Prajwal Revanna ಪೆನ್ ಡ್ರೈವ್ ವಿಚಾರದಲ್ಲಿ ಆರೋಪಿತ ಪ್ರಜ್ವಲ್ ರೇವಣ್ಣರ ಹೆಸರು ಮುನ್ನೆಲೆಗೆ ಬಂದಿದೆ. ಅಲ್ಲಿವರೆಗೂ ಪ್ರಭಾವಿ ವ್ಯಕ್ತಿ ಎನ್ನಲಾಗ್ಗಿದ್ದ ಪ್ರಕರಣದಲ್ಲಿ ಸಿದ್ದರಾಮಯ್ಯ ಪ್ರಜ್ವಲ್ ರೇವಣ್ಣರ ಅಶ್ಲೀಲ ವಿಡಿಯೋ ಆರೋಪಕ್ಕೆ ಕುರಿತಂತೆ ಎಸ್‌ಐಟಿ ರಚನೆ ಮಾಡುವುದಾಗಿ ಟ್ವೀಟ್ ಮಾಡಿದ್ದರು.
ಅದರ ಬೆನ್ನಲ್ಲೆ ಎಲ್ಲಾ ರಾಜ್ಯ ಹಾಗೂ ರಾಷ್ಟ್ರೀಯ ಮಾಧ್ಯಮಗಳು ಪ್ರಕರಣದಲ್ಲಿ ನೇರಾನೇರ ಪ್ರಜ್ವಲ್ ರೇವಣ್ಣರ ಹೆಸರನ್ನ ಪ್ರಸ್ತಾಪಿಸಿ ವರದಿ ಮಾಡಲಾರಂಭಿಸಿದ್ದಾರೆ.
ಇನ್ನೂ ಹಾಸನದ ಹಾಲಿ ಸಂಸದ ಪ್ರಜ್ವಲ್ ರೇವಣ್ಣ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿರುವ ಆರೋಪ ಕುರಿತು ತನಿಖೆ ನಡೆಸಲು ವಿಶೇಷ ತನಿಖಾ ತಂಡ (ಎಸ್‌ಐಟಿ) ರಚನೆಯಾಗಿದೆ. ಭಾನುವಾರ ಎಡಿಜಿಪಿ ಬಿ ಕೆ ಸಿಂಗ್ ನೇತೃತ್ವದ ವಿಶೇಷ ತನಿಖಾ ತಂಡವನ್ನು (SIT) ರಚಿಸಿದೆ.
3 ಎಸ್ ಪಿ, 4 ಡಿವೈಎಸ್ ಪಿ ಗಳನ್ನೊಳಗೊಂಡ ಎಸ್ಐಟಿ ತಂಡದಲ್ಲಿ ಓರ್ವ ಮಹಿಳಾ ಎಸ್ ಪಿ ಸಹ ಇರಲಿದ್ದಾರೆ. ಎಡಿಜಿಪಿ ಬಿ.ಕೆ ಸಿಂಗ್ ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಎಸ್ಐಟಿ ಮುಖ್ಯಸ್ಥರಾಗಿದ್ದರು.
ಇನ್ನೂ ಪ್ರಜ್ವಲ್ ರೇವಣ್ಣ ಮತದಾನ ಮುಗಿಸಿ ಜರ್ಮನಿಗೆ ತೆರಳಿದ್ದಾರೆ.
Prajwal Revanna ಪ್ರಕರಣದಲ್ಲಿ ಬಂಧನವಾಗುವ ಭೀತಿಯಿಂದಲೇ ಅವರು ವಿದೇಶಕ್ಕೆ ಎಸ್ಕೇಪ್ ಆಗಿದ್ದಾರೆ ಎನ್ನಲಾಗಿದೆ. ಶನಿವಾರ ಮುಂಜಾನೆ ಮೂರು ಗಂಟೆಗೆ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಪ್ರಜ್ವಲ್ ರೇವಣ್ಣ ವಿದೇಶಕ್ಕೆ ತೆರಳಿದ್ದಾರೆ.
LH 755 ಲುಫ್ತಾನ್ಸಾ ಏರ್‌ಲೈನ್ಸ್ ಮೂಲಕ ಕೆಐಎಎಲ್‌ನಿಂದ ಜರ್ಮನಿಯ ಫ್ರಾಂಕ್ ಫರ್ಟ್‌ಗೆ ಪ್ರಜ್ವಲ್ ರೇವಣ್ಣ ಅವರು ಹೋಗಿದ್ದಾರೆ ಎಂದು ರಾಜ್ಯದ ಮಾಧ್ಯಮಗಳು ವರದಿ ಮಾಡಿವೆ.
ಇಲ್ಲಿವರೆಗೂ ತುಟಿಬಿಚ್ಚದ ರಾಜಕೀಯ ನಾಯಕರು ಇದೀಗ ಟೀಕಾಪ್ರಹಾರವನ್ನು ಆರಂಭಿಸಿದ್ದು ತಮ್ಮದೇ ಆದ ರೀತಿಯಲ್ಲಿ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಮುಖ್ಯವಾಗಿ ಸರ್ಕಾರದ ಅಂಗವಾದ ಕಾಂಗ್ರೆಸ್ ಮುಖಂಡರು ಪ್ರಜ್ವಲ್ ರೇವಣ್ಣರ ವಿಚಾರದಲ್ಲಿ ಆಕ್ರೋಶ ಹೊರಹಾಕಿದ್ದಾರೆ.
ಈ ಸಂಬಂಧ ಮಾತನಾಡದಿ ಕೃಷ್ಣಬೈರೇಗೌಡ, ಮಗ ಇಷ್ಟೆಲ್ಲ ಮಾಡಿದರೂ ಹೆಚ್.ಡಿ. ರೇವಣ್ಣಗೆ ಗೊತ್ತಿರಲಿಲ್ಲವಾ. ರೇವಣ್ಣ ಅವರೇ, ಭವಾನಿ ರೇವಣ್ಣ ಅವರೇ ನಿಮ್ಮ ಮಗ ಇಂತದ್ದೆಲ್ಲ ಮಾಡುತ್ತಿದ್ದರೂ ನಿಮಗೆ ಗೊತ್ತಿದ್ದೂ ಸುಮ್ಮನಿದ್ದಿರೇ? ಸಂಸದನಾಗಿ ಇಂತಹ ಕೃತ್ಯವೆಸಗಿರುವುದು ದೇಶವೇ ತಲೆತಗ್ಗಿಸುವ ಕೆಲಸವಲ್ಲವೇ ಎಂದು ಪ್ರಶ್ನಿಸಿದ್ದಾರೆ.
ಅಲ್ಲದೆ ಎಲ್ಲದಕ್ಕೂ ಪ್ರಜ್ವಲ್ ಪೋಷಕರು ಉತ್ತರ ಕೊಡಬೇಕು ಎಂದು ಆಗ್ರಹಿಸಿದ್ದಾರೆ.
ಇದೇ ವಿಚಾರಕ್ಕೆ ಪ್ರತಿಕ್ರಿಯಿಸಿರುವ ಗೃಹಸಚಿವ ಡಾ.ಜಿ.ಪರಮೇಶ್ವರ್ ತನಿಖೆಯಲ್ಲಿ ಹಸ್ತಕ್ಷೇಪ ಮಾಡಲ್ಲ, ಪ್ರಜ್ವಲ್ ರೇವಣ್ಣರಿಗೆ ನೋಟಿಸ್ ಕೊಟ್ಟು ವಿಚಾರಣೆ ನಡೆಸಲಾಗುತ್ತದೆ ಎಂದಿದ್ದಾರೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗಿದೆ ಎಂದಿದ್ದಾರೆ.