Dr.Ivan D’Souza ಪ್ರಧಾನಿ ಮೋದಿ ಅವರ ಭಾಷಣವನ್ನು ಬಹಳ ವರ್ಷದಿಂದ ಗಮನಿಸುತ್ತಿದ್ದೇನೆ. ಈ ಬಾರಿ ಅವರು ಪ್ರಧಾನಿ ವಿಚಲಿತರಾದಂತೆ ಕಾಣುತ್ತಿದ್ದಾರೆ ಎಂದು ಕೆಪಿಸಿಸಿಯ ಮುಖ್ಯ ವಕ್ತಾರ ಐವಾನ್ ಡಿಸೋಜ ಅಭಿಪ್ರಾಯಪಟ್ಟರು.
ಕಾಂಗ್ರೆಸ್ ಕಚೇರಿಯಲ್ಲಿ
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಧಾನಿ ಅವರ ಭಾಷಣದಲ್ಲಿ ಬದಲಾವಣೆ ಕಂಡು ಬರುತ್ತಿದೆ. ಸುಳ್ಳುಗಳನ್ನು ಹೇಳುತ್ತಿದ್ದಾರೆ .
ಕಾಂಗ್ರೆಸ್ ಬಹುಸಂಖ್ಯಾತರ ಮೀಸಲಾತಿ ಕಸಿದುಕೊಂಡು ಅಲ್ಪಸಂಖ್ಯಾತರಿಗೆ ಕೊಡುತ್ತಿದ್ದಾರೆ ಎಂದು ಪ್ರಧಾನಿ ಹೇಳುತ್ತಿದ್ದಾರೆ. ದೇಶದ ಆಸ್ತಿಯನ್ನೂ ಸಹ ಕಾಂಗ್ರೆಸ್ ಅಲ್ಪಸಂಖ್ಯಾತರಿಗೆ ನೀಡುತ್ತಿದ್ದಾರೆ ಎನ್ನುತ್ತಿದ್ದಾರೆ. ಪ್ರಣಾಳಿಕೆಯಲ್ಲಿ ಇಲ್ಲದಿದ್ದರೂ ಹೀಗೆ ಹೇಳಬಹುದೇ ಎಂದು ಡಿಸೋಜಾ ಪ್ರಶ್ನಿಸಿದರು.
Dr.Ivan D’Souza ಚುನಾವಣೆಯಲ್ಲಿ ಸೋಲಿನ ಭಯದಿಂದ ಪ್ರಧಾನಿ ಮಾತಾಡಿದ್ದಾರೆ. ರಾಜ್ಯದಲ್ಲಿ ಮುಸ್ಲೀಂರಿಗೆ 4% ಮೀಸಲಾತಿ ನೀಡಲಾಗಿತ್ತು. ಬಿಜೆಪಿ ರಾಜ್ಯದಲ್ಲಿತ್ತು. ಬದಲಾಯಿಸಲಾಗಿಲ್ಲ. ಬೊಮ್ಮಾಯೊ ಸರ್ಕಾರ ಕೊನೆ ಹಂತದಲ್ಲಿ ಮುಸ್ಲೀಂ ಸಮುದಾಯದ 4% ಮೀಸಲಾತಿ ತೆಗೆದು ಬೇರೆ ಸಮುದಾಯಕ್ಕೆ ನೀಡಿತು ಎಂದರು.
ನ್ಯಾಯಾಲಯವು ಈ ಮೀಸಲಾತಿಯನ್ನು ಪುರಸ್ಕರಿಸಿಲ್ಲ. ಇಷ್ಟಾದರೂ ಪ್ರಧಾನಿಯವರು ಕಾಂಗ್ರೆಸ್ ಮುಸ್ಲೀಂರಿಗೆ ಈ ದೇಶದ ಆಸ್ತಿ ನೀಡಲು ಮುಂದಾಗಿರುವುದು ಎಷ್ಟು ಸರಿ ಎಂದು ದೂರಿದರು. ಈ ದೇಶದಲ್ಲಿ ಬದಲಾವಣೆಯ ಗಾಳಿ ಬೀಸುತ್ತಿದೆ. ರಾಜ್ಯದಲ್ಲಿ ನಡೆದ 14 ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷ ಬಿಜೆಪಿಗಿಂತ ಉತ್ತಮ ಸ್ಥಿತಿಯಲ್ಲಿದೆ ಎಂದರು.
ಗ್ಯಾರೆಂಟಿಗಳು ರಾಜ್ಯದಲ್ಲಿ ಕಾಂಗ್ರೆಸ್ ಗೆ ಹೆಚ್ಚಿನ ಬಲ ತಂದು ಕೊಡಲಿದೆ. ಶಿವಮೊಗ್ಗದಲ್ಲಿ ಮತದಾರರನ್ನು ಭೇಟಿಯಾಗಿದ್ದೇನೆ. ಗೀತಾ ಶಿವರಾಜ್ ಕುಮಾರ್ ಪರ ಹೆಚ್ಚಿನ ಒಲವಿದೆ. ಗೆಲ್ಲಲಿದ್ದಾರೆ. 20 ಸ್ಥಾನವನ್ನು ಪಕ್ಷ ಗೆದ್ದು ಬೀಗಲಿದೆ. ದೇಶದಲ್ಲಿ ಮೋದಿ ಅಲೆ ಇಲ್ಲ ಎಂದರು.
ಪ್ರಜ್ವಲ್ ರೇವಣ್ಣರದ್ದು ಎನ್ನಲಾದ ವಿಡಿಯೋಗಳು ವೈರಲ್ ಕುರಿತು SIT ಗೆ ನೀಡಲಾಗಿದೆ. ಅವರು ವಿದೇಶಕ್ಕೆ ಹೋಗಿರುವ ಮಾಹಿತಿ ಇದೆ ಅಪರಾಧ ಸಾಬೀತಾದರೆ ಅವರನ್ನ ಬಂಧಿಸುವ ಕ್ರಮ ಕೈಗೊಳ್ಳಲು ಕಾನೂನಿಗೆ ಅಧಿಕಾರವಿದೆ ಎಂದರು.