary Shivamogga ವ್ಯಾಪಾರ ವೃದ್ಧಿಸಿಕೊಳ್ಳಲು ಡಿಜಿಟಲ್ ಮಾರ್ಕೆಟಿಂಗ್ ಸಹಕಾರಿ : ಜಿ.ಸುನೀಲ್‌ಕುಮಾರ್

Rotary Shivamogga ತಂತ್ರಜ್ಞಾನ ಮತ್ತು ವೈಜ್ಞಾನಿಕ ಯುಗದಲ್ಲಿ ವ್ಯಾಪಾರದಲ್ಲಿ ಯಶಸ್ಸು...

Shivamogga Police ಗಾಡಿಕೊಪ್ಪ ಸಂಚಾರ ನಿಯತ್ರಣ ಓಕೆ. ಆದರೆ ಮಿಕ್ಕ ಸಮಸ್ಯೆಗಳಿಗೆ ಪರಿಹಾರವಿಲ್ಲ ಯಾಕೆ?

Shivamogga Police ಗಾಡಿಕೊಪ್ಪ‌,ಶಿವಮೊಗ್ಗದ ಸೆಟಲೈಟ್ ಟೌನ್ ಎಂಬ ವ್ಯಾಪ್ತಿಗೆ ಬೆಳೆದುಬಿಟ್ಟಿದೆ. ಅಲ್ಕಿನ ವೃತ್ತಕ್ಕೆ...