Shivaganga Yoga Centre ಯೋಗ ಅಭ್ಯಾಸ ಮಾಡುವುದರಿಂದ ದೈಹಿಕ ಆರೋಗ್ಯದ ಜತೆಯೂ ಮಾನಸಿಕ ಆರೋಗ್ಯ ಸಧೃಢವಾಗುತ್ತದೆ. ಖಿನ್ನತೆಯಿಂದ ದೂರವಾಗಬಹುದು ಎಂದು ಯೋಗ ಶಿಕ್ಷಕಿ, ಲೇಖಕಿ ಗಾಯಿತ್ರಿದೇವಿ ಸಜ್ಜನ್ ಅಭಿಪ್ರಾಯಪಟ್ಟರು.
ಶಿವಮೊಗ್ಗ ನಗರದ ಶಿವಗಂಗಾ ಯೋಗಕೇಂದ್ರದ ರಾಘವ ಶಾಖೆಗೆ ಕೇಂದ್ರ ತಂಡ ಭೇಟಿ ನೀಡಿ ಯೋಗ ಶಿಬಿರಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ, ಯೋಗ ಕಲಿಕೆಯಿಂದ ಎಷ್ಟೋ ಕಾಯಿಲೆಗಳನ್ನು ಗುಣಪಡಿಸಿಕೊಳ್ಳಬಹುದಾಗಿದೆ. ಪ್ರತಿಯೊಬ್ಬರೂ ಯೋಗದ ಬಗ್ಗೆ ಆಸಕ್ತಿ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಶಿವಗಂಗಾ ಯೋಗಕೇಂದ್ರದ 30ಕ್ಕೂ ಹೆಚ್ಚು ಶಾಖೆಗಳಲ್ಲಿ ಉಚಿತವಾಗಿ ಯೋಗ, ಪ್ರಾಣಾಯಾಮ, ಧ್ಯಾನ ತರಗತಿಗಳನ್ನು ಯೋಗಾಚಾರ್ಯ ಸಿ.ವಿ.ರುದ್ರಾರಾಧ್ಯ ಮಾರ್ಗದರ್ಶನದಲ್ಲಿ ನಡೆಸುತ್ತಿರುವುದು ರಾಜ್ಯದಲ್ಲಿ ಮಾದರಿಯಾಗಿದೆ. ಸಾವಿರಕ್ಕೂ ಹೆಚ್ಚು ಶಿಬಿರಾರ್ಥಿಗಳು ಯೋಗಾಭ್ಯಾಸ ಮಾಡುತ್ತಿದ್ದಾರೆ ಎಂದರು.
ಯೋಗ ಶಿಕ್ಷಕ ಪದ್ಮನಾಭ ಅಡಿಗ ಮಾತನಾಡಿ, ಯೋಗ, ಧ್ಯಾನ, ಪ್ರಾಣಾಯಾಮ ಅಭ್ಯಾಸವು ದೇಹ ಮನಸ್ಸನ್ನು ಒಂದು ಮಾಡುವುದರ ಜತೆಗೆ ಸಕರಾತ್ಮಕ ಭಾವನೆಗಳನ್ನು ಮೂಡಿಸುತ್ತವೆ. ಆದ್ದರಿಂದ ಎಲ್ಲರೂ ತಪ್ಪದೇ ಯೋಗಾಭ್ಯಾಸ ಮಾಡಬೇಕು ಎಂದು ಹೇಳಿದರು.
Shivaganga Yoga Centre ಇದೇ ಸಂದರ್ಭದಲ್ಲಿ ರಾಘವ ಶಾಖೆಯ ಜಿ.ಎಸ್.ಓಂಕಾರ್ ಮಾತನಾಡಿ, ಪ್ರಪಂಚದ ಎಲ್ಲ ರಾಷ್ಟ್ರಗಳು ಯೋಗವನ್ನು ಒಪ್ಪಿಕೊಂಡಿವೆ. ಯೋಗ ನಮಗೆ ಸಂಸ್ಕಾರ, ಮಾನಸಿಕ ನೆಮ್ಮದಿ ಒದಗಿಸುತ್ತದೆ ಎಂದು ತಿಳಿಸಿದರು.
ಡಾ. ಪದ್ಮನಾಭ ಅಡಿಗ, ವೀಣಾ ಶಿವಕುಮಾರ್, ಶೀಲಾ ಸುರೇಶ್, ಅನುರಾಧ ಪ್ರಸಾದ್, ಶಿವಗಂಗಾ ಯೋಗ ಕೇಂದ್ರದ ಕಾರ್ಯದರ್ಶಿ ಎಸ್.ಎಸ್.ಜ್ಯೋತಿಪ್ರಕಾಶ್, ಯೋಗ ಶಿಕ್ಷಕರಾದ ಹರೀಶ್, ವಿಜಯ ಕೃಷ್ಣ, ನರಸೋಜಿ ರಾವ್, ಜಿ.ವಿಜಯಕುಮಾರ್, ಶೋಭಾ, ಮಹೇಶ್, ಆನಂದ್, ಶ್ರೀನಿವಾಸ್, ಗಾಯಿತ್ರಿ ರಮೇಶ್, ದೀಪಕ್, ಸುಬ್ರಮಣಿ, ಶಶಿಧರ್, ವಿಕ್ರ‍್ರಂ, ಅರುಣ್ ಹಾಗೂ ಯೋಗ ಬಂಧುಗಳು ಉಪಸ್ಥಿತರಿದ್ದರು.