Lok Sbha Election 14-ಶಿವಮೊಗ್ಗ ಲೋಕಸಭಾ ಕ್ಷೇತ್ರದ ಎಲ್ಲ ಸಹಾಯಕ ಚುನಾವಣಾಧಿಕಾರಿಗಳು ಇವಿಎಂ ಸಿದ್ದತೆ, ತರಬೇತಿ ಮತ್ತು ಮತದಾನದಂದು ಖಚಿತ ಕನಿಷ್ಟ ಸೌಲಭ್ಯಗಳ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಸಹಾಯಕ ಚುನಾವಣಾಧಿಕಾರಿಗಳಿಗೆ ಸೂಚನೆ ನೀಡಿದರು.
ಇಂದು ಜಿಲ್ಲಾಡಳಿತ ಕಚೇರಿಯಲ್ಲಿ ಸಹಾಯಕ ಚುನಾವಣಾಧಿಕಾರಿಗಳೊಂದಿಗೆ ಏರ್ಪಡಿಸಲಾಗಿದ್ದ ವಿಡಿಯೋ ಕಾನ್ಫರೆನ್ಸ್ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಚುನಾವಣಾಧಿಕಾರಿಗಳು ಅಂಚೆ ಮತದಾನದ ಕಡೆ ಹೆಚ್ಚಿನ ಗಮನ ಹರಿಸಿ, ಎಚ್ಚರಿಕೆಯಿಂದ ಕರ್ತವ್ಯ ನಿರ್ವಹಿಸಬೇಕು. ಜೊತೆಗೆ ಇವಿಎಂ ಸಿದ್ದಪಡಿಸುವಿಕೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕು. ಚುನಾವಣೆಯಲ್ಲಿ ಎರಡು ಬ್ಯಾಲಟ್ ಪೇಪರ್ ಇರುವ ಕಾರಣ ಅತ್ಯಂತ ಜಾಗರೂಕತೆಯಿಂದ ತಮ್ಮ ಕರ್ತವ್ಯ ನಿರ್ವಹಿಸಬೇಕು. ಹಾಗೂ ಚುನಾವಣಾ ನಿಯೋಜಿತ ಅಧಿಕಾರಿ/ಸಿಬ್ಬಂದಿಗಳ ಎರಡನೇ ತರಬೇತಿಯನ್ನು ಪರಿಣಾಮಕಾರಿಯಾಗಿ ನಡೆಸಬೇಕು ಎಂದರು.
Lok Sbha Election ಅಧಿಕಾರಿಗಳು ಮತಗಟ್ಟೆಗಳಿಗೆ ಭೇಟಿ ನೀಡಿ, ಮತದಾನದಂದು ಮತಗಟ್ಟೆಗಳಲ್ಲಿ ನೀಡಬೇಕಾದ ಖಚಿತ ಕನಿಷ್ಟ ಸೌಲಭ್ಯಗಳಾದ ರ್ಯಾಂಪ್, ಕುಡಿಯುವ ನೀರು, ಪೀಠೋಪಕರಣಗಳ ವ್ಯವಸ್ಥೆ, ಕ್ಯೂ ನಿರ್ವಹಣೆ ಸೇರಿದಂತೆ ಇತರೆ ಮೂಲಭೂಸ ಸೌಕರ್ಯಗಳ ಕುರಿತು ಖಾತ್ರಿಪಡಿಸಿಕೊಂಡು ಕ್ರಮ ವಹಿಸಬೇಕು.
ಎಲ್ಲ ತಾಲ್ಲೂಕುಗಳಲ್ಲಿ ಚುನಾವಣಾ ನಿಯೋಜಿತ ಅಧಿಕಾರಿಗಳಿಂದ ನಮೂನೆ 12 ಅಂಚೆ ಮತಪತ್ರವನ್ನು ಪಡೆಯಲಾಗುತ್ತಿದ್ದು, ಬಾಕಿ ಇರುವ ಮತಪತ್ರಗಳನ್ನು ಇನ್ನು 3-4 ದಿನಗಳಲ್ಲಿ ನೀಡಿ 12ಎ ಇಡಿಸಿ ಯನ್ನು ಪಡೆದುಕೊಳ್ಳುವಂತೆ ಸಹಾಯಕ ಚುನಾವಣಾಧಿಕಾರಿಗಳಿಗೆ ಸೂಚನೆ ನೀಡಿದರು.
ಬಿಎಲ್‍ಓ ಗಳು ಮತಗಟ್ಟೆಗಳಲ್ಲಿ ಮತದಾರ ಮಾಹಿತಿ ಸ್ಲಿಪ್‍ಗಳನ್ನು ಹಂಚಬೇಕು. ಸಹಾಯಕ ಚುನಾವಣಾಧಿಕಾರಿಗಳು ಈ ಕುರಿತು ಪರಿಶೀಲಿಸಬೇಕು ಎಂದು ಸೂಚಿಸಿದರು.
Lok Sbha Election ವಿಡಿಯೋ ಕಾನ್ಫರೆನ್ಸ್ ಮೂಲಕ ಸಹಾಯಕ ಚುನಾವಣಾಧಿಕಾರಿಗಳಿಗೆ ಜಿಲ್ಲಾಧಿಕಾರಿಗಳಿಂದ ಮಹತ್ವದ ಸೂಚನೆಗಳು
Date: