J.P. Nadda ಏ. 30ರಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರು ಶಿವಮೊಗ್ಗ ಆಗಮಿಸಲಿದ್ದು, ರಾಷ್ಟ್ರೀಯತೆಯ ಬಗ್ಗೆ ಕಾರ್ಯಕರ್ತರಲ್ಲಿ ಹುಮ್ಮಸ್ಸು ತುಂಬಲಿದ್ದಾರೆ ಎಂದು ಸಂಸದ ಬಿ.ವೈ. ರಾಘವೇಂದ್ರ ಹೇಳಿದ್ದಾರೆ.
ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಾತಾವರಣ ದಿನದಿಂದ ದಿನಕ್ಕೆ ಬಿಜೆಪಿ ಪರ ವೃದ್ಧಿಯಾಗುತ್ತಿದ್ದು, ಅತಿ ಹೆಚ್ಚಿನ ಅಂತರದಲ್ಲಿ ಗೆಲುವು ಸಾಧಿಸಲಿದ್ದೇವೆ ಎಂದರು.
ನಿನ್ನೆ ನಡೆದ ಮತದಾನದಲ್ಲಿ ಶೇಕಡವಾರು ಮತ ಚಲಾವಣೆ ಕಡಿಮೆಯಾಗಿದೆ. ಬೆಂಗಳೂರಿನಲ್ಲಿ ಒಟ್ಟಾರೆಯಾಗಿ ಶೇ. ೬ರಷ್ಟು ಕಡಿಮೆಯಾಗಿದೆ. ಇದು ಹೆಚ್ಚಾಗಬೇಕು. ಹೀಗಾಗಿ ಜನರು ಪೋಲಿಂಗ್ ಬೂತ್ ಗೆ ಬಂದು ಮತ ಚಲಾವಣೆ ಮಾಡಬೇಕಿದೆ. ಯುವಕರು ಕೂಡ ಹೆಚ್ಚಾಗಿ ಬಂದು ಮತದಾನ ಮಾಡಬೇಕು. ತುಮಕೂರಿನಲ್ಲಿ ವೃದ್ಧೆಯೊಬ್ಬರು ಮನೆಗೆ ಹೋಗಿ ಮತ ಹಾಕಿಸಲು ತೆರಳಿದಾಗ ನಿರಾಕರಿಸಿ ಮತದಾನ ಕೇಂದ್ರಕ್ಕೇ ಬಂದು ಮತ ಹಾಕಿ ಮನೆಗೆ ತೆರಳಿದ ಮೇಲೆ ನಿಧನರಾಗಿದ್ದಾರೆ. ಅವರು ಮತದಾನದ ಜಗೃತಿ ಮೂಡಿಸಿದ್ದಾರೆ ಎಂದರು.
J.P. Nadda ಕಾಂಗ್ರೆಸ್ ನವರು ಗ್ಯಾರಂಟಿ ಯೋಜನೆಗಳ ಮುಖಾಂತರ ತಲುಪಲು ಯತ್ನಿಸುತ್ತಿದೆ. ಆದರೆ ಅದು ಸಫಲವಾಗಲ್ಲ. ಮಹಿಳೆಯರಿಗೆ 1 ಲಕ್ಷ ರೂ. ನೀಡುವ ಭರವಸೆ ನೀಡಿದ್ದಾರೆ. ಆದರೆ ನಮ್ಮ ದೇಶದಲ್ಲಿ 68ಕೋಟಿ ಮಹಿಳೆಯರಿದ್ದು, 68 ಲಕ್ಷ ಕೋಟಿ ಹಣ ಬೇಕಾಗುತ್ತದೆ. ದೇಶದ ಬಜೆಟ್ ಇರುವುದೇ 48 ಲಕ್ಷ ಕೋಟಿ ರೂ. ಉಳಿದ ಹಣ ಎಲ್ಲಿಂದ ತರುತ್ತಾರೆ ಇದು ಬೋಗಸ್ ಗ್ಯಾರಂಟಿ. ಮೋದಿ ಗ್ಯಾರಂಟಿಯೇ ಶಾಶ್ವತ ಗ್ಯಾರಂಟಿಯಾಗಿದ್ದು ರಾಷ್ಟ್ರದ ಭದ್ರತೆಯ ದೃಷ್ಟಿಯಿಂದ ಮೋದಿ ಗ್ಯಾರಂಟಿಯೇ ಬೇಕು ಎಂದರು.
J.P. Nadda ಏಪ್ರಿಲ್ 30 ರಂದು ಶಿವಮೊಗ್ಗದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಭಾರೀ ಬಹಿರಂಗ ಸಭೆಯಲ್ಲಿ ಭಾಗಿ
Date: