Wednesday, February 4, 2026
Wednesday, February 4, 2026

B.Y.Vijayendra ಹಿರಿಯರು ಯಾಕೋ ಅಡ್ಡದಾರಿ ಹಿಡಿದಿದ್ದಾರೆ.ಪಕ್ಷದ ಕಾರ್ಯಕರ್ತರು ಅವರಿಗೆ ಕೈ ಜೋಡಿಸಿಲ್ಲ- ಬಿ.ವೈ.ವಿಜಯೇಂದ್ರ

Date:

B.Y.Vijayendra ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಕೆಎಸ್‌ ಈಶ್ವರಪ್ಪ ನವರ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಶಿಕಾರಿಪುರದದಲ್ಲಿ ಹುಚ್ಚರಾಯಸ್ವಾಮಿ ದೇವಸ್ಥಾನದ ಜಾತ್ರೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಈಶ್ವರಪ್ಪನವರು ಉಚ್ಚಾಟನೆಯನ್ನು ಬಯಸಿದ್ದರು ಎಂತಾದರೆ ರೋಗಿ ಬಯಸಿದ್ದು ಹಾಲ ಅನ್ನ ವೈದ್ಯ ಹೇಳಿದ್ದು ಹಾಲು ಅನ್ನ ಎಂಬಂತಾಗಿದೆ, ತುಂಬಾ ಸಂತೋಷ ಅವರಿಗೆ ದೇವರು ಒಳ್ಳೆಯದು ಮಾಡಲಿ. ಕೆಎಸ್‌ ಈಶ್ವರಪ್ಪನವರು ಹಿರಿಯರು, ಪಕ್ಷ ಸಂಘಟನೆ ಮಾಡಿದ್ದವರು. ಯಾಕೋ ಅವರು ಅಡ್ಡದಾರಿ ಹಿಡಿದಿದ್ದಾರೆ. ಅವರಿಗೆ ಪಕ್ಷದ ಕಾರ್ಯಕರ್ತರು ಅವರಿಗೆ ಕೈ ಜೋಡಿಸಿಲ್ಲ ಎಂದರು.

ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಜನರಲ್ಲಿ ಸ್ಪಷ್ಟತೆಯಿದ್ದು ಬಿ.ವೈ ರಾಘವೇಂದ್ರರವರಿಗೆ ಆಶೀರ್ವಾದ ಮಾಡುತ್ತಾರೆ. ಅತಿಹೆಚ್ಚು ಮತಗಳಿಂದ ಅವರು ಆಯ್ಕೆಯಾಗಲಿದ್ದಾರೆ ಎಂದಿದ್ದಾರೆ.

B.Y.Vijayendra ರಾಜ್ಯದ ರಾಜಕೀಯ ಚಿತ್ರಣ ಸಂಪೂರ್ಣ ಬದಲಾಗಿದೆ. ಚುನಾವಣೆಯಲ್ಲಿ ಜನರ ಕಣ್ಣಿಗೆ ಮಣ್ಣೆರಚಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ನ ಆಡಳಿತವನ್ನು ನೋಡಿ ಜನ ಬೇಸತ್ತಿದ್ದಾರೆ ಎಂದು ಹೇಳಿದರು.ದೇಶದಲ್ಲಿ ಮಹಾ ಚುನಾವಣೆ ನಡೆಯುತ್ತಿದ್ದು ನರೇಂದ್ರ ಮೋದಿ ಮೂರನೇ ಬಾರಿಗೆ ದೇಶದ ಪ್ರಧಾನಿ ಆಗಬೇಕು ಎಂಬ ಉತ್ಸುಕತೆ ಜನರಲ್ಲಿದೆ. ಜೆಡಿಎಸ್ ಮತ್ತು ಬಿಜೆಪಿಯನ್ನು ಬೆಂಬಲಿಸಲು ಜನ ನಿರ್ಧರಿಸಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Narayana Super Specialty Hospital ನಾರಾಯಣ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಮೂಳೆ ಸಾಂದ್ರತೆ ಉಚಿತ ತಪಾಸಣೆ ಶಿಬಿರ

Narayana Super Specialty Hospital ಸಾರ್ವಜನಿಕರಲ್ಲಿ ಮೂಳೆ ಆರೋಗ್ಯದ ಬಗ್ಗೆ ಜಾಗೃತಿ...