Friday, November 22, 2024
Friday, November 22, 2024

Hosanagara News ಹೊಸನಗರ ತಾ.ಮಾಗಲು ಗ್ರಾಮಸ್ಥರಿಂದ ಚುನಾವಣೆ ಮತದಾನ ಬಹಿಷ್ಕಾರ?

Date:

Hosanagara News ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ನಗರ ಹೋಬಳಿಯಲ್ಲಿ ಬರುವ ಮಾಗಲು ಗ್ರಾಮದಲ್ಲಿ ಚುನಾವಣೆ ಬಹಿಷ್ಕಾರದ ಕೂಗು ಕೇಳಿ ಬಂದಿದೆ. ಇನ್ನೇನು ಚುನಾವಣೆಗೆ 9 ದಿನ ಬಾಕಿ ಇರುವಾಗಲೇ ಚುನಾವಣೆ ಬಹಿಷ್ಕಾರದ ಫ್ಲೆಕ್ಸ್ ಕಂಡು ಬಂದಿದೆ.

ವರಾಹಿ ಹಿನ್ನೀರು ನ ಈ ಗ್ರಾಮದಲ್ಲಿ ಸುಮಾರು 20 ಕುಟುಂಬಗಳು ವಾಸಿಸುತ್ತಿವೆ, ಆದರೆ ಈ ಕುಟುಂಬಗಳ ಪರಿಸ್ಥಿತಿ ತೀರಾ ಕಷ್ಟಕರವಾಗಿದೆ. ಮೂಲಭೂತ ಸೌಕರ್ಯವಿಲ್ಲದೆ ಈಗಗಾಗಲೆ 4 ಕುಟುಂಬಗಳು ವಲಸೆ ಹೋಗಿವೆ.ಸುಮಾರು 50 ವರ್ಷದಿಂದ ರಸ್ತೆಗಾಗಿ ಹೋರಾಟ ಮಾಡಿದರು ಯಾವುದೇ ಪ್ರಯೋಜನವಾಗಿಲ್ಲ ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಮಳೆಗಾಲದ ಸನ್ನಿವೇಶದಲ್ಲಿ ಯಾವುದೇ ವಾಹನಗಳು ಬರಲಾಗದ ಪರಿಸ್ಥಿತಿ ಊರಿನದ್ದು,ಕಳೆದ 50 ವರ್ಷಗಳಲ್ಲಿ ಆಶ್ವಾಸನೆ ಗಳಿಂದ ಜನರಿಂದ ಮತವನ್ನು ಕೇಳಿರುವುದು ಬಿಟ್ಟರೆ ,ಹೇಳಿ ಕೊಳ್ಳುವುದಕ್ಕೂ ಯಾವುದೇ ಅಭಿವೃದ್ಧಿ ಆಗಿಲ್ಲ. ವಯಸ್ಕರು ಅಸ್ಪತೆ ಗೆ ಹೋಗಬೇಕಾದರೆ ಅಥವಾ ಮಕ್ಕಳು ಶಾಲೆಗಳಿಗೆ ಹೋಗವರಿಗೆ ತುಂಬಾ ಕಷ್ಟದ ಪರಿಸ್ಥಿತಿ ಈ ಊರಿನಲ್ಲಿದೆ ಎಂದು ದೂರಿದರು.

ಈ ಸಮಸ್ಯೆಗಳನ್ನು ಪ್ರಧಾಮಂತ್ರಿವರೆಗೂ ಪತ್ರ ಬರೆದು ಅವರ ಗಮನಕ್ಕೆ ತಂದಿದ್ದರು ಅದನ್ನು ಕಾರ್ಯರೂಪಕ್ಕೆ ತರುವಲ್ಲಿ ಸ್ಥಳೀಯ ಎಂಜಿನಿಯರ್ ( ಕಾರ್ಯಪಾಲಕ ಎಂಜಿನಿಯರ್ ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗ ಸಾಗರ) ಇವರುಗಳು ನಕಲಿ ಎಸ್ತಿಮೇಷನ್ ಸೃಷ್ಟಿಸಿ ಅನಾವಶ್ಯಕವಾಗಿ 2 ಕೋಟಿ ಎಸ್ಟೀಮೇಷನ್ ತೋರಿಸಿರುತ್ತಿದ್ದಾರೆ.‌

ಇದೆ ಎಂಜಿನಿಯರ್ ಸ್ಥಳ ಪರಿಶೀಲನೆಗೆ ಬಾರದೆ ಗ್ರಾಮಸ್ಥರ ಗಮನಕ್ಕೂ ತರದೆ ಮೋದಿ ಅವರ ಪತ್ರಕ್ಕೆ FAKE ಎಶ್ಟಿಮೇಷನ್ ನೀಡಿರುತ್ತಾರೆ… ಆದ್ದರಿಂದ ಈ ಬಾರಿ ಆಶ್ವಾಸನೆ ಗಳಿಗೆ ಬೇಸತ್ತು ಮಾಗಲು ಗ್ರಾಮಸ್ಥರು ಚುನಾವಣಾ ಬಹಿಷ್ಕಾರಕ್ಕೆ ಮುಂದಾಗಿದ್ದಾರೆ.

Hosanagara News ರಾಜಕೀಯ ಪ್ರಮುಖರು ಮತ ಕೇಳುವುದಕ್ಕೆ ಬರುವಾದರೆ ದಯವಿಟ್ಟು ಬರಲೇಬೇಡಿ…ರಸ್ತೆ ಮತ್ತು ಮೂಲಭೂತ ಸೌಕರ್ಯಗಳನ್ನು ನೀಡಿ ಅಭಿವೃದ್ಧಿಯೊಂದಿಗೆ ಬನ್ನಿ ಎಂದು ಗ್ರಾಮಸ್ಥರು ಆಗ್ರಹಿಸುತ್ತಿದ್ದಾರೆ. ಈ ಗ್ರಾಮಕ್ಕೆ ಸುಮಾರು 2.5 ಕೀ.ಮೀ. ರಸ್ತೆಯ ಅವಶ್ಯಕತೆ ಇದೆ, ಪ್ರತಿವರ್ಷ ಗ್ರಾಮಸ್ಥರೇ ಸೇರಿ ರಸ್ತೆಗೆ ಮಣ್ಣು ತುಂಬಿಸಿ ರಸ್ತೆ ಮಾಡಿಕೊಂಡರು ಸುರಿಯುವ ಮಳೆಯಲ್ಲಿ ಮಣ್ಣು ಕೊಚ್ಚಿಕೊಂಡು ಹೋಗಿ ಬರಿ ಕಲ್ಲುಗಳು ರಸ್ತೆಯ ಮೇಲೆ ಉಳಿಯುವಂತಾಗಿದೆ.

ಆ ರಸ್ತೆಯಲ್ಲಿ ವಾಹನವಿರಲಿ ಕಾಲ್ನಡಿಗೆಯಲ್ಲಿ ಕೂಡ ಚಲಿಸಲು ಈ ರಸ್ತೆ ಯೋಗ್ಯವಾಗಿಲ್ಲ. ಮಳೆಗಾಲದಲ್ಲಿ ಸಂಪೂರ್ಣ ರಸ್ತೆ ಜಖಂಗೊಂಡು ವಾಹನಗಳು ಯಾವುದು ಬರುವುದಿಲ್ಲ , ಈ ಎಲ್ಲಾ ವಿಷಯಗಳು ಜನಪ್ರತಿನಿಧಿಗಳು, ಸ್ಥಳೀಯ ಮುಖಂಡರಿಗೂ ತಿಳಿದಿದ್ದರು ಅದರಿಂದ ಯಾವುದೇ ಉಪಯೋಗಗಳು ವಾಗಿಲ್ಲ.

ಆದ್ದರಿಂದ ಇಷ್ಟು ವರ್ಷಗಳು ಮತ ನೀಡಿಯೂ ಕೂಡ ಯಾವುದೇ ಮೂಲಭೂತ ಸೌಕರ್ಯಗಳು ಸಿಕ್ಕಿರುವುದಿಲ್ಲ ಅದಕ್ಕಾಗಿ ಮಾಗಲಿನ 43 ಜನರು ಚುನಾವಣಾ ಬಹಿಷ್ಕಾರಕ್ಕೆ ಮುಂದಾಗಿದ್ದಾರೆ.

ವಿಪರ್ಯಾಸವೆಂದರೆ ವಾರಾಹಿ ಹಿನ್ನೀರಿಗೆ ಡ್ಯಾಂ ನಿರ್ಮಾಣಕ್ಕೆ ಕಲ್ಲನ್ನು ಇದೆ ಮಾಗಲಿನಿಂದ ಸಾಗಿಸಿಕೊಂಡರು, ಅದೇ KPC ಅವರ ಕಡೆಯಿಂದಲೂ ನಮಗೆ ರಸ್ತೆ ಮಾಡಿಕೊಡದಿರುವುದು ಇವರ ದುರಾಡಳಿತಕ್ಕೆ ಹಿಡಿದ ಕೈಗನ್ನಡಿ.ಹಲವು ಬಾರಿ ಕೆಪಿಸಿ ಎಂಜಿನಿಯರ್ ಗಳನ್ನು ಭೇಟಿಮಾಡಿ ಮನವಿ ಸಲ್ಲಿಸಿದ್ದರು ಯಾವುದೇ ಪ್ರಯೋಜನವಾಗಿಲ್ಲ… ಆದ್ದರಿಂದ ಎಲ್ಲಾ ಗ್ರಾಮಸ್ಥರು ಬೇಸತ್ತು ಚುನಾವಣಾ ಬಹಿಷ್ಕಾರಕ್ಕೆ ಮುಂದಾಗಿರುವುದಾಗಿ ಗ್ರಾಮಸ್ಥರು ತಿಳಿಸಿದ್ದಾರೆ.

ಈ ಹಿಂದೆ ಇದೇ ತಾಲೂಕಿನ ವಾರಂಬಳ್ಳಿ ಗ್ರಾಮದಲ್ಲಿ ಚುನಾವಣ ಬಹಿಷ್ಕಾರ ಹಾಕಲಾಗಿತ್ತು. ಈಗ ಮತ್ತೊಂದು ಗ್ರಾಮದ ಚುನಾವಣ ಬಹಿಷ್ಕಾರದ ಫ್ಲೆಕ್ಸ್ ಹಾಕಲಾಗಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Mohare Hanumantharaya Award ಪ್ರಶಸ್ತಿ ಪುರಸ್ಕೃತ ಪತ್ರಕರ್ತ, ‘ಕ್ರಾಂತಿ ದೀಪ ‘ಮಂಜುನಾಥ್ ಅವರಿಗೆ ಸನ್ಮಾನ

Mohare Hanumantharaya Award ಪತ್ರಿಕೋದ್ಯಮದ ಪ್ರತಿಷ್ಠಿತ ಪ್ರಶಸ್ತಿಗಳಲ್ಲಿ ಒಂದಾದ ಮೊಹರೆ ಹಣಮಂತರಾಯ...

MESCOM ನವೆಂಬರ್ 23 .ಹೊಳಲೂರು ಸುತ್ತಮುತ್ತ ವಿದ್ಯುತ್ ಸರಬರಾಜು ವ್ಯತ್ಯಯ

MESCOM ಹೊಳಲೂರು ಗ್ರಾಮದ 66/11 ಕೆವಿ ವಿದ್ಯುತ್ ವಿತರಣಾ ಕೇಂದ್ರದಿಂದ ಸರಬರಾಜಾಗುವ...

Rotary Club Shimoga ಪ್ರೌಢಾವಸ್ಥೆಯು ದೇಹದಲ್ಲಿ ಅನೇಕ ಬದಲಾವಣೆ ತರುತ್ತದೆ.ಅದನ್ನ ಗಮನಿಸಬೇಕು- ಡಾ.ಮೋಕ್ಷಾ

Rotary Club Shimoga ರೋಟರಿ ಸಂಸ್ಥೆಯು ನಿಸ್ವಾರ್ಥವಾಗಿ ವಿಶ್ವದ ಎಲ್ಲ ಭಾಗಗಳಲ್ಲಿ...

M.B.Patil 2025 ಫೆಬ್ರವರಿ 11.ಜಾಗತಿಕ ಹೂಡಿಕೆದಾರರ ಸಮಾವೇಶ.ಪೂರ್ವಸಿದ್ಧತೆ- ಸಚಿವ ಎಂ.ಬಿ.ಪಾಟೀಲ್

M.B.Patil 2025ರ ಫೆಬ್ರವರಿ 11 ರಿಂದ 14ರ ವರೆಗೆ ಬೆಂಗಳೂರಿನಲ್ಲಿ ನಡೆಯಲಿರುವ...